ಮೈಸೂರು: ಉನ್ನತ ಶಿಕ್ಷಣ ಮತ್ತು ಉದ್ಯೋಗ ಪ್ರತಿಯೊಬ್ಬರ ಹಕ್ಕೆಂದು ಪರಿಗಣಿತವಾದರೆ ಮಾತ್ರ ಜವಾ ಬ್ದಾರಿಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜು ಪ್ರಾಧ್ಯಾಪಕ ಜನಾ ರ್ಧನ್ ಕೆಸರುಗದ್ದೆ ಪ್ರತಿಪಾದಿಸಿದರು.
ಮೈಸೂರಿನ ಪುರಭವನದಲ್ಲಿ ಭಾರತ ಜ್ಞಾನ-ವಿಜ್ಞಾನ ಸಮಿತಿ (ಬಿಜಿವಿಎಸ್) ರಾಜ್ಯ ಘಟಕದ ವತಿಯಿಂದ ಹಮ್ಮಿ ಕೊಂಡಿರುವ ರಾಜ್ಯ ಮಟ್ಟದ ಶೈಕ್ಷಣಿಕ ಹಬ್ಬದ ಅಂತಿಮ ದಿನವಾದ ಬುಧವಾರ `ಉನ್ನತ ಶಿಕ್ಷಣದ ಸವಾಲುಗಳು ಮತ್ತು ಭವಿಷ್ಯದಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಣ’ ಕುರಿತು ಅವರು ಮಾತನಾಡಿದರು.
ಯುವ ಜನರ ಹಕ್ಕುಗಳು ಘೋಷಣೆ ಯಾಗಬೇಕು. ಆ ಮೂಲಕ ಶಿಕ್ಷಣ, ಉದ್ಯೋಗ ಸೇರಿದಂತೆ ಅವರ ಹಕ್ಕುಗಳು ರಕ್ಷಣೆಯಾಗಬೇಕು. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ ಯುವ ಜನ ಆಯೋಗ ರಚನೆಗೆ ಒತ್ತಾಯಿಸಿ ಹೋರಾಟ ಗಳು ಶುರುವಾಗಿವೆ. ಪ್ರಸ್ತುತ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವ ರೆಗೆ ಖಾಸಗೀಕರಣಗೊಳ್ಳುತ್ತಿದೆ. ಇದರ ಪರಿ ಣಾಮ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ ಎಂದು ವಿಷಾದಿಸಿದರು.
15ರಿಂದ 29 ವರ್ಷ ವಯೋಮಾನದ ವರು ಒತ್ತಡದ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾವಾಗುವ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಇತರೆ ವಿಷಯದಲ್ಲಿ ಆಪ್ತ ಸಮಾಲೋಚನೆ ಅಗತ್ಯವಾಗಿದೆ. ಯುವ ಜನರು ಎಂದರೆ ಕೇವಲ ಭವಿಷ್ಯ ಮಾತ್ರವಲ್ಲ, ವರ್ತ ಮಾನವೂ ಹೌದು ಎಂಬುದನ್ನು ಸಮಾಜ ಅರಿತುಕೊಳ್ಳಬೇಕು. ಈ ನೆಲೆಯಲ್ಲಿ ಯುವ ಜನತೆಗೆ ಗುಣಮಟ್ಟದ ಶಿಕ್ಷಣ ದೊರಕಿಸಿ ಕೊಡುವ ವೇಳೆಯಲ್ಲಿ ಅವರಲ್ಲಿ ಆಸಕ್ತದಾ ಯಕ ಕಲಿಕೆ ಮೂಡಿಸಬೇಕು. ಕಲಿಕೆಯ ಸಂದರ್ಭ ಅವರಿಗೆ ಹಿತಾನುಭವ ಉಂಟು ಮಾಡಬೇಕು. ಆ ಮಾದರಿಯ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ `ಸರ್ಕಾರಿ ಶಾಲೆಗಳ ಕಲಿಕಾ ಸ್ಥಿತಿಗತಿಗಳು’ ಕುರಿತ ಗೋಷ್ಠಿಯಲ್ಲಿ ಬಿಜಿವಿಎಸ್ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷ ಎಫ್.ಸಿ.ಚೇಗರೆಡ್ಡಿ ವಿಷಯ ಮಂಡಿಸಿದರು. ಬಳಿಕ ಪ್ರತಿಕ್ರಿಯೆ ನೀಡಿದ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕ ರರ ಒಕ್ಕೂಟದ ಉಪಾಧ್ಯಕ್ಷ ರಂಗನಾಥ್ ಹವಾಲ್ದಾರ್, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬ ಆರೋಪವನ್ನು ಅವಲೋಕಿಸಿ ದರೆ, ಅದು ಸಂಪೂರ್ಣ ಸತ್ಯವಲ್ಲ ಎಂಬುದು ಮನದಟ್ಟಾಗಲಿದೆ. ಸರ್ಕಾರಿ ಶಾಲೆಗಳಲ್ಲೂ ಪರಿಣಾಮಕಾರಿ ಕಲಿಕೆ ಸಾಧ್ಯವಾಗುತ್ತಿರು ವುದಕ್ಕೆ ಸಾಕಷ್ಟು ನಿದರ್ಶನಗಳು ಕಾಣಸಿಗ ಲಿವೆ ಎಂದು ತಿಳಿಸಿದರು.
ಶಿಕ್ಷಕರಿಗೆ ಹೆಚ್ಚುವರಿಯಾಗಿ ನೀಡಿರುವ ಬಿಸಿಯೂಟ ಜವಾಬ್ದಾರಿಯನ್ನು ಕಡಿತ ಗೊಳಿಸಿ ಅವರು ಬೋಧನೆಯಲ್ಲಿ ಪರಿ ಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಬೋಧನೆ ಹೊರತುಪಡಿಸಿದಂತೆ ಮಾಡಬೇಕಾದ ಕೆಲಸ ಕಾರ್ಯಗಳಿಗಾಗಿ ಪ್ರತ್ಯೇಕ ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕ್ಲಸ್ಟರ್‍ಗೆ ಒಬ್ಬರಂತೆ ಗುಮಾಸ್ತ ರನ್ನು ನಿಯೋಜಿಸಬೇಕು. ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳುತ್ತಿರುವ ತಪ್ಪು ನಿರ್ಧಾರಗಳಿಂದ ಇಂದು ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲು ಪುತ್ತಿವೆ. ಇಲ್ಲಿ ನಡೆಯುವ ಚರ್ಚೆಗಳು ಹಾಗೂ ಪರಿಹಾರೋಪಾಯಗಳು ಸರ್ಕಾರಕ್ಕೆ ತಲುಪಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕೇರಳ ಸರ್ಕಾರದ ಶೈಕ್ಷಣಿಕ ಸಲಹೆ ಗಾರ ಡಾ.ಸಿ.ರಾಮಕೃಷ್ಣನ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಿಷಯ ಗಳಿಗೆ ಸಂಬಂಧಿಸಿದಂತೆ ನಾನಾ ಗೋಷ್ಠಿ ಗಳು ಜರುಗಿದ ಬಳಿಕ ಎರಡು ದಿನಗಳ ಕಾಲ ನಡೆದ ಶೈಕ್ಷಣಿಕ ಹಬ್ಬ ಸಮಾ ರೋಪಗೊಂಡಿತು. ಬೆಂಗಳೂರಿನ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ ಸಹಪ್ರಾಧ್ಯಾಪಕಿ ಡಾ.ಶಿವಾಲಿ, ಕುಶಾಲ ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇ ಜಿನ ಉಪನ್ಯಾಸಕಿ ಎಂ.ರಶ್ಮಿ, ಇತಿಹಾಸ ತಜ್ಞ ಡಾ.ನಯೀಮುರೆಹಮಾನ್, ಮೈಸೂರು ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಎಂ.ವಿ. ದಿನೇಶ್ ಮತ್ತಿತರರು ಹಾಜರಿದ್ದರು.