ಸಿದ್ಧಗಂಗಾ ಶ್ರೀಗಳಿಗೆ ವಿವಿಧ ಮಠಾಧೀಶರ ನುಡಿ ನಮನ
ಮೈಸೂರು

ಸಿದ್ಧಗಂಗಾ ಶ್ರೀಗಳಿಗೆ ವಿವಿಧ ಮಠಾಧೀಶರ ನುಡಿ ನಮನ

January 31, 2019

ಮೈಸೂರು: ಮೈಸೂ ರಿನ ಅರಮನೆ ಬಳಿ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬುಧವಾರ ವಿವಿಧ ಮಠಾಧೀಶರು ತುಮಕೂರು ಸಿದ್ಧ ಗಂಗಾ ಮಠದ ಶ್ರೀ ಡಾ.ಶಿವಕುಮಾರಸ್ವಾಮೀಜಿ ಅವರಿಗೆ ನುಡಿ ನಮನ ಸಲ್ಲಿಸಿದರು.

ಭಾರತೀಯ ಸಾಂಸ್ಕøತಿಕ ವಿಕಾಸ ವೇದಿಕೆ, ಸಾರ್ಥಕ ಸೇವಾ ಟ್ರಸ್ಟ್ ಜಂಟಿ ಯಾಗಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಾಟಾಳು ಸೂರ್ಯ ಸಿಂಹಾಸನ ಮಠದ ಡಾ.ಸಿದ್ದಲಿಂಗ ಶಿವಾ ಚಾರ್ಯ ಸ್ವಾಮೀಜಿ, ಹೊಸಮಠ ಶ್ರೀ ಚಿದಾನಂದ ಸ್ವಾಮೀಜಿ, ತಿ.ನರಸೀಪುರ ರಾಮಾರೂಢಸ್ವಾಮಿ ಬ್ರಹ್ಮ ವಿದ್ಯಾಶ್ರಮದ ವೇದಾವತಿ ಮಾತಾಜಿ, ಬಸವೇಶ್ವರ ಮಠದ ಅಧ್ಯಕ್ಷ ಶಂಕರೇಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಇನ್ನಿ ತರರು ಸಿದ್ಧಗಂಗಾ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳು ಮಠದ ಪೀಠಾಧ್ಯಕ್ಷ ಡಾ.ಸಿದ್ಧ ಲಿಂಗ ಶಿವಾಚಾರ್ಯ ಸ್ವಾಮೀಜಿ, ಶರ ಣರ ವಚನ, ತತ್ವ, ಆದರ್ಶದಂತೆ ಬದುಕು ನಡೆಸಿದ ಸಿದ್ಧಗಂಗಾ ಶ್ರೀಗಳಿಗೆ ರಾಜ್ಯದ ಮೂಲೆ ಮೂಲೆಯಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಜಾತಿ, ಮತ ಬೇಧವಿಲ್ಲದೇ ಲಕ್ಷಾಂತರ ಭಕ್ತರು ಶ್ರೀಗಳನ್ನು ಸ್ಮರಿಸುತ್ತಿದ್ದಾರೆ. ಇದು ಅವರ ಸಾಧನೆಗೆ ಹಿಡಿದ ಕನ್ನಡಿ ಎಂದರು.

ಅವರನ್ನು ಅಭಿನವ ಬಸವಣ್ಣ ಎಂದು ಕರೆದರೆ, ಬಸವಣ್ಣರಿಗೆ ಹಾಗೆಲ್ಲಾ ನನ್ನನ್ನು ಹೋಲಿಕೆ ಮಾಡಬೇಡಿ ಎಂದು ವಿನಯ ವಾಗಿಯೇ ಹೊಗಳಿಕೆಯನ್ನು ನಿರಾಕರಿಸು ತ್ತಿದ್ದರು. ಆದರೆ ತಮ್ಮ ಜೀವನದುದ್ದಕ್ಕೂ ಬಸವಣ್ಣರ ತತ್ವ, ಆದರ್ಶ ಪಾಲಿಸಿಕೊಂಡು ಬಂದವರು ಎಂದು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತ ನಾಡಿ, ಕಾಯಕ ನಿಷ್ಠೆ, ದಾಸೋಹ, ಅಧ್ಯ ಯನ ಶೀಲ ಮನೋಭಾವ ಹೊಂದಿದ್ದ ಶ್ರೀಗಳು, ಸಂತನಂತೆ ಬದುಕು ನಡೆಸಿ ದವರು. ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಅವರ ಆಹಾರ ಪದ್ಧತಿ ನಮಗೆ ಮಾರ್ಗದರ್ಶಕವಾಗಿದೆ. ಇಂದಿನ ಯುವ ಸಮುದಾಯ ಅವರ ಹಾದಿ ಯಲ್ಲಿ ನಡೆದರೆ ಸಮಾಜ ಬದಲಾವಣೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಭಾರತೀಯ ಸಾಂಸ್ಕøತಿಕ ವಿಕಾಸ ವೇದಿಕೆಯ ಗೌರಿಶಂಕರ್ ಇನ್ನಿ ತರರು ಉಪಸ್ಥಿತರಿದ್ದರು.

Translate »