ಹಾಸನ ಶಾಸಕ ಪ್ರೀತಂಗೌಡ ಮನೆ ಮೇಲೆ  ದಾಳಿ ಖಂಡಿಸಿ ಮೈಸೂರಲ್ಲಿ ಬಿಜೆಪಿ ಪ್ರತಿಭಟನೆ
ಮೈಸೂರು

ಹಾಸನ ಶಾಸಕ ಪ್ರೀತಂಗೌಡ ಮನೆ ಮೇಲೆ ದಾಳಿ ಖಂಡಿಸಿ ಮೈಸೂರಲ್ಲಿ ಬಿಜೆಪಿ ಪ್ರತಿಭಟನೆ

February 15, 2019

ಫೆ.24ರೊಳಗೆ ಬಡ ರೈತರಿಗೆ ಕೇಂದ್ರ ನೆರವಿನ ಮೊದಲ ಕಂತು ಬಿಡುಗಡೆ
ನವದೆಹಲಿ: ಬಜೆಟ್‍ನಲ್ಲಿ ಘೋಷಣೆ ಮಾಡಿರುವಂತೆ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಹಾಗೂ ಸಣ್ಣ ರೈತರಿಗೆ ಪಿಎಂ ಕಿಸಾನ್ ಯೋಜನೆ ಅಡಿ ಶೀಘ್ರವೇ 2 ಸಾವಿರ ರೂಗಳನ್ನ ಅವರ ಖಾತೆಗೆ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಶೀಘ್ರವೇ ಪಿಎಂ ಮೋದಿ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ಶೀಘ್ರವೇ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಕೃಷಿ ಸಚಿವಾ ಲಯದ ಉನ್ನತ ಅಧಿಕಾರಿಗಳು ಮಾಹಿತಿ ನೀಡಿ ದ್ದಾರೆ. ಬಜೆಟ್‍ನಲ್ಲಿ ಸುಮಾರು 75 ಸಾವಿರ ಕೋಟಿ ರೂ. ಮೊತ್ತದ ಈ ಯೋಜನೆಯನ್ನು ಪ್ರಕಟಿಸಲಾಗಿತ್ತು. ಉತ್ತರಪ್ರದೇಶದ 1 ಕೋಟಿ ಸೇರಿ 12 ಕೋಟಿ ರೈತರಿಗೆ ಈ ಯೋಜನೆ ಪ್ರಯೋಜನ ದೊರೆಯಲಿದೆ. ದೇಶದ 12 ಕೋಟಿ ಸಣ್ಣ ರೈತರು ಪ್ರತಿವರ್ಷ 3 ಕಂತುಗಳಲ್ಲಿ ತಲಾ 2 ಸಾವಿರ ಪಡೆಯಲಿದ್ದಾರೆ ಎಂದು ಹಣಕಾಸು ಸಚಿವ ಫಿಯೂಷ್ ಗೋಯಲ್ ಪ್ರಕಟಿಸಿದ್ದರು. ಪಿಎಂ ಕಿಸಾನ್ ಪೆÇೀರ್ಟಲ್ ಫೆ.24ರ ಒಳಗೆ ಎಲ್ಲ ರೈತರ ದಾಖಲೆಗಳನ್ನ ಅಪ್‍ಡೇಟ್ ಮಾಡಬೇಕಾಗಿದೆ. ಫೆ.24ರ ಒಳಗೆ ಮೊದಲ ಹಾಗೂ ಏ.1ರ ಒಳಗಾಗಿ 2ನೇ ಕಂತು ರೈತರ ಅಕೌಂಟ್‍ಗೆ ಜಮಾ ಆಗುವ ಸಾಧ್ಯತೆ ಗಳಿವೆ ಎಂದು ಹೇಳಲಾಗಿದೆ. ಉತ್ತರಪ್ರದೇಶದಲ್ಲಿ ಈಗಾಗಲೇ ಎಲ್ಲ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ದಾಖಲೆಗಳನ್ನ ಡಿಜಿಟಲೀಕರಣ ಮಾಡಲಾಗಿದೆ. ಸುಮಾರು 2 ಕೋಟಿ ರೈತರ ಡೇಟಾ ಸಿಕ್ಕಿದೆ ಎಂದು ಅಲ್ಲಿನ ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು 12ಕ್ಕೂ ಹೆಚ್ಚು ರಾಜ್ಯಗಳ ಶೇ.95ರಷ್ಟು ರೈತರ ಡೇಟಾ ಕೇಂದ್ರ ಸರ್ಕಾರಕ್ಕೆ ಲಭ್ಯವಾಗಿದೆ. ಉಳಿದ 9 ರಾಜ್ಯಗಳ ಶೇ.80ರಷ್ಟು ಮಾಹಿತಿ ಸಿಕ್ಕಿದ್ದು, ಇನ್ನೂ ಮಾಹಿತಿ ಸಂಗ್ರಹಿಸುವ ಕೆಲಸ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Translate »