ದೇವರಿಗೆ ಕನ್ನಡ ಕಲಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ
ಮೈಸೂರು

ದೇವರಿಗೆ ಕನ್ನಡ ಕಲಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ

March 7, 2019

ಮೈಸೂರು: ಸಂಸ್ಕøತ ಮಾತನಾಡುತ್ತಿದ್ದ ದೇವರಿಗೆ ಕನ್ನಡ ಕಲಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿ ಯಿಂದ ನಡೆದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ವಚನಕಾರರ ಕಾಲಕ್ಕಿಂತ ಮೊದಲು ದೇವತೆಗಳು ಸಂಸ್ಕøತದಲ್ಲಿಯೇ ಮಾತನಾಡುತ್ತಿದ್ದರು. ಅವರು ಪ್ರವರ್ಧ ಮಾನಕ್ಕೆ ಬಂದ ಬಳಿಕವಷ್ಟೇ ದೇವರಿಗೆ ಕನ್ನಡ ಕಲಿಸಿದರು. ಇದರಿಂದ ಸಂಸ್ಕøತ ಮಾತನಾಡುವುದನ್ನು ದೇವರು ಕಾಲ ಕ್ರಮೇಣ ನಿಲ್ಲಿಸಿದರು. ವಚನಕಾರರು ಸಾಮಾ ಜಿಕ ನ್ಯಾಯದ ಪ್ರತಿಬಿಂಬವಾಗಿದ್ದ ಬಸವಣ್ಣ ನವರು ಗುಡಿಗೆ ಹೋಗುವ ಸಂಸ್ಕøತಿಯನ್ನು ತೊಡೆದು ಹಾಕಿದರು ಎಂದು ತಿಳಿಸಿದರು.

ಇತ್ತೀಚೆಗೆ ಯೋಗವನ್ನು ವ್ಯಾಪಾರೀ ಕರಣ ಮಾಡಲಾಗುತ್ತಿದೆ. ಈ ಹಿಂದೆಯೇ ಉರಿಲಿಂಗಪೆದ್ದಿ ಎಂಬ ವಚನಕಾರ ವ್ಯಾಪಾರೀಕರಣವಾಗುತ್ತಿರುವ ಯೋಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನು ವ್ಯಾಪಾರೀಕರಣ ಮಾಡುತ್ತಿರುವವರು ಮನಗಾಣಬೇಕು. ಬಾಬಾ ರಾಮದೇವ್ ಸೇರಿದಂತೆ ಹಲವರು ಇಂದು ಯೋಗ ವನ್ನು ವಾಣಿಜ್ಯೀಕರಣ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

ಲಿಂಗಾಯತರನ್ನು ಶೂದ್ರರು ಎಂದು ಮದ್ರಾಸ್ ಹೈಕೋರ್ಟ್ ಸ್ವಾತಂತ್ರ ್ಯ ಪೂರ್ವದಲ್ಲೇ ತೀರ್ಪು ನೀಡಿದೆ. ಶೂದ್ರರು ಎಂಬ ಕಾರಣಕ್ಕೆ ಇಂದಿಗೂ ನಂಜನ ಗೂಡು ತಾಲೂಕಿನ ಹೆಗ್ಗಡಹಳ್ಳಿಯಲ್ಲಿ ಕುಡಿಯುವ ನೀರನ್ನು ಬ್ರಾಹ್ಮಣರು ಕೊಡು ತ್ತಿಲ್ಲ. ಇಂತಹ ಜಾತೀಯತೆ ತಾಂಡವವಾಡುತ್ತಿದೆ. ಗುಣವಿದ್ದವರನ್ನು ಗುಣವಂತ ಎನ್ನುವಂತೆ ಲಿಂಗವಿದ್ದವ ರನ್ನು ಲಿಂಗವಂತ ಎನ್ನಬೇಕು. ಲಿಂಗಾ ಯತ ಎಂಬುದು ಸ್ವತಂತ್ರ ಧರ್ಮ. ಇದೀಗ ಅದರಲ್ಲಿ ಕುಂಬಾರ ಲಿಂಗಾ ಯತ, ಮಡಿವಾಳ ಲಿಂಗಾಯತ ಎಂಬ ತಾರತಮ್ಯವೂ ಆರಂಭವಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಜಾತಿ-ಧರ್ಮಗಳ ನಡುವೆ ತಾರತಮ್ಯ ನಡೆಸುವುದು ಸರಿಯಲ್ಲ. ಬಿಜೆಪಿ ಈ ಹಿಂದಿನಿಂದಲೂ ಪ್ರತಿಭೆ ಮತ್ತು ಸಾಮಥ್ರ್ಯಕ್ಕೆ ಆದ್ಯತೆ ನೀಡುತ್ತಾ ಬಂದಿದೆ. ಜಾತಿ, ಧರ್ಮಕ್ಕೆ ಮಣೆ ಹಾಕದೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಹಾಗೂ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಕೀರ್ತಿ ಬಿಜೆಪಿಗೆ ಸೇರಿದೆ ಎಂದು ತಿಳಿಸಿದರು.

ಸರ್ವಜನಾಂಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ಉಪಾಧ್ಯಕ್ಷ ಜವ ರಯ್ಯ, ಕನ್ನಡ ಪರ ಹೋರಾಟಗಾರ ತಾಯೂರು ವಿಠಲಮೂರ್ತಿ, ಸೋಮಯ್ಯ ಮಲೆಯೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »