ಮೈಸೂರು: ಮೈಸೂರಿನ ಮಂಡಿ ಮೊಹಲ್ಲಾದ ಕೈಲಾಸಪುರಂ ಸರ್ಕಾರಿ ಶಾಲೆ ಹಿಂಭಾಗ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ. ಮೈಸೂರಿನ ಕೆಸರೆ 2ನೇ ಹಂತದ ಉಸ್ಮಾನಿಯಾ ಬ್ಲಾಕ್ ನಿವಾಸಿ ಅಸ್ಗರ್ ಪಾಷ ಅವರ ಮಗ ಅಪ್ಸರ್ ಪಾಷ(24) ಬಂಧಿತನಾಗಿದ್ದು, ಆತನಿಂದ 310 ಗ್ರಾಂ ಗಾಂಜಾ ಹಾಗೂ 10,500 ರೂ. ನಗದನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಕೈಲಾಸಪುರಂ ಪ್ರೌಢಶಾಲೆ ಹಿಂಭಾಗ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಬಳಿ ನಿಂತು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆತನನ್ನು, ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸಿದರು.
ಸಿಸಿಬಿ ಎಸಿಪಿ ಬಿ.ಆರ್.ಲಿಂಗಪ್ಪ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಎ.ಮಲ್ಲೇಶ, ಸಿಬ್ಬಂದಿಗಳಾದ ಆರ್.ರಾಜು, ಜೋಸೆಫ್ ನರೋನ್ಹ, ಡಿ.ಶ್ರೀನಿವಾಸಪ್ರಸಾದ್, ಅರುಣ್ ಕುಮಾರ್, ವಿ.ರಘು, ರಾಜಶ್ರೀ ಜಾಲವಾದಿ, ಧನಂಜಯ ಹಾಗೂ ಶ್ರೀನಿವಾಸ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮೈಸೂರು