ಬೀದಿ ನಾಯಿ ದಾಳಿ: ಯುವಕನಿಗೆ ಗಾಯ
ಮೈಸೂರು

ಬೀದಿ ನಾಯಿ ದಾಳಿ: ಯುವಕನಿಗೆ ಗಾಯ

January 31, 2019

ಮೈಸೂರು: ಮೂತ್ರ ವಿಸರ್ಜನೆ ವೇಳೆ ಯುವಕನ ಮೇಲೆ ನಾಯಿ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸಿರುವ ಘಟನೆ ಯಾದವಗಿರಿ ಚೆಲುವಾಂಬ ಉದ್ಯಾನವನದ ಬಳಿ ಬುಧವಾರ ಸಂಜೆ ನಡೆದಿದೆ. ರಾಜಸ್ಥಾನ ಮೂಲದ ಗೋಕುಲಂ ನಿವಾಸಿ, ಪಾನೀಪುರಿ ವ್ಯಾಪಾರಿ ಶಿವ ಕುಮಾರ್(22), ಬುಧವಾರ ಸಂಜೆ ಚೆಲುವಾಂಬ ಉದ್ಯಾನವನದ ಬಳಿ ಪಾನೀಪುರಿ ವ್ಯಾಪಾರ ಮಾಡುತ್ತಿದ್ದು, ಮೂತ್ರವಿಸರ್ಜನೆ ಮಾಡಲು ರಸ್ತೆ ಪಕ್ಕದಲ್ಲಿದ್ದ ಖಾಲಿ ಜಾಗಕ್ಕೆ ತೆರಳಿದ್ದಾರೆ. ಈ ವೇಳೆ ನಾಯಿ ದಾಳಿ ನಡೆಸಿ, ಕಾಲಿನ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ. ಇದನ್ನು ಕಂಡ ಸಾರ್ವಜನಿಕರು ಯುವಕನ ಬಳಿ ತೆರಳಿದಾಗ ನಾಯಿ ಓಡಿ ಹೋಗಿದೆ.

ಸಾರ್ವಜನಿಕರ ಆಕ್ರೋಶ: ಹಲವು ದಿನಗಳಿಂದ ಈ ನಾಯಿ ರಸ್ತೆಯಲ್ಲಿ ನಡೆದು ಹೋಗುವವರ ಮೇಲೆ ದಾಳಿ ನಡೆಸಿ, ಕಚ್ಚುತ್ತಿದೆ. ಜತೆಗೆ ವಾಹನ ಸವಾರರನ್ನು ಬೆನ್ನಟ್ಟುತ್ತದೆ. ಇದರಿಂದ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಅಲ್ಲದೆ, ಯಾದವಗಿರಿಯ ಪರಮಹಂಸ ರಸ್ತೆ, ವಿಕ್ರಂ ಆಸ್ಪತ್ರೆ ರಸ್ತೆಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಹಗಲಿನ ವೇಳೆಯಲ್ಲೇ ತಿರುಗಾಡಲು ಭಯಪಡುವಂತಾಗಿದೆ. ಕೂಡಲೇ ನಗರಪಾಲಿಕೆ ಎಚ್ಚೆತ್ತುಕೊಂಡು ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

Translate »