ಡಿ.ದೇವರಾಜ ಅರಸು ಹೈಟೆಕ್ ಆಸ್ಪತ್ರೆಗೆ ಸಚಿವ ಜಿಟಿಡಿ ಗುದ್ದಲಿ ಪೂಜೆ
ಮೈಸೂರು

ಡಿ.ದೇವರಾಜ ಅರಸು ಹೈಟೆಕ್ ಆಸ್ಪತ್ರೆಗೆ ಸಚಿವ ಜಿಟಿಡಿ ಗುದ್ದಲಿ ಪೂಜೆ

March 6, 2019

ಹುಣಸೂರು: ನಗರದ ಬೈಪಾಸ್ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಬಳಿ 4.5 ಎಕರೆ ವಿಸ್ತೀರ್ಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್ ಘಟಕದಿಂದ 25 ಕೋಟಿ ರೂ. ವೆಚ್ಚದಲ್ಲಿ ಡಿ.ದೇವರಾಜ ಅರಸು ಸಾರ್ವಜನಿಕ ಹೈಟೆಕ್ ಆಸ್ಪತ್ರೆ ಕಟ್ಟಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೆಗೌಡ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಹುಣಸೂರು ವಿಸ್ತಾರವಾಗಿ ಬೆಳೆದಿರುವ ಉಪವಿಭಾಗ ಕೇಂದ್ರವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಹೈಟೆಕ್ ತಂತ್ರಜ್ಞಾನವನ್ನೊಳಗೊಂಡ 100 ಹಾಸಿಗೆಗಳ ಸಾಮಥ್ರ್ಯದ ಸುಸಜ್ಜಿತ ಆಸ್ಪತ್ರೆ ಮೊದಲ ಮತ್ತು ಎರಡನೇ ಮಹಡಿಯನ್ನು ಹೊಂದಿದ್ದು, ಎಲ್ಲಾ ಅಧುನಿಕ ಸಕಲ ಸೌಲಭ್ಯಗಳನ್ನು ಒಳಗೊಳ್ಳಲಿದೆ ಎಂದು ತಿಳಿಸಿದರು.

ಶಾಸಕ ಹೆಚ್.ವಿಶ್ವನಾಥ್ ಮಾತನಾಡಿ, ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಈ ಆಸ್ಪತ್ರೆಯ ಆವರಣದಲ್ಲೇ 18 ಕೋಟಿ ರೂ. ವೆಚ್ಚದಲ್ಲಿ ತಾಯಿ, ಶಿಶು ವಿಭಾಗ ಮತ್ತು ಹೆರಿಗೆ ವಿಭಾಗವನ್ನು ಸಹ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಅನುದಾನವನ್ನೂ ಸಹ ಒದಗಿಸಿಕೊಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಪಂ ಉಪಾಧÀ್ಯಕ್ಷೆ ಗೌರಮ್ಮ ಸೋಮಶೇಖರ್, ಸದಸ್ಯರಾದ ಕಾಟನಾಯಕ, ಗೌರಮ್ಮ, ಪುಷ್ಪಾವತಿ, ಸಾವಿತ್ರಮ್ಮ, ಸುರೇಂದ್ರ, ತಾಪಂ ಉಪಾಧ್ಯಕ್ಷ ಪ್ರೇಮ್, ಸದಸ್ಯೆ ಪುಟ್ಟಮ್ಮ, ತಟ್ಟೆಕೆರೆ ಶ್ರೀನಿವಾಸ್, ಕುಮಾರ್, ನಗರಸಭಾ ಅಧÀ್ಯಕ್ಷ ಹೆಚ್.ವೈ.ಮಹದೇವು, ಮಾಜಿ ಅಧÀ್ಯಕ್ಷ ಹೆಚ್.ಎನ್.ಚಂದ್ರಶೇಖರ್, ನಗರಸಭಾ ಸದಸ್ಯರಾದ ಮಹಮದ್ ಷಫಿ, ಡೊಲೊ ಷಪಿ, ಯೋಗಾನಂದ, ಡಿಹೆಚ್‍ಓ ಬಸವರಾಜ್, ಟಿಹೆಚ್‍ಓ ಡಾ.ಕೀರ್ತಿಕುಮಾರ್, ತಹಶೀಲ್ದಾರ್ ಬಸವರಾಜು, ಮುಖಂಡರಾದ ಕುಮಾರ್, ಸರ್ದಾರ್, ಹರೀಶ್, ಅಣ್ಣಯ್ಯ ನಾಯಕ, ನಿಂಗರಾಜು, ಗೊವಿಂದೇಗೌಡ, ಬಸವಲಿಂಗು, ಬಿಳಿಕೆರೆ ರಾಜು ಸೇರಿದಂತೆ ಅನೇಕ ಮುಖಂಡರಿದ್ದರು.

Translate »