ಮೈಸೂರು: ಪ್ರವಾಸಿ ಹಿಂದಿ ಸಾಹಿತ್ಯ ಭಿನ್ನ ಸಂಸ್ಕøತಿಗಳ ಸಮ್ಮಿ ಲನವಾಗಿದ್ದು, ಓದುಗರಿಗೆ ವೈವಿಧ್ಯಮಯ ಲೋಕವನ್ನು ಪರಿಚಯಿಸಿ ವಿನೂತನ ಅನು ಭವ ನೀಡಲಿದೆ ಎಂದು ಬ್ರಿಟನ್‍ನ ಹಿಂದಿ ಲೇಖಕಿ ಉಷಾರಾಜೇ ಸಕ್ಸೇನಾ ಹೇಳಿದರು.
ಮೈಸೂರು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿಯ ಹಿಂದಿ ಅಧ್ಯಯನ ವಿಭಾಗ, ಆಗ್ರಾದ ಕೇಂದ್ರೀಯ ಹಿಂದಿ ಸಂಸ್ಥಾನದ ಜಂಟಿ ಆಶ್ರಯದಲ್ಲಿ `ಪ್ರವಾಸಿ ಹಿಂದಿ ಸಾಹಿತ್ಯ ಸಂವೇದನೆಯ ವಿಭಿನ್ನ ಸಂದರ್ಭಗಳು’ ಕುರಿತಂತೆ ಹಮ್ಮಿಕೊಂಡಿರುವ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರವಾಸಿ ಹಿಂದಿ ಲೇಖಕರು ತಾವು ನೆಲೆಸಿದ ದೇಶ-ಭಾಷೆ ಹಾಗೂ ಸಂಸ್ಕøತಿ ಗಳ ಜೊತೆಗೆ ತಮ್ಮ ಮಾತೃಭೂಮಿಯ ಸಂಸ್ಕøತಿಯನ್ನು ಬೆಸೆಯುತ್ತಾರೆ. ಈ ಹಿನ್ನೆಲೆ ಯಲ್ಲಿ ಪ್ರವಾಸಿ ಹಿಂದಿ ಸಾಹಿತ್ಯ ಭಾರ ತೀಯ ಮುಖ್ಯವಾಹಿನಿಯ ಹಿಂದಿ ಸಾಹಿತಿಗಳಿಗಿಂತ ವಿಭಿನ್ನ. ಹೀಗಾಗಿ ಇದು ಹಿಂದಿ ಭಾಷೆಯ ಓದುಗರಿಗೆ ಹೊಸ ಅನುಭವ ನೀಡಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗರಾಜು ಗಾಂಧಿ ಮಾತನಾಡಿ, ಉನ್ನತ ಶಿಕ್ಷಣ, ಉದ್ಯೋಗ ಸೇರಿದಂತೆ ಅನೇಕ ಕಾರಣಗಳಿಗಾಗಿ ವಿದೇಶ ಗಳಿಗೆ ವಲಸೆ ಹೋಗುವುದನ್ನು ಕಾಣು ತ್ತೇವೆ. ಹೀಗೆ ಹೋಗುವಾಗ ನಮ್ಮ ಸಂಸ್ಕø ತಿಯು ನಮ್ಮೊಂದಿಗೆ ಬರುತ್ತದೆ. ಆ ಮೂಲಕ ಮಾತೃಭೂಮಿ ಸಂಬಂಧ ಹೊಸ ವಾತಾ ವರಣದಲ್ಲೂ ನಮ್ಮಲ್ಲಿದ್ದು, ಅಲ್ಲಿನ ಸಂಸ್ಕø ತಿಗೂ ಹೊಂದಿಕೊಳ್ಳಬೇಕಾದ ಅಗತ್ಯತೆ ಉದ್ಭವಿಸುತ್ತದೆ. ಈ ಅನುಭವಗಳು ಅಕ್ಷರ ರೂಪಕ್ಕಿಳಿದರೆ ಹೊಸ ಭಾವ ಅನಾವರಣ ಗೊಳ್ಳುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದಿ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಪ್ರತಿಭಾ ಮುದಲಿಯಾರ್, ವಿದೇಶದಲ್ಲಿ ನೆಲೆಸಿ ಭಾರತೀಯ ಮೂಲದ ಹಿಂದಿ ಬರಹ ಗಾರರು ಸಾಹಿತ್ಯ ಅರ್ಥ ಮಾಡಿಕೊಳ್ಳು ವುದು, ಅವರ ಜೀವನದ ಹೋರಾಟಗಳು ಸಾಮಾಜಿಕ ವಾತಾವರಣ ಮೊದಲಾದವು ಗಳನ್ನು ಅರಿತುಕೊಳ್ಳಲು ಈ ವಿಚಾರ ಸಂಕಿರಣ ವೇದಿಕೆಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ.ಪ್ರತಿಭಾ ಮುದಲಿಯಾರ್ ಸಂಪಾದಕತ್ವದಲ್ಲಿ ಹೊರತಂದಿರುವ `ಪ್ರವಾಸಿ ಹಿಂದಿ ಸಾಹಿತ್ಯ ಸಂವೇದನಾ ಕೆ ವಿವಿಧ ಸಂದ್’ ಕೃತಿ ಯನ್ನು ಉಷಾರಾಜೇ ಸಕ್ಸೇನಾ ಬಿಡುಗಡೆ ಮಾಡಿದರು. ಮಾರಿಷಸ್, ಚೀನಾ ಮತ್ತು ಬ್ರಿಟನ್ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿರುವ ಸಂಪನ್ಮೂಲ ವ್ಯಕ್ತಿಗಳು ಪ್ರವಾಸಿ ಹಿಂದಿ ಸಾಹಿತ್ಯದ ವಿವಿಧ ಆಯಾಮ ಕುರಿತಂತೆ ವಿಷಯ ಮಂಡಿಸಿ ದರು. ದೇಶ-ವಿದೇಶಗಳಿಂದ ಹಿಂದಿ ಲೇಖ ಕರು, ಅಧ್ಯಾಪಕರು ಹಾಗೂ ವಿದ್ಯಾರ್ಥಿ ಗಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ.
ಕೇರಳದ ಕೊಚ್ಚಿನ್‍ನ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ. ಆರ್.ಶಶಿಧರ್, ಕೇಂದ್ರೀಯ ಹಿಂದಿ ಸಂಸ್ಥಾನದ ಪ್ರೊ. ರಾಮ್‍ವೀರ್ ಸಿಂಗ್, ಪ್ರಕಾಶಕ ರಿಷಬ್ ವಾಜಪೇಯಿ ಮತ್ತಿತರರು ಹಾಜರಿದ್ದರು.