ಸರ್ಕಾರದಿಂದ 4 ವರ್ಷದ ಅನುದಾನವೇ ಬಂದಿಲ್ಲ!
ಮೈಸೂರು

ಸರ್ಕಾರದಿಂದ 4 ವರ್ಷದ ಅನುದಾನವೇ ಬಂದಿಲ್ಲ!

January 31, 2019

ಮೈಸೂರು: ಜೀತ ವಿಮುಕ್ತರಾದ ಫಲಾನುಭವಿಗಳಿಗೆ ಸರ್ಕಾರದಿಂದ ನೀಡುವ ಪರಿಹಾರದ ಮೊತ್ತಕ್ಕಾಗಿ 4 ವರ್ಷಗಳಿಂದ ಪ್ರಸ್ತಾವನೆ ಸಲ್ಲಿಸಿದ್ದರೂ ಸರ್ಕಾರದಿಂದ ಇದುವರೆಗೂ ಹಣ ಬಿಡುಗಡೆಯಾಗಿಲ್ಲ ಎಂಬ ವಿಚಾರ ಬುಧವಾರ ಮೈಸೂರು ಜಿಲ್ಲಾ ಪಂಚಾ ಯಿತಿ ಮಿನಿ ಸಭಾಂಗಣದಲ್ಲಿ ನಡೆದ ಮೈಸೂರು ಜಿಲ್ಲಾ ಜೀತ ವಿಮುಕ್ತರ ಪುನರ್ವಸತಿ ಸಮಿತಿ ಸಭೆಯಲ್ಲಿ ತಿಳಿದುಬಂದಿತು.

ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯ ಬೇಕಾಗಿದ್ದ ಸಮಿತಿಯ ಸಭೆಯನ್ನು ನಾಲ್ಕು ವರ್ಷಗಳ ನಂತರ ಇಂದು ಕರೆಯ ಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಸಾ.ರಾ. ನಂದೀಶ್, ಜಿಲ್ಲೆಯಲ್ಲಿ ಜೀತ ವಿಮುಕ್ತರಿಗೆ ಆರ್ಥಿಕ ಸಹಾಯ ಹಾಗೂ ಪುನರ್ವಸತಿ ಸೌಲಭ್ಯ ಕಲ್ಪಿಸಿರುವ ಕುರಿತು ಅಧಿಕಾರಿ ಗಳಿಂದ ಮಾಹಿತಿ ಪಡೆಯುತ್ತಿದ್ದ ವೇಳೆ ಈ ಅಂಶ ಬೆಳಕಿಗೆ ಬಂದಿತು.

2011-12ನೇ ಸಾಲು ಹೊರತು ಪಡಿಸಿದರೆ ನಂತರದ ವರ್ಷಗಳಲ್ಲಿ ಜೀತ ವಿಮುಕ್ತರಿಗೆ ಮಾಸಾಶನ ಮತ್ತು ಪುನರ್ವ ಸತಿ ಸಹಾಯಧನ ವಿತರಣೆಗೆ ಸರ್ಕಾರ ದಿಂದ ಅನುದಾನವೇ ಬಂದಿಲ್ಲ. 2012-13ರಲ್ಲಿ ಹೆಚ್.ಡಿ.ಕೋಟೆ- 89, ಹುಣಸೂರು- 9, ಪಿರಿಯಾಪಟ್ಟಣ 20 ಮಂದಿ ಸೇರಿ ಒಟ್ಟು 118 ಮಂದಿಗೆ ಮಾಸಾಶನ, ಪುನರ್ವಸತಿ ಸಹಾಯಧನ ರೂ.40.16 ಲಕ್ಷ, 2014-15ರಲ್ಲಿ ಹೆಚ್.ಡಿ.ಕೋಟೆ ತಾಲೂಕಿನ 34 ಮತ್ತು 2015-16ರಲ್ಲಿ ಹೆಚ್.ಡಿ.ಕೋಟೆ ತಾಲೂಕಿನ 37 ಮಂದಿ ಸೇರಿದಂತೆ ಒಟ್ಟು 71 ಮಂದಿಗೆ 88.04 ಲಕ್ಷ ರೂ.ಗಾಗಿ ಸರ್ಕಾರಕ್ಕೆ ಕಳಿಸಿರುವ ಪ್ರಸ್ತಾವನೆಗೆ ಇನ್ನೂ ಹಣ ಮಂಜೂರಾಗಿಲ್ಲ. 2017ರಲ್ಲಿ ಹುಣಸೂರು ತಾಲೂಕಿನ 8 ಜನರಿಗಾಗಿ 9.92 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ, 2018ರಲ್ಲಿ ಹೆಚ್.ಡಿ.ಕೋಟೆಯ 19 ಮಂದಿ ಜೀತ ವಿಮುಕ್ತರಿಗೆ ಗ್ರಾಪಂ ವತಿಯಿಂದ ತಕ್ಷಣದ ಪರಿಹಾರವಾಗಿ ಹಾಲಿ ಇರುವ ಸರ್ಕಾರಿ ಆದೇಶದಂತೆ ಮೊಬಲಗು ವಿತರಿಸಿ, ಮಾಸಾಶನ ಹಾಗೂ ಪುನರ್ವಸತಿಯ ಸಹಾಯಧನ ಪಡೆ ಯಲು ಪ್ರಸ್ತಾವನೆ ಸಲ್ಲಿಸಲು ಹೆಚ್.ಡಿ. ಕೋಟೆ ತಾಪಂ ಇಒ ಅವರಿಗೆ 2018ರ ಆಗಸ್ಟ್ ಮತ್ತು 2019ರ ಜನವರಿಯಲ್ಲಿ ಪತ್ರ ಬರೆಯಲಾಗಿದೆ ಎಂದು ಆಯಾ ತಾಲೂಕು ಪಂಚಾಯಿತಿಗಳ ಸಹಾಯಕ ನಿರ್ದೇಶಕರು ವಿವರಿಸಿದರು.

ಈ ವೇಳೆ ಆಯಾ ವರ್ಷಗಳಲ್ಲಿ ಜೀತ ವಿಮುಕ್ತ ಫಲಾನುಭವಿಗಳಿಗೆ ತಾತ್ಕಾಲಿಕ ಪರಿಹಾರ, ವಿವಿಧ ವಸತಿ ಯೋಜನೆ ಯಡಿ ಮನೆ, ಶೌಚಾಲಯಗಳನ್ನು ನೀಡ ಲಾಗಿದೆ. ಅವರೆಲ್ಲರೂ ಈಗ ಕೂಲಿಗೆ ಹೋಗು ತ್ತಿದ್ದಾರೆ. 2018ರಲ್ಲಿ 19 ಜನರಿಗೆ ಮನೆಗಳ ಆಯ್ಕೆಗೆ ಪಟ್ಟಿ ನೀಡಿದ್ದೇವೆ. ಅವರಿಗೆ ಮನೆ ಗಳನ್ನು ಕೊಡುವುದು ಬಾಕಿ ಇದೆ ಎಂದರು.

ಇದೆಲ್ಲವನ್ನೂ ಆಲಿಸಿದ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್, ಬರೀ ಹೇಳಿದರೆ ಸಾಲದು. ಜೀತ ವಿಮುಕ್ತರಿಗೆ ನೀಡಲಾಗಿರುವ ಸೌಲಭ್ಯಗಳ ಪಟ್ಟಿ ಸಹಿತ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ವೇಳೆ ಮಾತನಾಡಿದ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ಜಿಪಂ ಸಿಇಓ ಕೆ.ಜ್ಯೋತಿ, ಜೀತ ವಿಮುಕ್ತರು ಮನೆಗಳಿಗಾಗಿ ಅರ್ಜಿ ಹಾಕುವ ಅಗತ್ಯ ವಿಲ್ಲ. ನಾವೇ ಹೋಗಿ ಪರಿಶೀಲನೆ ನಡೆಸಿ ಅವರಿಗೆ ನೀಡಬೇಕಾದ ಸೌಲಭ್ಯಗಳನ್ನು ತಲುಪಿಸಬೇಕು ಎಂದರು.

ಇದುವರೆಗೆ ಗುರುತಿಸಲಾಗಿರುವ ಜೀತ ವಿಮುಕ್ತ ಫಲಾನುಭವಿಗಳನ್ನು ಒಂದೆಡೆ ಸೇರಿಸಿ, ಸಭೆ ಕರೆದು ಅವರಿಗೆ ಮನೆ, ಶೌಚಾಲಯ ಇನ್ನಿತರ ಸೌಲಭ್ಯಗಳು, ಅವರ ಬೇಕು ಬೇಡಗಳ ಬಗ್ಗೆ ಏಕೆ ಪರಿ ಶೀಲನೆ ಮಾಡಬಾರದು ಎಂದು ಜಿಪಂ ಹಂಗಾಮಿ ಅಧ್ಯಕ್ಷರು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜೀತ ವಿಮುಕ್ತರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಅವರ ಪ್ರಸ್ತುತ ಸ್ಥಿತಿ-ಗತಿ ಹೇಗಿದೆ ಎಂಬು ದನ್ನು ತಾಪಂ ಇಓಗಳು ಪರಿಶೀಲಿಸ ಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಪಂ ಉಪ ಕಾರ್ಯ ದರ್ಶಿ ಶಿವಕುಮಾರಸ್ವಾಮಿ, ಮುಖ್ಯ ಯೋಜನಾಧಿಕಾರಿ ಕೆ.ಜೆ.ಪ್ರಭುಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ನಾಗರಾಜ ಮೂರ್ತಿ, ಸಹಾಯಕ ಕಾರ್ಯದರ್ಶಿ ಮನೋಜ್‍ಕುಮಾರ್, ಹೆಚ್.ಡಿ.ಕೋಟೆ ತಾಪಂ ಸಹಾಯಕ ನಿರ್ದೇಶಕ ರಾಜೇಶ್, ಹುಣಸೂರು ತಾಪಂ ಸಹಾಯಕ ನಿರ್ದೇ ಶಕ ಪ್ರೇಮಕುಮಾರ್, ಪಿರಿಯಾಪಟ್ಟಣ ತಾಪಂ ಇಓ ಶೃತಿ, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್, ಬುಡಕಟ್ಟು ಅಭಿವೃದ್ಧಿ ಇಲಾಖೆ ಅಧಿಕಾರಿ ಪ್ರಭಾ ಇನ್ನಿತರರು ಉಪಸ್ಥಿತರಿದ್ದರು.

ಮೈಸೂರು ತಾಪಂ ಅಭಿವೃದ್ಧಿಪರ ಕ್ರಿಯಾಯೋಜನೆಗೆ ಅನುಮೋದನೆ

ಮೈಸೂರು: ಅಧ್ಯ ಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ನಡುವಿನ ರಾಜಕೀಯ ಜಿದ್ದಾಜಿದ್ದಿ ಯಿಂದಾಗಿ ನೆನೆಗುದಿಗೆ ಬಿದ್ದಿದ್ದ ಮೈಸೂರು ತಾಲೂಕು ಪಂಚಾಯಿತಿಯ 1.70 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಗೆ ಬುಧವಾರ ನಡೆದ ತಾಪಂ ಮುಂದುವರಿದ ಸಭೆಯಲ್ಲಿ ಅನುಮೋದನೆ ದೊರೆಯಿತು.

ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಆಂತರಿಕ ಕರಾರು ಪ್ರಕಾರ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಸ್ವಪಕ್ಷೀಯ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಪಟ್ಟು ಹಿಡಿದಿ ದ್ದರು. ಕರಾರು ಪ್ರಕಾರವೇ ಉಪಾ ಧ್ಯಕ್ಷರೂ ಸ್ಥಾನ ತ್ಯಜಿಸುವಂತೆ ಅಧ್ಯಕ್ಷರು ಪಟ್ಟು ಹಿಡಿದಿದ್ದರು. ಹೀಗಾಗಿ ಕಳೆದ ಹಲವು ತಿಂಗಳಿಂದ ಕರೆದಿದ್ದ ವಿಶೇಷ ಸಭೆಗಳಿಗೆ ಸ್ವಪಕ್ಷೀಯ ಸದಸ್ಯರೇ ಗೈರು ಹಾಜರಾಗುವುದು, ಸಭಾತ್ಯಾಗ ಮಾಡುವುದು ನಡೆಯುತ್ತಿತ್ತು.

ಇದರಿಂದಾಗಿ 2018-19ನೇ ಸಾಲಿಗೆ ಅನಿರ್ಬಂಧಿತ ಅನುದಾನ ಮತ್ತು ಲಿಂಕ್ ಡಾಕ್ಯುಮೆಂಟ್ ಅಡಿಯಲ್ಲಿ ನಿಗದಿಯಾಗಿ ರುವ ಅನುದಾನದ ಕ್ರಿಯಾಯೋಜನೆ, ತಾಪಂ ವ್ಯಾಪ್ತಿಗೆ ಬರುವ ತಾಲೂಕು ಮಟ್ಟದ ವಿವಿಧ ಇಲಾಖೆಗಳಿಗೆ ನಿಗದಿಯಾಗಿ ರುವ ಅನುದಾನದ ಕ್ರಿಯಾಯೋಜನೆ, 2017-18ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರ, ಬದಲಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆಗಾಗಿ ಕರೆದಿದ್ದ ವಿಶೇಷ ಸಭೆಗಳೆಲ್ಲವೂ ಗದ್ದ ಲದ ನಡುವೆ ಮುಂದೂಡಲ್ಪಟ್ಟಿದ್ದವು.

ಆದರೆ ಬುಧವಾರ ನಡೆದ ವಿಶೇಷ ಸಭೆಗೆ ಎಲ್ಲ ಸದಸ್ಯರೂ ಪಕ್ಷಭೇದ ತೊರೆದು ಅನುಮೋದನೆ ನೀಡಿದ್ದಾರೆ ಎಂದು ತಾಪಂ ಇಓ ಲಿಂಗರಾಜಯ್ಯ `ಮೈಸೂರು ಮಿತ್ರ’ನಿಗೆ ಸ್ಪಷ್ಪಪಡಿಸಿದರು.

Translate »