ಆಟೋ ಚಾಲಕ ಮನು ಹತ್ಯೆಗೈದ ಪ್ರಕರಣ: 12 ಗಂಟೆಯೊಳಗೆ ಮೂವರ ಬಂಧನ
ಮೈಸೂರು

ಆಟೋ ಚಾಲಕ ಮನು ಹತ್ಯೆಗೈದ ಪ್ರಕರಣ: 12 ಗಂಟೆಯೊಳಗೆ ಮೂವರ ಬಂಧನ

January 30, 2019

ಮೈಸೂರು: ನಿನ್ನೆ ಮಧ್ಯ ರಾತ್ರಿ ಚಾಕುವಿನಿಂದ ಇರಿದು ಆಟೋ ಚಾಲಕ ಮನು ಅಲಿಯಾಸ್ ಜಾನಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಮೂವರನ್ನು ಘಟನೆ ನಡೆದ 12 ಗಂಟೆ ಯೊಳಗೆ ಬಂಧಿಸುವಲ್ಲಿ ಲಕ್ಷ್ಮೀಪುರಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರಿನ ಗುಂಡೂರಾವ್ ನಗರ ಹಾಗೂ ಮುನೇಶ್ವರ ನಗರದ ಅಪ್ಪು, ಯೋಗೇಂದ್ರ ಹಾಗೂ ಮಧು ಬಂಧಿತ ಆರೋಪಿಗಳು. ಭಾನುವಾರ ಮಧ್ಯ ರಾತ್ರಿ ಮಹಾರಾಜ ಕಾಲೇಜು ಮೈದಾನದ ಬಳಿ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಎದುರು ರೈಲ್ವೇ ಅಂಡರ್ ಬ್ರಿಡ್ಜ್ ಅಡಿ ಜಾನಿಯನ್ನು ಚಾಕುವಿನಿಂದ 15 ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಲಕ್ಷ್ಮೀಪುರಂ ಠಾಣೆ ಇನ್ಸ್‍ಪೆಕ್ಟರ್ ಎಸ್.ಗಂಗಾಧರ ಅವರು, ತಮಗೆ ಲಭಿಸಿದ ಪ್ರಾಥಮಿಕ ಸುಳಿವಿನ ಬೆನ್ನತ್ತಿ ಶೋಧಿಸಿದಾಗ ಸೋಮವಾರ ರಾತ್ರಿ ವೇಳೆಗೆ ಆರೋಪಿಗಳನ್ನು ಸೆರೆ ಹಿಡಿದರು.

ಠಾಣೆಗೆ ಕರೆತಂದು ವಿಚಾರಣೆಗೊಳ ಪಡಿಸಿದಾಗ ಹಣಕಾಸು ವಿಚಾರದಲ್ಲಿ ಉಂಟಾದ ದ್ವೇಷದಿಂದ ಕಳೆದ ಒಂದು ತಿಂಗಳ ಹಿಂದೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಈ ಬಗ್ಗೆ ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾ ಗಿತ್ತು ಎಂಬುದು ತಿಳಿಯಿತು. ಹಳೇ ದ್ವೇಷ ದಿಂದಾಗಿ ಮನು ಅಲಿಯಾಸ್ ಜಾನಿಯನ್ನು ಮುಗಿಸಲು ಯೋಜನೆ ರೂಪಿಸಿದ ಮಧು ಗುಂಪು, ಭಾನುವಾರ ರಾತ್ರಿ ಹೊಂಚು ಹಾಕಿ ಒಬ್ಬನೇ ಆಟೋದಲ್ಲಿ ಬರುತ್ತಿದ್ದಾಗ ದಾಳಿ ನಡೆಸಿ, ಆತನನ್ನು ಹತ್ಯೆಗೈದು ಪರಾರಿಯಾಗಿದ್ದರು ಎಂಬುದು ವಿಚಾ ರಣೆ ವೇಳೆ ತಿಳಿದು ಬಂದಿದೆ.

ಇಂದು ಸಂಜೆ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿ ಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಮತ್ತೆ ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಸಿಪಿಗಳಾದ ಎನ್. ವಿಷ್ಣುವರ್ಧನ್, ಡಾ. ವಿಕ್ರಂ ವಿ.ಅಮಟೆ ಹಾಗೂ ಎಸಿಪಿ ಧರ್ಮಪ್ಪ, ಇಂದು ಮಧ್ಯಾಹ್ನ ಲಕ್ಷ್ಮೀಪುರಂ ಠಾಣೆಯಲ್ಲಿ ಬಂಧಿತ ಆರೋಪಿ ಗಳ ವಿಚಾರಣೆ ನಡೆಸಿದರು.

Translate »