Tag: Mysuru

ದೇವರಿಗೆ ಕನ್ನಡ ಕಲಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ
ಮೈಸೂರು

ದೇವರಿಗೆ ಕನ್ನಡ ಕಲಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ

March 7, 2019

ಮೈಸೂರು: ಸಂಸ್ಕøತ ಮಾತನಾಡುತ್ತಿದ್ದ ದೇವರಿಗೆ ಕನ್ನಡ ಕಲಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿ ಯಿಂದ ನಡೆದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ವಚನಕಾರರ ಕಾಲಕ್ಕಿಂತ ಮೊದಲು ದೇವತೆಗಳು ಸಂಸ್ಕøತದಲ್ಲಿಯೇ ಮಾತನಾಡುತ್ತಿದ್ದರು. ಅವರು ಪ್ರವರ್ಧ ಮಾನಕ್ಕೆ ಬಂದ ಬಳಿಕವಷ್ಟೇ ದೇವರಿಗೆ ಕನ್ನಡ ಕಲಿಸಿದರು. ಇದರಿಂದ ಸಂಸ್ಕøತ ಮಾತನಾಡುವುದನ್ನು ದೇವರು ಕಾಲ…

ನಗರ ಪಾಲಿಕೆ ಅಧಿಕಾರಿಗಳ ಕರ್ತವ್ಯ  ಲೋಪ: 70 ಪೈಸೆಗೆ 1500 ರೂ. ದಂಡ!
ಮೈಸೂರು

ನಗರ ಪಾಲಿಕೆ ಅಧಿಕಾರಿಗಳ ಕರ್ತವ್ಯ ಲೋಪ: 70 ಪೈಸೆಗೆ 1500 ರೂ. ದಂಡ!

March 7, 2019

ಮೈಸೂರು: ಕೇವಲ 70 ಪೈಸೆಗೆ ನಗರ ಪಾಲಿಕೆ ಅಧಿಕಾರಿಗಳು 1500 ರೂ. ದಂಡ ತೆರಬೇಕಾಗಿ ಬಂದಿದೆ. ಮೈಸೂರಿನ ರಾಮಕೃಷ್ಣನಗರ ಹೆಚ್-ಬ್ಲಾಕ್ ನಿವಾಸಿ ಎಸ್.ಸತೀಶ್ ಅವರಿಗೆ ನೀಡಿದ ನೀರಿನ ಬಿಲ್‍ನಲ್ಲಿ ಬಾಕಿ 30 ಪೈಸೆ ಬದಲು 70 ಪೈಸೆ ಹೆಚ್ಚುವರಿಯಾಗಿ 1 ರೂ. ಬಾಕಿ ಎಂದು ಬಿಲ್ ನೀಡಲಾಗಿದೆ. ನಗರ ಪಾಲಿಕೆ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದಾರೆ. ಇದರಿಂದಾಗಿ ತನಗೆ ಮಾನಸಿಕ ಆಘಾತವುಂಟಾಗಿದ್ದು, 2 ಲಕ್ಷ ರೂ. ಪರಿಹಾರ ಕಲ್ಪಿಸಿಕೊಡ ಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗೆ ನಗರ…

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ನಿರ್ಮಾಣ,  ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ನಿರ್ಮಾಣ, ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಪ್ರತಿಭಟನೆ

March 7, 2019

ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ (ಎಐಟಿಯುಸಿ ಅಂತರ್ಗತ ಸಂಘಟನೆ) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು, ಕಾರ್ಮಿಕರಿಗೆ ವಿವಿಧ ಸೌಲಭ್ಯ ಗಳನ್ನು ಒದಗಿಸಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಅನ್ಯರೂ ನೋಂದಣಿ ಮಾಡಿಕೊಳ್ಳುವುದನ್ನು ತಡೆಗಟ್ಟಬೇಕು. ಆ ಮೂಲಕ ನೈಜ ಫಲಾನುಭವಿಗಳಿಗೆ ಮಂಡಳಿ ನಿಧಿ ಬಳಕೆಯಾಗಲು…

ಪ್ರವಾಸಿ ಹಿಂದಿ ಸಾಹಿತ್ಯ ಸಂವೇದನೆ ವಿಭಿನ್ನ ಸಂದರ್ಭ ಕುರಿತು ವಿಚಾರ ಸಂಕಿರಣ
ಮೈಸೂರು

ಪ್ರವಾಸಿ ಹಿಂದಿ ಸಾಹಿತ್ಯ ಸಂವೇದನೆ ವಿಭಿನ್ನ ಸಂದರ್ಭ ಕುರಿತು ವಿಚಾರ ಸಂಕಿರಣ

March 7, 2019

ಮೈಸೂರು: ಪ್ರವಾಸಿ ಹಿಂದಿ ಸಾಹಿತ್ಯ ಭಿನ್ನ ಸಂಸ್ಕøತಿಗಳ ಸಮ್ಮಿ ಲನವಾಗಿದ್ದು, ಓದುಗರಿಗೆ ವೈವಿಧ್ಯಮಯ ಲೋಕವನ್ನು ಪರಿಚಯಿಸಿ ವಿನೂತನ ಅನು ಭವ ನೀಡಲಿದೆ ಎಂದು ಬ್ರಿಟನ್‍ನ ಹಿಂದಿ ಲೇಖಕಿ ಉಷಾರಾಜೇ ಸಕ್ಸೇನಾ ಹೇಳಿದರು. ಮೈಸೂರು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿಯ ಹಿಂದಿ ಅಧ್ಯಯನ ವಿಭಾಗ, ಆಗ್ರಾದ ಕೇಂದ್ರೀಯ ಹಿಂದಿ ಸಂಸ್ಥಾನದ ಜಂಟಿ ಆಶ್ರಯದಲ್ಲಿ `ಪ್ರವಾಸಿ ಹಿಂದಿ ಸಾಹಿತ್ಯ ಸಂವೇದನೆಯ ವಿಭಿನ್ನ ಸಂದರ್ಭಗಳು’ ಕುರಿತಂತೆ ಹಮ್ಮಿಕೊಂಡಿರುವ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಬುಧವಾರ ಚಾಲನೆ ನೀಡಿ…

ವಿದ್ಯಾರ್ಥಿಗಳಿಂದ `ರಾಷ್ಟ್ರೀಯ ಸುರಕ್ಷತಾ ದಿನ’ ರ್ಯಾಲಿ
ಮೈಸೂರು

ವಿದ್ಯಾರ್ಥಿಗಳಿಂದ `ರಾಷ್ಟ್ರೀಯ ಸುರಕ್ಷತಾ ದಿನ’ ರ್ಯಾಲಿ

March 7, 2019

ಮೈಸೂರು: ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ `ಮಂಗಳೂರು ಇನ್ಸ್‍ಟಿಟ್ಯೂಟ್ ಆಫ್ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್’ (ಎಂಐಎಫ್‍ಎಸ್‍ಇ) ಸಂಸ್ಥೆಯ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಬುಧವಾರ 47ನೇ ರಾಷ್ಟ್ರೀಯ ಸುರಕ್ಷತಾ ದಿನ ಅಂಗವಾಗಿ ಮೈಸೂರಿನಲ್ಲಿ ರ್ಯಾಲಿ ನಡೆಸಿದರು. `ಸುರಕ್ಷಿತ ಮತ್ತು ಆರೋಗ್ಯಕರ ವಾತಾವರಣ ಖಾತ್ರಿಪಡಿಸಲು ಒಟ್ಟಾಗಿ ಕೆಲಸ ಮಾಡಿ’ ಎಂಬ ವಿಷಯದ ಮೇಲೆ ನಡೆದ ರ್ಯಾಲಿಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಗುರುರಾಜ್ ಚಾಲನೆ ನೀಡಿದರು. ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಸಂಸ್ಥೆಯ ಆವರಣದಿಂದ ಹೊರಟ ರ್ಯಾಲಿ ದೇವರಾಜ ಅರಸು ರಸ್ತೆ, ಜೆಎಲ್‍ಬಿ…

ಐದು ಲೋಕಸಭಾ ಕ್ಷೇತ್ರದಲ್ಲಿ  ರಾಷ್ಟ್ರೀಯ ಲೋಕದಳ ಸ್ಪರ್ಧೆ: ಮೈಸೂರಲ್ಲೂ ಅಭ್ಯರ್ಥಿ ಹಾಕುವ ಚಿಂತನೆ
ಮೈಸೂರು

ಐದು ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಲೋಕದಳ ಸ್ಪರ್ಧೆ: ಮೈಸೂರಲ್ಲೂ ಅಭ್ಯರ್ಥಿ ಹಾಕುವ ಚಿಂತನೆ

March 7, 2019

ಮೈಸೂರು: ರಾಷ್ಟ್ರೀಯ ಲೋಕದಳ ಪಕ್ಷವು ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ರಾಜ್ಯದ 5 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಜ್ಜಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರಮೇಶ್ ಗುರುದೇವ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚೌಧರಿ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳ ಪಕ್ಷ, ರಾಜ್ಯದ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ, ಶಿವಮೊಗ್ಗ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ಕಣಕ್ಕಿಳಿಯಲಿದೆ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಅಂತಿಮ ಹಂತದಲ್ಲಿದೆ ಎಂದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲೂ…

ಸವಿತಾ ಸಮಾಜದವರಿಗೆ ಕ್ರಿಕೆಟ್ ಪಂದ್ಯಾವಳಿ
ಮೈಸೂರು

ಸವಿತಾ ಸಮಾಜದವರಿಗೆ ಕ್ರಿಕೆಟ್ ಪಂದ್ಯಾವಳಿ

March 7, 2019

ಮೈಸೂರು: ಕರ್ನಾಟಕ ರಾಜ್ಯ ಸವಿತಾ ಸಮಾಜದ ಎನ್.ಆರ್. ಕ್ಷೇತ್ರ ಘಟಕದ ವತಿಯಿಂದ ಮಾ.12ರಂದು ಹುತಾತ್ಮ ಭಾರತೀಯ ಯೋಧರ ನೆನಪಿ ನಲ್ಲಿ ಸವಿತಾ ಸಮುದಾಯದವರಿಗಾಗಿ 2ನೇ ವರ್ಷದ ಜಿಲ್ಲಾ ಮಟ್ಟದ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿ ಸಿದೆ. ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಮೈದಾನದಲ್ಲಿ ಪಂದ್ಯಾವಳಿಗೆ ಈಗಾಗಲೇ ಸವಿತಾ ಸಮಾಜದ 8 ತಂಡ ಗಳು ನೋಂದಾಯಿಸಿಕೊಂಡಿದ್ದು, ಇನ್ನೂ 4 ತಂಡಗಳು ಬರುವ ನಿರೀಕ್ಷೆ ಇದೆ ಎಂದು ಸವಿತಾ ಸಮಾಜದ ಜಿಲ್ಲಾ ಧ್ಯಕ್ಷ ಎನ್.ಆರ್.ನಾಗೇಶ್ ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ…

ನಂಜನಗೂಡಿನಲ್ಲಿ ಕಾರ್ಮಿಕ ಕಲ್ಯಾಣ ಸಚಿವ ವೆಂಕಟರಮಣಪ್ಪರಿಂದ 9.5 ಕೋಟಿ ವೆಚ್ಚದ ಇಎಸ್‍ಐ ಆಸ್ಪತ್ರೆ, ಡಯಾಗ್ನೋಸ್ಟಿಕ್ ಕೇಂದ್ರ ಲೋಕಾರ್ಪಣೆ
ಮೈಸೂರು

ನಂಜನಗೂಡಿನಲ್ಲಿ ಕಾರ್ಮಿಕ ಕಲ್ಯಾಣ ಸಚಿವ ವೆಂಕಟರಮಣಪ್ಪರಿಂದ 9.5 ಕೋಟಿ ವೆಚ್ಚದ ಇಎಸ್‍ಐ ಆಸ್ಪತ್ರೆ, ಡಯಾಗ್ನೋಸ್ಟಿಕ್ ಕೇಂದ್ರ ಲೋಕಾರ್ಪಣೆ

March 6, 2019

ನಂಜನಗೂಡು: ಸಂಸದ ಆರ್.ಧ್ರುವನಾರಾಯಣ್ ಪರಿಶ್ರಮದ ಫಲವಾಗಿ ನಂಜನಗೂಡಿನಲ್ಲಿಂದು ಅತ್ಯಾಧುನಿಕ ಇಎಸ್‍ಐ ಆಸ್ಪತ್ರೆಯನ್ನು ಕಾರ್ಮಿಕರಿಗೆ ಲೋಕಾರ್ಪಣೆಗೊಳಿಸಲಾಗಿದೆ. ಇದರ ಸದುಪಯೋಗವನ್ನು ಈ ಭಾಗದ ಕಾರ್ಮಿಕರು ಪಡೆಯಬೇಕೆಂದು ರಾಜ್ಯ ಕಾರ್ಮಿಕ ಕಲ್ಯಾಣ ಸಚಿವ ವೆಂಕಟರಮಣಪ್ಪ ಸಲಹೆ ನೀಡಿದರು. ನಂಜನಗೂಡಿನಲ್ಲಿಂದು 9 ಕೋಟಿ 50 ಲಕ್ಷ ವೆಚ್ಚದಲ್ಲಿ ಕಾರ್ಮಿಕ ರಾಜ್ಯ ವಿಮಾ ನಿಗಮದಿಂದ ನಿರ್ಮಾಣವಾಗಿರುವ ಇಎಸ್‍ಐ ಚಿಕಿತ್ಸಾಲಯಾ ಮತ್ತು ಡಯಾಗ್ನೋಸ್ಟಿಕ್ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಮೈಸೂರಿನಲ್ಲಿ ಸುಮಾರು 25 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿದೆ. ಅದರಂತೆಯೇ ಈ ಭಾಗದ…

ಡಿ.ದೇವರಾಜ ಅರಸು ಹೈಟೆಕ್ ಆಸ್ಪತ್ರೆಗೆ ಸಚಿವ ಜಿಟಿಡಿ ಗುದ್ದಲಿ ಪೂಜೆ
ಮೈಸೂರು

ಡಿ.ದೇವರಾಜ ಅರಸು ಹೈಟೆಕ್ ಆಸ್ಪತ್ರೆಗೆ ಸಚಿವ ಜಿಟಿಡಿ ಗುದ್ದಲಿ ಪೂಜೆ

March 6, 2019

ಹುಣಸೂರು: ನಗರದ ಬೈಪಾಸ್ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಬಳಿ 4.5 ಎಕರೆ ವಿಸ್ತೀರ್ಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್ ಘಟಕದಿಂದ 25 ಕೋಟಿ ರೂ. ವೆಚ್ಚದಲ್ಲಿ ಡಿ.ದೇವರಾಜ ಅರಸು ಸಾರ್ವಜನಿಕ ಹೈಟೆಕ್ ಆಸ್ಪತ್ರೆ ಕಟ್ಟಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೆಗೌಡ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಹುಣಸೂರು ವಿಸ್ತಾರವಾಗಿ ಬೆಳೆದಿರುವ ಉಪವಿಭಾಗ ಕೇಂದ್ರವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಹೈಟೆಕ್ ತಂತ್ರಜ್ಞಾನವನ್ನೊಳಗೊಂಡ 100 ಹಾಸಿಗೆಗಳ ಸಾಮಥ್ರ್ಯದ ಸುಸಜ್ಜಿತ ಆಸ್ಪತ್ರೆ ಮೊದಲ ಮತ್ತು ಎರಡನೇ ಮಹಡಿಯನ್ನು…

ಅಭಿವೃದ್ಧಿ ಕಾಮಗಾರಿಗಳಿಗೆ ಆರ್.ಧ್ರುವನಾರಾಯಣ್ ಭೂಮಿ ಪೂಜೆ
ಮೈಸೂರು

ಅಭಿವೃದ್ಧಿ ಕಾಮಗಾರಿಗಳಿಗೆ ಆರ್.ಧ್ರುವನಾರಾಯಣ್ ಭೂಮಿ ಪೂಜೆ

March 6, 2019

ತಿ.ನರಸೀಪುರ: ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಕ್ರೀಯಾ ಯೋಜನೆಯನ್ನು ರೂಪಿಸಿಕೊಳ್ಳಬೇಕು ಎಂದು ಸಂಸದ ಆರ್.ಧ್ರುವನಾರಾಯಣ್ ಹೇಳಿದರು. ತಾಲೂಕಿನ ಮಲಿಯೂರು ಗ್ರಾಮದಲ್ಲಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 45 ಲಕ್ಷ ರೂ.ಗಳ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಪ.ಜಾತಿ ಮತ್ತು ಪ.ಪಂಗಡ ಸಮುದಾಯಗಳ ಜನರು ವಾಸಿಸುವ ಗ್ರಾಮಗಳ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಕೇಂದ್ರ ಸರ್ಕಾರ ಆದರ್ಶ ಗ್ರಾಮ ಯೋಜನೆಯನ್ನು ರೂಪಿಸಿದೆ. ರಸ್ತೆ…

1 67 68 69 70 71 194
Translate »