ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಹರೀಶ್ ಹಳ್ಳಿ ಎಂಬುವವರು ಹೈಕೋರ್ಟ್ ನಲ್ಲಿ ಪಿಐಎಲ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಜಂತಕಲ್ ಅಕ್ರಮ ಮೈನಿಂಗ್ ಪ್ರಕರಣದಲ್ಲಿ ಹೆಚ್‍ಡಿಕೆ ಮೇಲೆ ದೋಷಾರೋಪ ಪಟ್ಟಿ ಯಾಕೆ ಸಲ್ಲಿಕೆ ಮಾಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಲೋಕಾಯುಕ್ತ ರಿಜಿಸ್ಟ್ರಾರ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾವಣಗೆರೆಯ ಹರೀಶ್ ಹಳ್ಳಿ ಎಂಬುವರ ಸಲ್ಲಿಸಿದ್ದು, 2015ರಲ್ಲಿ ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ತನಿಖೆ ನಡೆಸುತ್ತಿದೆ. 2017ರಲ್ಲೆ ಚಾರ್ಜ್‍ಶೀಟ್ ಸಲ್ಲಿಸಲು ಎಸ್‍ಐಟಿ ಸಿದ್ಧವಿದ್ದರೂ…
ಹಾಸನ ಶಾಸಕ ಪ್ರೀತಂಗೌಡ ಮನೆ ಮೇಲೆ ದಾಳಿ ಖಂಡಿಸಿ ಮೈಸೂರಲ್ಲಿ ಬಿಜೆಪಿ ಪ್ರತಿಭಟನೆ
February 15, 2019ಫೆ.24ರೊಳಗೆ ಬಡ ರೈತರಿಗೆ ಕೇಂದ್ರ ನೆರವಿನ ಮೊದಲ ಕಂತು ಬಿಡುಗಡೆ ನವದೆಹಲಿ: ಬಜೆಟ್‍ನಲ್ಲಿ ಘೋಷಣೆ ಮಾಡಿರುವಂತೆ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಹಾಗೂ ಸಣ್ಣ ರೈತರಿಗೆ ಪಿಎಂ ಕಿಸಾನ್ ಯೋಜನೆ ಅಡಿ ಶೀಘ್ರವೇ 2 ಸಾವಿರ ರೂಗಳನ್ನ ಅವರ ಖಾತೆಗೆ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಶೀಘ್ರವೇ ಪಿಎಂ ಮೋದಿ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ಶೀಘ್ರವೇ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಕೃಷಿ ಸಚಿವಾ ಲಯದ ಉನ್ನತ ಅಧಿಕಾರಿಗಳು ಮಾಹಿತಿ ನೀಡಿ ದ್ದಾರೆ….
ಬಿಸಿಯೂಟ ತಯಾರಕರ ಪ್ರತಿಭಟನೆ
February 15, 2019ಮೈಸೂರು: ಖಾಯಂ ಮಾಡಿ ಕನಿಷ್ಠ ವೇತನ 18 ಸಾವಿರ ನಿಗದಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರಿ ನಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಎಐಟಿ ಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಸಿಯೂಟ ತಯಾರಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ದಲ್ಲಿ 1.18 ಲಕ್ಷ ಬಿಸಿಯೂಟ ತಯಾರ ಕರು ಕಳೆದ 15…
ಹಾಸನ ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲು: 8 ಮಂದಿ ಬಂಧನ
February 15, 2019ಹಾಸನ: ಶಾಸಕ ಪ್ರೀತಂ ಜೆ.ಗೌಡ ಅವರ ಮನೆ ಮೇಲೆ ಬುಧವಾರ ನಡೆದ ಕಲ್ಲು ತೂರಾಟ ಪ್ರಕರಣ ಸಂಬಂಧ ಹಾಸನ ನಗರ ಪೊಲೀಸರು ಜನ ಪ್ರತಿನಿಧಿಗಳು ಸೇರಿದಂತೆ 8 ಜನ ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಜಿಪಂ ಸದಸ್ಯ ಸ್ವರೂಪ್, ನಗರಸಭೆ ಸದಸ್ಯರಾದ ಪ್ರಶಾಂತ್, ಗಿರೀಶ್, ಮಾಜಿ ಅಧ್ಯಕ್ಷ ಅನೀಲ್‍ಕುಮಾರ್, ಮಾಜಿ ಸದಸ್ಯ ಭಾನುಪ್ರಕಾಶ್, ಜೆಡಿಎಸ್ ಮುಖಂಡ ರಾದ ಕಮಲ್‍ಕುಮಾರ್, ಜಗದೀಶ್, ಚಂದ್ರು ಕಾಟೀಹಳ್ಳಿ ಬಂಧಿತ ಆರೋಪಿ ಗಳು. ಘಟನೆಯ ವಿವರ: ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಬಿಡುಗಡೆ ಯಾಗಿರುವ ಆಡಿಯೋ…
ಕುಂಭಮೇಳಕ್ಕೆ ಸಜ್ಜಾಗುತ್ತಿದೆ ತಿರುಮಕೂಡಲು
February 15, 2019ತಿ.ನರಸೀಪುರ: ದಕ್ಷಿಣದ ಪ್ರಯಾಗ, ಕಾಶಿಯಂತಹ ಪವಿತ್ರ ಕ್ಷೇತ್ರ ಎನಿಸಿಕೊಂಡಿರುವ ತಿರುಮಕೂಡಲು ನರಸೀಪುರದಲ್ಲಿ ಜೀವನದಿ ಕಾವೇರಿ, ಕಪಿಲಾನದಿ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರ ಸಂಗಮವಾಗಿದೆ. ಈ ಪುಣ್ಯ ಕ್ಷೇತ್ರದಲ್ಲಿ ಈ ಬಾರಿ 11ನೇ ಕುಂಭಮೇಳ ನಡೆಯಲಿದ್ದು, ದಿನಗಣನೆ ಆರಂಭವಾಗಿದೆ. ಫೆ.17ರಿಂದ ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ಉತ್ಸವಕ್ಕೆ ತ್ರಿವೇಣಿ ಸಂಗಮದಲ್ಲಿ ಸಿದ್ಧತೆ ಕಾರ್ಯಗಳು ಭರ ದಿಂದ ಸಾಗಿವೆ. ಮೂರು ದಿನಗಳ ಧಾರ್ಮಿಕ ಉತ್ಸವಕ್ಕೆ ತ್ರಿವೇಣಿ ಸಂಗಮದ ಮರಳಿನ ರಾಶಿಯ ಮೇಲೆ ಯಾಗ ಮಂಟಪ, ಸಮಾರಂಭದ ವೇದಿಕೆ ನಿರ್ಮಾಣ…
ಬೈಕ್-ಕಾರ್ ನಡುವೆ ಡಿಕ್ಕಿ: ನವದಂಪತಿ ಆಸ್ಪತ್ರೆಗೆ
February 15, 2019ಹುಣಸೂರು: ಒಂದು ದಿನದ ಹಿಂದೆಯಷ್ಟೇ (ಬುಧವಾರ) ಮದುವೆಯಾಗಿದ್ದ ನವ ವಧು-ವರರು ಗುರುವಾರ ಮೈಸೂರಿಗೆ ತೆರಳಿ ಸುತ್ತಾಡಿಕೊಂಡು ವಾಪಸ್ ಮನೆಗೆ ಬರುವಾಗ ಸಂಜೆ ತಾಲೂಕಿನ ಬನ್ನಿಕುಪ್ಪೆ ಬಳಿ ಅಪಘಾತಕ್ಕೀಡಾಗಿ ಮೈಸೂರು ಅಸ್ಪತ್ರೆಗೆ ದಾಖಲಿಸಿದ್ದಾರೆ. ತಾಲೂಕಿನ ಭರತವಾಡಿ ಗ್ರಾಮದ ವೆಂಕಟಶೆಟ್ಟಿ ಅವರ ಮಗ ಹಾಗೂ ಭಾರತೀಯ ಸೇನೆಯ ಸೇವೆಯಲ್ಲಿರುವ ಕುಮಾರ ಹಾಗೂ ಪತ್ನಿ ರಶ್ಮಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಘಟನೆ ವಿವರ: ಹಾಸನ ನಗರದ ತಣ್ಣೀರಹಳ್ಳ ಬಡಾವಣೆಯ ರಶ್ಮಿ ಜತೆ ಕುಮಾರ್ ಮದುವೆ ಬುಧವಾರ ನಡೆದಿತ್ತು. ಗುರುವಾರ ಗ್ರಾಮಕ್ಕೆ…
ಕಟ್ಟೆಮಳಲವಾಡಿ ಯುವತಿ ಆತ್ಮಹತ್ಯೆ: ಆರೋಪಿ ಪ್ರೇಮಿ ಬಂಧನ
February 15, 2019ಹುಣಸೂರು: ಕಟ್ಟೆಮಳಲವಾಡಿಯ ಯುವತಿ ಅರ್ಪಿತಾ ಆತ್ಮಹತ್ಯೆ ಪ್ರಕರಣದಲ್ಲಿ ಆಕೆಯ ಪ್ರಿಯಕರನಾಗಿದ್ದ ಅದೇ ಗ್ರಾಮದ ಯುವಕ ಲೋಕೇಶ್ ಗೌಡನನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿದ್ದ ಲೋಕೇಶ್ ಬಳಿಕ ವಿವಾಹ ವಾಗಲು ನಿರಾಕರಿಸಿ ಸಂಪರ್ಕವನ್ನು ಕಡಿದುಕೊಂಡಿದ್ದರಿಂದ ನೊಂದ ಅರ್ಪಿತಾ, ಮನೆಯಲ್ಲಿ ಯಾರೂ ಇಲ್ಲದಾಗ ಮಂಗಳವಾರ ಆತ್ಮಹತ್ಯೆ ಮಾಡಿ ಕೊಂಡಿದ್ದಳು. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಲೋಕೇಶ್ ಗೌಡ ನನ್ನು ಪೆÇೀಲಿಸರು ತಾಲೂಕಿನ ಹನಗೂಡಿನಲ್ಲಿ ಗುರುವಾರ ಬಂಧಿಸಿದ್ದಾರೆ. ಅರ್ಪಿತಾ ಕಟ್ಟೆಮಳಲವಾಡಿ ಗ್ರಾಮದ ಬಸವರಾಜು ಮತ್ತು ಕಾಂತಮ್ಮ ದಂಪತಿ ಪುತ್ರಿ….
ತೆರಿಗೆ ಸಂಗ್ರಹ ಏಕಗವಾಕ್ಷಿ ವ್ಯವಸ್ಥೆ: ತಂತ್ರಾಂಶ ಅಭಿವೃದ್ಧಿಗೆ ಕೌನ್ಸಿಲ್ ಒಪ್ಪಿಗೆ
February 15, 2019ಮೈಸೂರು: ನಗರ ಪಾಲಿಕೆ ಆರ್ಥಿಕ ವ್ಯವಸ್ಥೆ ಸುಧಾರಣೆ ದೃಷ್ಟಿಯಿಂದ ಏಕಗವಾಕ್ಷಿ ತೆರಿಗೆ ಸಂಗ್ರಹ ಸೇವೆ ನೀಡುವ ಸಾಫ್ಟ್‍ವೇರ್ ಅಭಿವೃದ್ಧಿ ಪಡಿಸಲು ಕೌನ್ಸಿಲ್ ಒಪ್ಪಿಗೆ ದೊರೆತಿದ್ದು, ಈಗಾಗಲೇ ಈ ಆನ್‍ಲೈನ್ ಸೇವೆ ಅಳವ ಡಿಸಿಕೊಂಡಿರುವ ಸ್ಥಳೀಯ ಸಂಸ್ಥೆಗಳಿಗೆ ತೆರಳಿ, ಪರಿಶೀಲಿಸಿದ ನಂತರ ಮುಂದು ವರೆಯಲು ತೀರ್ಮಾನಿಸಲಾಗಿದೆ. ಮೈಸೂರು ನಗರ ಪಾಲಿಕೆಯಲ್ಲಿ ಗುರು ವಾರ ನಡೆದ ಕೌನ್ಸಿಲ್ ಸಭೆಯಲ್ಲಿ, ಬಿಜೆಪಿ ಸದಸ್ಯ ಶಿವಕುಮಾರ್, ಪಾಲಿಕೆಯ ಆರ್ಥಿಕ ಸ್ಥಿತಿ, ತೆರಿಗೆ ಸಂಗ್ರಹದಲ್ಲಿ ಹಿನ್ನಡೆ, ಆದಾಯ ಸೋರಿಕೆ ಇನ್ನಿತರ ವೈಫಲ್ಯಗಳನ್ನು ತಿಳಿಸುವುದರೊಂದಿಗೆ, ಸಾಫ್ಟ್‍ವೇರ್…
ಸಂಗೀತ ವಿವಿ ಕಾರ್ಯವ್ಯಾಪ್ತಿ ವಿಸ್ತರಣೆ: ಹಂಗಾಮಿ ಕುಲಪತಿ ಪ್ರೊ.ನಾಗೇಶ್
February 15, 2019ಮೈಸೂರು: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾ ನಿಲಯವು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಿದೆ. ಜೆಎಲ್‍ಬಿ ರಸ್ತೆಯಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹಂಗಾಮಿ ಕುಲಪತಿ ಪ್ರೊ. ನಾಗೇಶ ವಿ.ಬೆಟ್ಟಕೋಟೆ ಅವರು, ಸ್ವಂತ ಜಾಗ, ಆಡಳಿತ ಕಟ್ಟಡದ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೂ, ಮೈಸೂರು, ಮಂಡ್ಯ ಜಿಲ್ಲೆಗೆ ಸೀಮಿತವಾಗಿದ್ದ ಕಾರ್ಯ ವ್ಯಾಪ್ತಿಯನ್ನು ರಾಜ್ಯದ ಇನ್ನಿತರೆಡೆಗೂ ವಿಸ್ತರಿಸಲು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯು ಅನುಮೋದನೆ ನೀಡಿದೆ ಎಂದರು. ಬೆಂಗಳೂರು,…
ಕುಟುಂಬ ಸಮೇತ ವ್ಯಕ್ತಿ ನಾಪತ್ತೆ
February 15, 2019ಮೈಸೂರು: ವ್ಯಕ್ತಿಯೋರ್ವ ಕುಟುಂಬ ಸಮೇತ ನಾಪತ್ತೆಯಾಗಿರುವ ಬಗ್ಗೆ ಮೈಸೂರಿನ ಯರಗನಹಳ್ಳಿಯಿಂದ ವರದಿಯಾಗಿದೆ. ಯರಗನಹಳ್ಳಿಯಲ್ಲಿ ವಾಸವಿದ್ದು, ಬನ್ನೂರು ರಸ್ತೆಯಲ್ಲಿ ಹೋಟೆಲ್ ನಡೆಸುತ್ತಿದ್ದ ರಘು(30), ತಮ್ಮ ಪತ್ನಿ ಶಾಂತ(30), ಪುತ್ರಿ ಯಶಸ್ವಿನಿ ಮತ್ತು ಪುತ್ರ ಚಂದನ್(2) ಅವರೊಂದಿಗೆ ಫೆ.11ರಂದು ಬೆಳಿಗ್ಗೆ 5 ಗಂಟೆಯಿಂದ ನಾಪತ್ತೆಯಾಗಿದ್ದಾರೆ ಎಂದು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರ ಬಗ್ಗೆ ಮಾಹಿತಿ ಇರುವವರು ಆಲನಹಳ್ಳಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2418311ನ್ನು ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.