ಮೈಸೂರು: ಮೈಸೂರಿನ ವಿವಿಧೆಡೆ ಬುಧವಾರ ಸರ್ವೋದಯ ದಿನ ಆಚರಿಸಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಆತ್ಮಕ್ಕೆ ಶಾಂತಿ ಕೋರಿ ಗೌರವ ನಮನ ಸಲ್ಲಿಸಲಾಯಿತು. ಮೈಸೂರು ಜಿಲ್ಲಾಡಳಿತ, ಮೈಸೂರು ಜಿಲ್ಲೆ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘ, ಮೈಸೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗ ಹಾಗೂ ವಿವಿಧ ಕಾಲೇಜುಗಳಲ್ಲಿ 71ನೇ ಸರ್ವೋದಯ ದಿನವನ್ನು ಆಚರಿಸುವ ಮೂಲಕ ರಾಷ್ಟ್ರಪಿತನನ್ನು ಸ್ಮರಿಸಿದರು. ಜಿಲ್ಲಾಡಳಿತ: ಡಿಸಿ ಕಚೇರಿ ಸಭಾಂಗಣ ದಲ್ಲಿ ಸರ್ವೋದಯ ದಿನ ಹಿನ್ನೆಲೆಯಲ್ಲಿ ಮೌನಾಚರಣೆ ಬಳಿಕ, ಗಾಂಧೀಜಿ ತತ್ವಾ ದರ್ಶ ಪಾಲನೆಯ ಪ್ರತಿಜ್ಞೆ…
ಗಾಂಜಾ ಮಾರುತ್ತಿದ್ದ ವ್ಯಕ್ತಿ ಸೆರೆ
January 31, 2019ಮೈಸೂರು: ಮೈಸೂರಿನ ಮಂಡಿ ಮೊಹಲ್ಲಾದ ಕೈಲಾಸಪುರಂ ಸರ್ಕಾರಿ ಶಾಲೆ ಹಿಂಭಾಗ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ. ಮೈಸೂರಿನ ಕೆಸರೆ 2ನೇ ಹಂತದ ಉಸ್ಮಾನಿಯಾ ಬ್ಲಾಕ್ ನಿವಾಸಿ ಅಸ್ಗರ್ ಪಾಷ ಅವರ ಮಗ ಅಪ್ಸರ್ ಪಾಷ(24) ಬಂಧಿತನಾಗಿದ್ದು, ಆತನಿಂದ 310 ಗ್ರಾಂ ಗಾಂಜಾ ಹಾಗೂ 10,500 ರೂ. ನಗದನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಕೈಲಾಸಪುರಂ ಪ್ರೌಢಶಾಲೆ ಹಿಂಭಾಗ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಬಳಿ ನಿಂತು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆತನನ್ನು, ಮಾಹಿತಿ ಆಧರಿಸಿ ಕಾರ್ಯಾಚರಣೆ…
ಲೋಕಸಭೆ ಚುನಾವಣೆಗೂ ಮುನ್ನ ಭಾರತದಲ್ಲಿ ಕೋಮುಗಲಭೆ ಸಾಧ್ಯತೆ ಅಮೆರಿಕ ಗುಪ್ತಚರ ಇಲಾಖೆ ವರದಿ
January 31, 2019ವಾಷಿಂಗ್ಟನ್: ಭಾರತದಲ್ಲಿ ಸದ್ಯ ಆಡಳಿತ ನಡೆಸುತ್ತಿರುವ ಬಿಜೆಪಿ ಹಿಂದುತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದರೇ ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೋಮು ಗಲಭೆ ಉಂಟಾಗುವ ಸಾಧ್ಯತೆ ಇದೆ ಎಂದು ಅಮೆರಿಕಾ ಗುಪ್ತಚರ ಇಲಾಖೆ ವರದಿ ಮಾಡಿದೆ. 2019ರಲ್ಲಿ ಜಗತ್ತಿನಲ್ಲಿ ಉಂಟಾಗಬಹುದಾದ ಅಪಾಯ ಸಂದರ್ಭಗಳ ಪರಿಶೀಲನೆ ಕೈಗೊಂಡಿರುವ ಅಮೆರಿಕಾ ಗುಪ್ತಚರ ಇಲಾಖೆ ಭಾರತದಲ್ಲಿ ಕೋಮು ಗಲಭೆ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ. ಈ ವರದಿಯನ್ನು ಅಮೆರಿಕಾ ಸೆನೆಟ್‍ಗೆ ತಿಳಿಸಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ…
ಬೀದಿ ನಾಯಿ ದಾಳಿ: ಯುವಕನಿಗೆ ಗಾಯ
January 31, 2019ಮೈಸೂರು: ಮೂತ್ರ ವಿಸರ್ಜನೆ ವೇಳೆ ಯುವಕನ ಮೇಲೆ ನಾಯಿ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸಿರುವ ಘಟನೆ ಯಾದವಗಿರಿ ಚೆಲುವಾಂಬ ಉದ್ಯಾನವನದ ಬಳಿ ಬುಧವಾರ ಸಂಜೆ ನಡೆದಿದೆ. ರಾಜಸ್ಥಾನ ಮೂಲದ ಗೋಕುಲಂ ನಿವಾಸಿ, ಪಾನೀಪುರಿ ವ್ಯಾಪಾರಿ ಶಿವ ಕುಮಾರ್(22), ಬುಧವಾರ ಸಂಜೆ ಚೆಲುವಾಂಬ ಉದ್ಯಾನವನದ ಬಳಿ ಪಾನೀಪುರಿ ವ್ಯಾಪಾರ ಮಾಡುತ್ತಿದ್ದು, ಮೂತ್ರವಿಸರ್ಜನೆ ಮಾಡಲು ರಸ್ತೆ ಪಕ್ಕದಲ್ಲಿದ್ದ ಖಾಲಿ ಜಾಗಕ್ಕೆ ತೆರಳಿದ್ದಾರೆ. ಈ ವೇಳೆ ನಾಯಿ ದಾಳಿ ನಡೆಸಿ, ಕಾಲಿನ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ. ಇದನ್ನು ಕಂಡ ಸಾರ್ವಜನಿಕರು ಯುವಕನ…
ಫೆ.6, ಮೈಸೂರು ಜಿಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿ
January 31, 2019ಮೈಸೂರು: ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಫೆ.6ರಂದು ಚುನಾವಣೆ ನಡೆಸಲು ನಿಗದಿಯಾಗಿದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಪಂ ಸಿಇಓ ಕೆ.ಜ್ಯೋತಿ ಇಂದಿಲ್ಲಿ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಈ ಸಂಬಂಧ ಈಗಾಗಲೇ ಜಿಪಂನ ಪಕ್ಷವಾರು ಸದಸ್ಯರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರ ಕಚೇರಿಗೆ ಕಳುಹಿಸಲಾಗಿದೆ. ಅಲ್ಲದೆ ಪಂಚಾಯಿತಿಯ ಎಲ್ಲಾ ಸದಸ್ಯರಿಗೂ ಚುನಾವಣೆಯ ನೋಟೀಸು ಕಳುಹಿಸಲಾಗಿದೆ ಎಂದು ಹೇಳಿದರು. ನಯೀಮಾ ಸುಲ್ತಾನಾ ಮತ್ತು ಕೆ.ನಟರಾಜು ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ತೆರವಾಗಿದೆ. ಹೀಗಾಗಿ ಫೆ.6ರಂದು…
ನರ್ಸ್ ನಿರ್ಲಕ್ಷ್ಯದಿಂದ ಪತ್ನಿ ಸಾವು
January 31, 2019ಮೈಸೂರು: ಹೆರಿಗೆ ಸಂದರ್ಭದಲ್ಲಿ ನರ್ಸ್‍ವೊಬ್ಬರ ನಿರ್ಲಕ್ಷ್ಯತೆಯಿಂದ ತನ್ನ ಗರ್ಭಿಣಿ ಪತ್ನಿ ಸಾವನ್ನಪ್ಪಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಂತಿನಗರದ ನಿವಾಸಿ ಇಮ್ರಾನ್ ಅಹಮದ್, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ (ಡಿಹೆಚ್‍ಓ) ಮನವಿ ಸಲ್ಲಿಸಿದ್ದಾರೆ. ಮೈಸೂರಿನ ನಜರ್‍ಬಾದಿನಲ್ಲಿರುವ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಇಮ್ರಾನ್ ಅಹಮದ್, ಪತ್ನಿ ಯಾಸ್ಮೀನ್ ತಾಜ್ (30) ಸಾವಿಗೆ ನರ್ಸ್‍ವೊಬ್ಬರ ಬೇಜವಾಬ್ದಾರಿತನವೇ ಕಾರಣ. ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜ.12ರಂದು ಬೆಳಿಗ್ಗೆ ಮೈಸೂರಿನ ಕ್ಯಾತ ಮಾರನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿನ…
ನಾಳೆ ಮೈಸೂರಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ
January 31, 2019ಮೈಸೂರು: ಜಿಲ್ಲಾಡಳಿತ, ಶ್ರೀಮಡಿವಾಳ ಮಾಚಿದೇವರ ಜಯಂ ತ್ಯೋತ್ಸವ ಸಮಿತಿ ವತಿಯಿಂದ ಫೆ.1ರಂದು ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಆಯೋಜಿಸಲಾಗಿದೆ ಎಂದು ಸಮಿತಿ ಸದಸ್ಯ ಎಂ.ರಾಜು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೈಸೂರಿನ ಕಲಾಮಂದಿರ ದಲ್ಲಿ ಅಂದು ಬೆಳಿಗ್ಗೆ 10ಕ್ಕೆ ಜಯಂತ್ಯೋತ್ಸವ ಏರ್ಪಡಿಸಲಾಗಿದೆ. ಇದಕ್ಕೂ ಮುನ್ನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕಲಾಮಂದಿರದವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳ ಸಹಿತ ನಡೆಯಲಿರುವ ಮೆರವಣಿಗೆಗೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ…
ಪರೀಕ್ಷೆ ಜೀವನದ ಪರೀಕ್ಷೆಯಲ್ಲ!
January 30, 2019ನವದೆಹಲಿ: ಪರೀಕ್ಷೆ ಜೀವನದಲ್ಲಿ ಮಹತ್ವದಾಗಿದೆ. ಆದರೆ ಇದು ಜೀವನದ ಪರೀಕ್ಷೆಯಲ್ಲ. ಇದು ಕೇವಲ ಪಠ್ಯದ ಪರೀಕ್ಷೆ. ಹಾಗಾಗಿ ಮಕ್ಕಳು ಹೆಚ್ಚು ಒತ್ತಡಕ್ಕೆ ಸಿಲುಕಿ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಈ ವಿಚಾರದಲ್ಲಿ ಪೋಷಕರು ಮಕ್ಕಳನ್ನು ಸದಾ ಪ್ರೋತ್ಸಾಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ತಾಲ್ ಕಠೋರಾ ಸ್ಟೇಡಿಯಂನಲ್ಲಿ ನರೇಂದ್ರ ಮೋದಿ `ಪರೀಕ್ಷೆ ಪೇ ಚರ್ಚಾ 2.0 ಸಂವಾದ ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಜೊತೆ ಸಂವಾದ ನಡೆಸಿದರು. ಪರೀಕ್ಷೆ ದೊಡ್ಡ ಸವಾಲು…
ಒಂದೇ ಕಾಮಗಾರಿಗೆ ಎರಡು ಬಿಲ್: 1.40 ಕೋಟಿ ಗುಳುಂ
January 30, 2019ಮೈಸೂರು: ಒಂದೇ ಕಾಮಗಾರಿಗೆ 2 ಬಾರಿ ಬಿಲ್ ನೀಡುವ ಮೂಲಕ 1.40 ಕೋಟಿ ರೂ. ಭ್ರಷ್ಟಾಚಾರ ನಡೆಸಿರುವ ಸಂಗತಿ ಮೈಸೂರು ನಗರಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಬಯಲಾಗಿದೆ. ನಗರಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ ದಲ್ಲಿ ಮಂಗಳವಾರ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಒಂದೇ ಕಾಮಗಾರಿಗೆ 2 ಬಾರಿ ಬೋಗಸ್ ಬಿಲ್ ನೀಡಿ, 1.40 ಕೋಟಿ ರೂ. ಭ್ರಷ್ಟಾಚಾರ ನಡೆಸಿರುವ ಆರೋಪದಡಿ ವಲಯ ಕಚೇರಿ-1ರ ಸಹಾಯಕ ಆಯುಕ್ತ ಸುನಿಲ್ ಬಾಬು ಹಾಗೂ ಕಿರಿಯ ಇಂಜಿನಿಯರ್ ಮೋಹನ್…
ಆಟೋ ಚಾಲಕ ಮನು ಹತ್ಯೆಗೈದ ಪ್ರಕರಣ: 12 ಗಂಟೆಯೊಳಗೆ ಮೂವರ ಬಂಧನ
January 30, 2019ಮೈಸೂರು: ನಿನ್ನೆ ಮಧ್ಯ ರಾತ್ರಿ ಚಾಕುವಿನಿಂದ ಇರಿದು ಆಟೋ ಚಾಲಕ ಮನು ಅಲಿಯಾಸ್ ಜಾನಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಮೂವರನ್ನು ಘಟನೆ ನಡೆದ 12 ಗಂಟೆ ಯೊಳಗೆ ಬಂಧಿಸುವಲ್ಲಿ ಲಕ್ಷ್ಮೀಪುರಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಗುಂಡೂರಾವ್ ನಗರ ಹಾಗೂ ಮುನೇಶ್ವರ ನಗರದ ಅಪ್ಪು, ಯೋಗೇಂದ್ರ ಹಾಗೂ ಮಧು ಬಂಧಿತ ಆರೋಪಿಗಳು. ಭಾನುವಾರ ಮಧ್ಯ ರಾತ್ರಿ ಮಹಾರಾಜ ಕಾಲೇಜು ಮೈದಾನದ ಬಳಿ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಎದುರು ರೈಲ್ವೇ ಅಂಡರ್ ಬ್ರಿಡ್ಜ್ ಅಡಿ ಜಾನಿಯನ್ನು…