ಸವಿತಾ ಸಮಾಜದವರಿಗೆ ಕ್ರಿಕೆಟ್ ಪಂದ್ಯಾವಳಿ
ಮೈಸೂರು

ಸವಿತಾ ಸಮಾಜದವರಿಗೆ ಕ್ರಿಕೆಟ್ ಪಂದ್ಯಾವಳಿ

March 7, 2019

ಮೈಸೂರು: ಕರ್ನಾಟಕ ರಾಜ್ಯ ಸವಿತಾ ಸಮಾಜದ ಎನ್.ಆರ್. ಕ್ಷೇತ್ರ ಘಟಕದ ವತಿಯಿಂದ ಮಾ.12ರಂದು ಹುತಾತ್ಮ ಭಾರತೀಯ ಯೋಧರ ನೆನಪಿ ನಲ್ಲಿ ಸವಿತಾ ಸಮುದಾಯದವರಿಗಾಗಿ 2ನೇ ವರ್ಷದ ಜಿಲ್ಲಾ ಮಟ್ಟದ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿ ಸಿದೆ. ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಮೈದಾನದಲ್ಲಿ ಪಂದ್ಯಾವಳಿಗೆ ಈಗಾಗಲೇ ಸವಿತಾ ಸಮಾಜದ 8 ತಂಡ ಗಳು ನೋಂದಾಯಿಸಿಕೊಂಡಿದ್ದು, ಇನ್ನೂ 4 ತಂಡಗಳು ಬರುವ ನಿರೀಕ್ಷೆ ಇದೆ ಎಂದು ಸವಿತಾ ಸಮಾಜದ ಜಿಲ್ಲಾ ಧ್ಯಕ್ಷ ಎನ್.ಆರ್.ನಾಗೇಶ್ ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾಜವನ್ನು ಕ್ರೀಡಾ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಸವಿತಾ ಸಮಾಜದವರಿಗೆ ಮಾತ್ರ ಅವಕಾಶವಿದೆ. ನಿಗದಿತ 5 ಓವರುಗಳ ಪಂದ್ಯಾವಳಿಯಲ್ಲಿ ಮೊದಲನೇ ಬಹುಮಾನ ರೂ. 15,000, 2ನೇ ಬಹುಮಾನ 7,500 ಹಾಗೂ ವೈಯಕ್ತಿಕ ಬಹುಮಾನಗಳಿರುತ್ತವೆ. ಪಂದ್ಯ ಪುರುಷೋತ್ತಮ, ಉತ್ತಮ ಬ್ಯಾಟ್ಸ್‍ಮನ್, ಉತ್ತಮ ಬೌಲರ್ ಪ್ರಶಸ್ತಿಗಳನ್ನು ನೀಡಲಾಗು ವುದು ಎಂದರು. ಮಾ.12ರಂದು ಬೆಳಿಗ್ಗೆ 10 ಗಂಟೆಗೆ ಮಾಜಿ ಸಚಿವ ಸಿ.ಹೆಚ್.ವಿಜಯ ಶಂಕರ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಎಂಬಿಎ ಕಾಲೇಜು ಅಧ್ಯಕ್ಷ ಎಂ.ಬಿ.ಶಿವಕುಮಾರ್ ಇತರರು ಭಾಗವಹಿಸಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಸಮಾಜದ ಎನ್.ಆರ್.ಕ್ಷೇತ್ರದ ಅಧ್ಯಕ್ಷ ಎಸ್.ಬಾಲು, ನಗರಾಧ್ಯಕ್ಷ ವಿ.ರಾಜಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಹರೀಶ್, ಪದಾಧಿಕಾರಿಗಳಾದ ಆರ್.ಪ್ರಕಾಶ್, ಹೂಟಗಳ್ಳಿ ಹರೀಶ್ ಇದ್ದರು.

Translate »