ಮೈಸೂರಿನ ವಿವಿಧೆಡೆ `ಸರ್ವೋದಯ ದಿನ’ ಆಚರಣೆ
ಮೈಸೂರು

ಮೈಸೂರಿನ ವಿವಿಧೆಡೆ `ಸರ್ವೋದಯ ದಿನ’ ಆಚರಣೆ

January 31, 2019

ಮೈಸೂರು: ಮೈಸೂರಿನ ವಿವಿಧೆಡೆ ಬುಧವಾರ ಸರ್ವೋದಯ ದಿನ ಆಚರಿಸಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಆತ್ಮಕ್ಕೆ ಶಾಂತಿ ಕೋರಿ ಗೌರವ ನಮನ ಸಲ್ಲಿಸಲಾಯಿತು. ಮೈಸೂರು ಜಿಲ್ಲಾಡಳಿತ, ಮೈಸೂರು ಜಿಲ್ಲೆ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘ, ಮೈಸೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗ ಹಾಗೂ ವಿವಿಧ ಕಾಲೇಜುಗಳಲ್ಲಿ 71ನೇ ಸರ್ವೋದಯ ದಿನವನ್ನು ಆಚರಿಸುವ ಮೂಲಕ ರಾಷ್ಟ್ರಪಿತನನ್ನು ಸ್ಮರಿಸಿದರು.

ಜಿಲ್ಲಾಡಳಿತ: ಡಿಸಿ ಕಚೇರಿ ಸಭಾಂಗಣ ದಲ್ಲಿ ಸರ್ವೋದಯ ದಿನ ಹಿನ್ನೆಲೆಯಲ್ಲಿ ಮೌನಾಚರಣೆ ಬಳಿಕ, ಗಾಂಧೀಜಿ ತತ್ವಾ ದರ್ಶ ಪಾಲನೆಯ ಪ್ರತಿಜ್ಞೆ ಸ್ವೀಕರಿಸಲಾ ಯಿತು. ವಿಜಯ ವಿಠಲ ಶಾಲೆ ವಿದ್ಯಾರ್ಥಿ ಗಳು ಭಜನೆ ನಡೆಸಿಕೊಟ್ಟರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಗಾಂಧೀಜಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅಧಿಕಾರಿ ಗಳಿಗೆ ಸರ್ವೋದಯ ಪ್ರತಿಜ್ಞಾವಿಧಿ ಬೋಧಿ ಸಿದರು. ಎಡಿಸಿ ಪೂರ್ಣಿಮಾ, ಉಪ ವಿಭಾಗಾಧಿಕಾರಿ ಹೆಚ್.ಎನ್.ಶಿವೇಗೌಡ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಶಿವಣ್ಣ, ಜಿಪಂ ಯೋಜನಾಧಿಕಾರಿ ಪ್ರಭುಸ್ವಾಮಿ, ತಹಸಿಲ್ದಾರ್ ಟಿ.ರಮೇಶ್ ಬಾಬು, ಮುಜರಾಯಿ ತಹಸಿಲ್ದಾರ್ ಯತಿರಾಜು ಇನ್ನಿತರರು ಉಪಸ್ಥಿತರಿದ್ದರು.

ಜಾಥಾ: ಮೈಸೂರು ವಿವಿಯ ಸಮಾಜ ಕಾರ್ಯ ವಿಭಾಗದಿಂದ ಸರ್ವೋದಯ ಜಾಥಾ ನಡೆಸಿ ಗಾಂಧೀಜಿ ತತ್ವಆದರ್ಶ ಸಾರಲಾಯಿತು. ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ ವಿಭಾಗದ ಎಲ್ಲಾ ವಿದ್ಯಾರ್ಥಿ ಗಳು `ರಘುಪತಿ ರಾಘವ ರಾಜಾರಾಮ, ಪತೀತ ಪಾವನ ಸೀತರಾಮ್’ ಸೇರಿದಂತೆ ವಿವಿಧ ಭಜನೆ ಮಾಡುತ್ತಾ ಮಾನಸ ಗಂಗೋತ್ರಿಯ ಆವರಣದಲ್ಲಿ ಜಾಥಾ ನಡೆಸಿ ಗಾಂಧೀಜಿಯನ್ನು ಸ್ಮರಿಸಿದರು. ವಿದ್ಯಾರ್ಥಿ ಯೊಬ್ಬ ಗಾಂಧಿ ವೇಷ ತೊಟ್ಟು ಜಾಥಾ ದಲ್ಲಿ ಪಾಲ್ಗೊಂಡು ಗಮನ ಸೆಳೆದನು. ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಆರ್. ಶಿವಪ್ಪ, ಚಂದ್ರ ಮೌಳಿ, ವಿದ್ಯಾರ್ಥಿ ವೇದಿಕೆ ಸಂಯೋಜಕಿ ಡಾ.ಹೆಚ್.ಪಿ.ಜ್ಯೋತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುಬ್ಬರಾಯನಕೆರೆ : ಮೈಸೂರು ಜಿಲ್ಲೆ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ಸುಬ್ಬರಾಯನ ಕೆರೆಯಲ್ಲಿ ರುವ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಆವರಣದಲ್ಲಿ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಲಾಯಿತು. ಬಳಿಕ ವಂದೇ ಮಾತರಂ ಹಾಗೂ ರಾಷ್ಟ್ರಗೀತೆ ಹಾಡಲಾಯಿತು.

ಸ್ವಾತಂತ್ರ್ಯ ಹೋರಾಟಗಾರ ಟಿ.ವೆಂಕಟಾ ಚಲಯ್ಯ, ಸಂಘದ ಅಧ್ಯಕ್ಷ ಡಾ.ಎಂ.ಜಿ. ಕೃಷ್ಣಮೂರ್ತಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರ ಬಿ.ಶ್ರೀಕಂಠಯ್ಯ, ಪಾಲಿಕೆ ಸದಸ್ಯೆ ಪ್ರಮೀಳಾ, ಬಿ.ಕರುಣಾಕರ್ ಮತ್ತಿತರರು ಉಪಸ್ಥಿತರಿದ್ದರು.

ಸೋಮಾನಿ ಕಾಲೇಜು: ಕುವೆಂಪುನಗರ ದಲ್ಲಿರುವ ಬಾಸುದೇವ ಸೋಮಾನಿ ಕಾಲೇ ಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಹಾಗೂ ಇತಿಹಾಸ ವಿಭಾಗದಲ್ಲಿ 71ನೇ ಸರ್ವೋದಯ ದಿನ ಆಚರಿಸಲಾಯಿತು.

ಪ್ರಾಂಶುಪಾಲ ಡಾ.ಎಂ.ಮಹದೇವಯ್ಯ, ಇತಿಹಾಸ ಪ್ರಾಧ್ಯಾಪಕ ಡಾ. ಎಸ್.ಎಸ್. ರಾಜೇ ಅರಸ್, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಟರಾಜ ಕಾಲೇಜು: ಹೊಸ ಮಠದ ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸರ್ವೋ ದಯ ದಿನದ ಪ್ರತಿಜ್ಞಾ ವಿಧಿ ಬೋಧಿಸ ಲಾಯಿತು. ಪ್ರಾಂಶುಪಾಲೆ ಕೆ.ಎನ್.ರಾಣಿ, ಉಪ ಪ್ರಾಂಶುಪಾಲ ವಿ.ಪ್ರದೀಪ್, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ವಿ.ಡಿ. ಸುನೀತಾರಾಣಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

 

Translate »