ಮುಕ್ತ ಮಾರುಕಟ್ಟೆಯಲ್ಲಿ `ಸರ್ವೋದಯ’ ಚಿಂತನೆ ತೆರೆಮರೆಗೆ
ಮೈಸೂರು

ಮುಕ್ತ ಮಾರುಕಟ್ಟೆಯಲ್ಲಿ `ಸರ್ವೋದಯ’ ಚಿಂತನೆ ತೆರೆಮರೆಗೆ

January 31, 2019

ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟು ಸರ್ವೋದಯದ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿ ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿ ಕೊಳ್ಳದ ಜನರು ಜಾಗತೀಕರಣದ ಪ್ರಭಾವ ದಿಂದಾಗಿ ಹೆಚ್ಚು ಸಂಪಾದನೆಯತ್ತ ಮುಖ ಮಾಡಿದ್ದಾರೆ ಎಂದು ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ವಿಷಾದಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಭವನದ ಆವರಣದಲ್ಲಿ ಬುಧವಾರ ಗಾಂಧಿ ಅಧ್ಯಯನ ಕೇಂದ್ರ ಹಾಗೂ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದ ಸಂಯುಕ್ತಾಶ್ರಯ ದಲ್ಲಿ ಜರುಗಿದ 71ನೇ ಸರ್ವೋದಯ ದಿನಾ ಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮಹಾತ್ಮ ಗಾಂಧೀಜಿ ಅವರ ಶ್ರಮ, ತ್ಯಾಗ ಮಹತ್ತರ ದ್ದಾಗಿದೆ. ಅವರ ಆದರ್ಶ ಪಾಲಿಸುವುದು ಎಲ್ಲರ ಕರ್ತವ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಜಾಗತೀಕರಣ, ಮುಕ್ತ ಮಾರುಕಟ್ಟೆ ಪ್ರಭಾವಕ್ಕೆ ಒಳಗಾಗಿದ್ದಾರೆ. ಜನರ ದಾಹ ಮಿತಿ ಮೀರುತ್ತಿದೆ. ಹಸಿವುಗಿಂ ತಲೂ ಹೆಚ್ಚು ಸಂಪಾದಿಸಿ ವ್ಯರ್ಥ ಮಾಡುವ ಮನೋಭಾವ ಅತಿಯಾಗಿದೆ. ಇದರಿಂ ದಾಗಿ ಗಾಂಧೀಜಿ ಅವರ ಸರ್ವೋದಯ ಚಿಂತನೆಗೆ ಹಿನ್ನಡೆಯಾಗುತ್ತಿದೆ ಎಂದರು.

ವ್ಯಕ್ತಿಯ ಒಳಿತು ಸರ್ವರ ಒಳಿತನ್ನೇ ಅವಲಂಬಿಸಿದೆ. ವಕೀಲನ ವೃತ್ತಿಗಿರುವ ಮೌಲ್ಯವೇ, ಕೇಶಾಲಂಕಾರಿಯ ವೃತ್ತಿಗೂ ಇದೆ. ಉದ್ಯೋಗದ ಮೂಲಕ ಇಬ್ಬರೂ ಜೀವನ ನಡೆಸುವ ಹಕ್ಕು ಹೊಂದಿದ್ದಾರೆ. ಕೃಷಿಕರ, ಕರಕುಶಲಿಗಳ ಬದುಕು ನಿಜ ವಾದ ಉತ್ಕøಷ್ಟವಾದ ಬದುಕು ಎಂದು ತಿಳಿ ದಿದ್ದರು. ಸರ್ವೋದಯ ಎಂದರೆ ಸರ್ವರ ಉದಯ. ಇದು ಗಾಂಧೀಜಿಯವರ ಕನಸಾ ಗಿತ್ತು. ಆ ಕನಸನ್ನು ನನಸು ಮಾಡಲು ಶ್ರಮಿ ಸಿದ್ದರು. ಈ ಆಸೆ ಅವರ ಜೀವಿತ ಕಾಲ ದಲ್ಲಿ ನೆರವೇರಲಿಲ್ಲ. ಅವರ ಅನುಯಾಯಿ ವಿನೋಬಾ ಭಾವೆ ಅವರು ಸರ್ವೋದಯ ಚಳವಳಿ ಮುನ್ನಡೆಸುತ್ತಾರೆ. 60ರ ದಶಕ ದಲ್ಲಿ ಗಾಂಧೀಜಿ ಅವರ ಸರ್ವೋದಯ ಆಸೆ ನೆರವೇರುತ್ತದೆ ಎಂದು ವಿವರಿಸಿದರು.

ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಸರ್ವೋದಯ ಚಿಂತನೆಯನ್ನು ಪ್ರತಿ ಪಾದಿಸುತ್ತಾ ಬಂದರು. ಈ ಹಿನ್ನೆಲೆಯಲ್ಲಿ ಗಾಂಧೀಜಿ ತತ್ವ, ಆದರ್ಶ ಕುರಿತು ಆಲೋ ಚಿಸಬೇಕಿದೆ. ಪ್ರಪಂಚದಲ್ಲಿ ಪ್ರತಿಯೊಬ್ಬ ನಿಗೂ ಅಗತ್ಯವನ್ನು ಪೂರೈಸುವ ಪದಾರ್ಥ ವಿದೆ. ಆದರೆ ದುರಾಸೆಯನ್ನು ಪೂರೈಸಲು ಅಲ್ಲ ಎಂಬುದನ್ನು ಗಾಂಧೀಜಿ ಪದೇ ಪದೇ ಹೇಳಿದ್ದರು. `ಯೂಸ್ ಅಂಡ್ ಥ್ರೋ’ ಸಂಸ್ಕøತಿ ಎಲ್ಲ್ಲೆಡೆ ವ್ಯಾಪಿಸಿ ಕಸದ ರಾಶಿಯೇ ಕಂಡು ಬರುತ್ತಿದೆ. ಗಾಂಧೀಜಿ ಕಸದಿಂದ ರಸ ಮಾಡಿ ಎಂದಿದ್ದರು. ಆದರೆ ನಾವು ರಸದಿಂದ ಕಸ ಉತ್ಪತಿ ಮಾಡುತ್ತಿz್ದÉೀವೆ ಎಂದು ವಿಷಾದಿಸಿದರು.

ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿz್ದÁಗ 1904ರಲ್ಲಿ ಜೋಹಾನ್ಸ್ ಬರ್ಗ್‍ನಿಂದ ದರ್ಬನ್‍ಗೆ ಪ್ರಯಾಣಿಸುವಾಗ ಜಾನ್ ರಸ್ಕಿನ್ ಅವರ `ಅನ್‍ಟು ದಿಸ್ ಲಾಸ್ಟ್’ ಪುಸ್ತಕ ಓದಿ ಬಹಳ ಪ್ರಭಾವಿತರಾದರು. ಈ ಬಗ್ಗೆ ಆತ್ಮ ಕಥನದಲ್ಲಿ ಬರೆದುಕೊಂಡಿz್ದÁರೆ. ಈ ಪುಸ್ತಕದಲ್ಲಿ ಕ್ರೋಢಿಕೃತವಾದ ಆದರ್ಶ ಸರ್ವೋದಯ ತತ್ವ ಚಿಂತನೆಗೆ ಅವರನ್ನು ಪ್ರೇರೇಪಿಸಿತ್ತು. ಆ ಪುಸ್ತಕವನ್ನು ಅವರು ಗುಜ ರಾತಿ ಭಾಷೆಗೆ ಅನುವಾದಿಸಿದರು ಎಂದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೈ.ಸಿ.ರೇವಣ್ಣ ಮಾತನಾಡಿ, ನಮ್ಮ ದೇಶ ಸಂಪದ್ಭರಿತವಾಗಿತ್ತು. ಬ್ರಿಟಿಷ್ ಚಿಂತಕ ಲಾರ್ಡ್ ಮೆಕಾಲೆ ಭಾರತಾದ್ಯಂತ ಸಂಚ ರಿಸಿ ಈ ದೇಶದಲ್ಲಿ ಎಲ್ಲಿಯೂ ಕಳ್ಳರು, ಭಿಕ್ಷುಕರಿಲ್ಲ ಎಂದು ಪುಸ್ತಕದಲ್ಲಿ ಬರೆದಿ ದ್ದಾರೆ. ಅಂದು ನಮ್ಮ ದೇಶ ಹೇಗಿತ್ತು, ಇಂದು ಹೇಗಾಗಿದೆ? ಈ ಬಗ್ಗೆ ನಾವು ಅವಲೋಕಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪೆÇ್ರ. ಆರ್.ರಾಜಣ್ಣ, ಪರೀಕ್ಷಾಂಗ ಕುಲಸಚಿವ ಪೆÇ್ರ.ಜೆ.ಸೋಮಶೇಖರ್, ಹಿರಿಯ ಪೌರ ಕಾರ್ಮಿಕ ಮಹಿಳೆ ಗುರುವಮ್ಮ, ಗಾಂಧಿ ಭವನದ ನಿರ್ದೇಶಕ ಪೆÇ್ರ.ಎಂ.ಎಸ್. ಶೇಖರ್, ವಾಣಿಜ್ಯ ಶಾಸ್ತ್ರÀ ಅಧ್ಯಯನ ವಿಭಾಗದ ಅಧ್ಯP್ಷÀ ಪೆÇ್ರ.ಎನ್.ನಾಗರಾಜ್ ಇದ್ದರು.

Translate »