ಸಂವಿಧಾನದ 370ನೇ ವಿಧಿ ರದ್ದುಪಡಿಸಲು ತಜ್ಞರ ಒತ್ತಾಯ
ಮೈಸೂರು

ಸಂವಿಧಾನದ 370ನೇ ವಿಧಿ ರದ್ದುಪಡಿಸಲು ತಜ್ಞರ ಒತ್ತಾಯ

March 7, 2019

ಮೈಸೂರು: ಸವ ಲತ್ತು ದುರುಪಯೋಗ ಮತ್ತು ದೇಶ ವಿರೋಧಿ ಮನೋಭಾವನೆಯನ್ನು ಬೆಳೆ ಯುತ್ತಿರುವ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಭಾರತ ಸಂವಿ ಧಾನದ 370 ಹಾಗೂ 35ಂ ವಿಧಿಯನ್ನು ರದ್ದುಪಡಿಸಬೇಕು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ `370ನೇ ವಿಧಿಯ ರದ್ಧತಿ ಆಯಾಮ ಗಳು ಮತ್ತು ಪರಾಮರ್ಶೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ತಜ್ಞರು ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾ ರಣಾ ಸಮಿತಿ, ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜು ಸಂವಿಧಾನ ವಿಭಾಗ ಜಂಟಿಯಾಗಿ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

ರೀಸರ್ಚ್ ಅಂಡ್ ಅನಲೈಸಿಂಗ್ ವಿಂಗ್ (ರಾ ಸಂಸ್ಥೆ) ನಿವೃತ್ತ ಅಧಿಕಾರಿಗಳು ಸಂವಿಧಾನದ 370 ಮತ್ತು 35(ಎ) ಕುರಿತ ವಿಷಯ ಮಂಡಿಸಿ, ಇದನ್ನು ರದ್ದು ಪಡಿಸುವಂತೆ ಆಗ್ರಹಿಸಿದರು.

ವಿಧಿ 370ರ ಅಡಿಯಲ್ಲಿ ಸವಲತ್ತುಗಳ ದುರುಪಯೋಗವಾಗುತ್ತಿದೆ. ದೇಶ ವಿರೋಧಿ ಭಾವನೆಗಳು ಬೆಳೆಯುತ್ತಿವೆ. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಾನಾ ಸಮಸ್ಯೆ, ಗೊಂದಲಗಳಿಗೆ ಕಾರಣವಾಗುತ್ತಿದೆ. ಅಂದಿನ ಕಾಲಘಟ್ಟದಲ್ಲಿ ಸಮನ್ವಯ ಸಾಧಿಸುವ ದೃಷ್ಟಿಯಿಂದ ಒದಗಿಸಲಾದ 370ನೇ ವಿಧಿ ಇತ್ತೀಚೆಗೆ ದುರುಪಯೋಗ ವಾಗುತ್ತಿದೆ. ಇದರ ಬಗ್ಗೆ ಇದುವರೆಗಿನ ಆಡಳಿತ ಪಕ್ಷಗಳು ತಲೆ ಕೆಡಿಸಿಕೊಂಡಿಲ್ಲ. ಇವೆಲ್ಲವನ್ನೂ ಪರಿಗಣಿಸಿದರೆ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತಿರುವ 370ನೇ ವಿಧಿ ರದ್ದಾಗಬೇಕು ಎಂದು ರಾ ಸಂಸ್ಥೆಯ ನಿವೃತ್ತ ಉಪ ಆಯುಕ್ತ ಮೋಹನ್ ಸುಬ್ಬಯ್ಯ ಅಭಿಪ್ರಾಯಪಟ್ಟರು.

ರಾ ಸಂಸ್ಥೆಯ ನಿವೃತ್ತ ಅಧಿಕಾರಿ ಡೇವಿಡ್ ಮಾತನಾಡಿ, ಪುಲ್ವಾಮಾ ಘಟನೆಯಲ್ಲಿ ಭದ್ರತೆ ಲೋಪವಾಗಿರುವ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಇಸ್ರೇಲ್ ಸೇರಿದಂತೆ ಸಮರ್ಥ ಗುಪ್ತಚಾರ ಸಂಸ್ಥೆ ಗಳಲ್ಲೂ ಭದ್ರತೆ ಲೋಪವಾಗುತ್ತದೆ. ಯಾವ ಸಂಸ್ಥೆಯು 100% ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಪುಲ್ವಾ ಮಾದಲ್ಲೂ ಭದ್ರತೆ ಲೋಪವಾಗಿದೆ. ಆದರೆ ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಾ ಗಿದೆ. ಇದಕ್ಕೆ ವಿಶೇಷ ಸ್ಥಾನಮಾನವೂ ಕಾರಣವಾಗಿದೆ. ಪ್ರತ್ಯೇಕತಾವಾದಿಗಳ ಮನೋಧರ್ಮ ಬದಲಾಗಬೇಕು. ಇಲ್ಲದಿ ದ್ದರೆ ಭಾರತ ಪರಮಾಧಿಕಾರ ಉಳಿಯು ವುದು ಕಷ್ಟವಾಗುತ್ತಿದೆ. ಹೀಗಾಗಿ ಯುವಕರಿಗೆ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ರಾಜ್ಯಾಧ್ಯಕ್ಷ ಡಾ. ಸುಧಾಕರ ಹೊಸಳ್ಳಿ ಮಾತನಾಡಿ, ಭಾರತ ಮಾತೆಗೆ ಕಾಶ್ಮೀರ ಅಂಗವಿಕಲ ಮಗು ಇದ್ದಂತೆ. ಈ ಮಗುವಿನ ಅಭಿವೃದ್ಧಿಗೆ ತಾಯಿ ವಿಶೇಷ ಕಾಳಜಿ ವಹಿಸಿ, ಸವಲತ್ತು ಗಳನ್ನು ನೀಡಿದ್ದಳು. ಆದರೆ ಆ ಮಗು ಇತರೆ ಮಗುವನ್ನು ಒದ್ದು, ತಾಯಿಗೂ ಅಪಾಯ ತಂದೊಡ್ಡಿದ ಮೇಲೆ ಆ ವಿಶೇಷ ಸವಲತ್ತು ಕಿತ್ತುಕೊಳ್ಳುವ ರೀತಿಯಲ್ಲಿ ಈಗ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370ನೇ ವಿಧಿ ರದ್ದುಪಡಿಸುವುದು ಅಗತ್ಯ. ಇದನ್ನು ಸಾಮಾನ್ಯ ತಿದ್ದುಪಡಿ ಮೂಲಕ ರದ್ದುಪಡಿಸಬಹುದಾಗಿದೆ. ಆದರೆ ಇದಕ್ಕೆ ಮತ ಬ್ಯಾಂಕ್ ಮತ್ತು ಮತೀಯ ವಾದ ಅಡ್ಡಿಯಾ ಗಿದೆ ಎಂದು ಬೇಸರದಿಂದ ನುಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ, ಹಿರಿಯ ನ್ಯಾಯವಾದಿ ಶ್ಯಾಮ್ ಭಟ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‍ಬಾಬು ಉಪಸ್ಥಿತರಿದ್ದರು.

Translate »