Tag: Mysuru

ಪಾರಂಪರಿಕ ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡ ಸಂರಕ್ಷಿಸಿ
ಮೈಸೂರು

ಪಾರಂಪರಿಕ ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡ ಸಂರಕ್ಷಿಸಿ

February 14, 2019

ಮೈಸೂರು -ಪಾರಂಪರಿಕ ಶೈಲಿಯ ಮೈಸೂರಿನ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕೆಂದು ಪಾರಂಪರಿಕ ತಜ್ಞರ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಸಮಿತಿ ಸದಸ್ಯರಾದ ಪ್ರೊ. ಎನ್.ಎಸ್.ರಂಗ ರಾಜು, ಮೇಜರ್ ಜನರಲ್ (ನಿವೃತ್ತ) ಎಸ್.ಜಿ. ಒಂಭತ್ಕೆರೆ, ಪ್ರೊ. ವಿ.ಎ.ದೇಶಪಾಂಡೆ, ಹೆಚ್.ಡಿ. ನಾಗೇಶ, ಎನ್.ಆರ್.ಅಶೋಕ್ ಹಾಗೂ ಈಚ ನೂರು ಕುಮಾರ್ ಅವರು ಸಹಿ ಮಾಡಿರುವ ಪತ್ರವನ್ನು ಸೋಮವಾರ ರಾಜ್ಯ ಮುಖ್ಯ ಕಾರ್ಯದರ್ಶಿ ತ.ಮ.ವಿಜಯಭಾಸ್ಕರ್ ಅವರಿಗೆ ರವಾನಿಸಿದ್ದಾರೆ. ಶಿಥಿಲಗೊಂಡಿವೆ ಎಂಬ ಕಾರಣ ನೀಡಿ ಮೈಸೂ ರಿನ ದೇವರಾಜ…

3 ವಿಕೆಟ್ ನಷ್ಟಕ್ಕೆ 282: ಸುಸ್ಥಿತಿಯಲ್ಲಿ ಭಾರತ
ಮೈಸೂರು

3 ವಿಕೆಟ್ ನಷ್ಟಕ್ಕೆ 282: ಸುಸ್ಥಿತಿಯಲ್ಲಿ ಭಾರತ

February 14, 2019

ಮೈಸೂರು: ಮೈಸೂ ರಿನ ಮಾನಸಗಂಗೋತ್ರಿಯಲ್ಲಿನ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ(ಗ್ಲೇಡ್ಸ್) ಬುಧವಾರ ಆರಂಭವಾದ ಭಾರತ `ಎ’ ಹಾಗೂ ಇಂಗ್ಲೆಂಡ್ ಲಯನ್ಸ್ ತಂಡದ ನಡುವಿನ ಮೊದಲ ಟೆಸ್ಟ್‍ನಲ್ಲಿ ಆತಿಥೇಯ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದು ಕೊಂಡು 282 ರನ್ ಗಳಿಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಟಾಸ್ ಗೆದ್ದ ಭಾರತ `ಎ’ ತಂಡದ ನಾಯಕ ಕೆ.ಎಲ್.ರಾಹುಲ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು. ಆರಂ ಭಿಕ ಆಟಗಾರರಾಗಿ ಕ್ರೀಸ್‍ಗೆ ಇಳಿದ ಕೆ.ಎಲ್. ರಾಹುಲ್,…

ಗುಣಪಡಿಸಲು ಕಷ್ಟಸಾಧ್ಯವಿರುವ ರೋಗಗಳ ಬಗ್ಗೆ  ಜಾಗೃತಿಗಾಗಿ ಮಾ.3ರಂದು ‘ರೇಸ್ ಫಾರ್ 7’
ಮೈಸೂರು

ಗುಣಪಡಿಸಲು ಕಷ್ಟಸಾಧ್ಯವಿರುವ ರೋಗಗಳ ಬಗ್ಗೆ ಜಾಗೃತಿಗಾಗಿ ಮಾ.3ರಂದು ‘ರೇಸ್ ಫಾರ್ 7’

February 14, 2019

ಮೈಸೂರು: ಗುಣಪಡಿ ಸಲು ಕಷ್ಟ ಸಾಧ್ಯವಿರುವ 7 ಸಾವಿರ ಕಾಯಿಲೆಗಳಿದ್ದು, ಇಂತಹ ರೋಗದಿಂದ ಬಳಲುವವರ ಆರೈಕೆ ಹಾಗೂ ಈ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಆರ್ಗನೈಸೇಷನ್ ಫಾರ್ ರೇರ್ ಡಿಸೀಸ್ ಇಂಡಿಯಾ (ಒಆರ್‍ಡಿಐ) ವತಿಯಿಂದ ಜೆಎಸ್‍ಎಸ್ ಆಸ್ಪತ್ರೆ ಸಹಯೋಗದಲ್ಲಿ ಮಾ.3ರಂದು ‘ರೇಸ್ ಫಾರ್ 7’ ಶೀರ್ಷಿಕೆ ಯಡಿ ಓಟ ಆಯೋಜಿಸಲಾಗಿದೆ ಎಂದು ಒಆರ್‍ಡಿಐ ಸಹ ಸಂಸ್ಥಾಪಕ ಪ್ರಸನ್ನ ಶೀರೋಲ್ ತಿಳಿಸಿದರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅನುವಂಶಿಕ ಕಾಯಿಲೆ ಹಾಗೂ ಅಪರೂಪದ…

ಕೆನರಾ ಬ್ಯಾಂಕ್, ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ  ಕನ್ನಡ ಬಳಕೆ ಬಗ್ಗೆ ಕನ್ನಡ ಜಾಗೃತಿ ಸಮಿತಿ ತೃಪ್ತಿ
ಮೈಸೂರು

ಕೆನರಾ ಬ್ಯಾಂಕ್, ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಕನ್ನಡ ಬಳಕೆ ಬಗ್ಗೆ ಕನ್ನಡ ಜಾಗೃತಿ ಸಮಿತಿ ತೃಪ್ತಿ

February 14, 2019

ಮೈಸೂರು: ಆಡಳಿತ ದಲ್ಲಿ ಕನ್ನಡ ಬಳಕೆಯನ್ನು ಪೂರ್ಣ ಪ್ರಮಾಣ ದಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಮೈಸೂರು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಬುಧವಾರ ಮೈಸೂರಿನ ನಜರ್‍ಬಾದ್ ನಲ್ಲಿರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಪರಿಶೀಲನೆ ನಡೆಸಿ ಕನ್ನಡೇ ತರ ಅಧಿಕಾರಿ ಹಾಗೂ ಸಿಬ್ಬಂದಿಗಾಗಿ ಕನ್ನಡ ಕಲಿಕೆ ಶಿಬಿರ ಆಯೋಜಿಸುವಂತೆ ಬ್ಯಾಂಕಿನ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸುತ್ತೋಲೆ, ಆದೇಶ, ನೋಟೀಸ್, ಕಡತ ದಲ್ಲಿನ ಟಿಪ್ಪಣಿ, ಮೊಹರುಗಳು ಸೇರಿದಂತೆ ಇನ್ನಿತರ ದಾಖಲೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿರುವುದು ಕಂಡು ಬಂತು. ಬ್ಯಾಂಕಿನಲ್ಲಿ ಸಾಕಷ್ಟು…

ವಿಮಾನಯಾನ ಸಚಿವರೊಂದಿಗೆ  ಸಂಸದ ಪ್ರತಾಪ್ ಸಿಂಹ ಚರ್ಚೆ
ಮೈಸೂರು

ವಿಮಾನಯಾನ ಸಚಿವರೊಂದಿಗೆ ಸಂಸದ ಪ್ರತಾಪ್ ಸಿಂಹ ಚರ್ಚೆ

February 14, 2019

ಮೈಸೂರು: ಕೇಂದ್ರ ಸರ್ಕಾರದ `ಉಡಾನ್’ ಯೋಜನೆಯಡಿ ಮೈಸೂರಿನಲ್ಲಿ ಹೆಚ್ಚಿನ ವಿಮಾನ ಹಾರಾಟ ಪ್ರಾರಂಭಿಸುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಉಡಾನ್-3 ಯೋಜನೆಯ 3ನೇ ಹಂತದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ವಿಮಾನಯಾನ ಸಂಪರ್ಕ ಕಲ್ಪಿಸಲು ಮೈಸೂರು-ಬೆಳಗಾಂ, ಮೈಸೂರು -ಹೈದರಾಬಾದ್, ಮೈಸೂರು-ಹೈದರಾಬಾದ್, ಮೈಸೂರು-ಗೋವಾ, ಮೈಸೂರು-ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೈಸೂರು-ಬೆಂಗಳೂರು ವಿಮಾನಗಳ ಹಾರಾಟಕ್ಕೆ ಈಗಾಗಲೇ ವಿಮಾನಯಾನ ಸಚಿವಾಲಯವು ಅನುಮೋದನೆ ನೀಡಿದ್ದು, ಅದನ್ನು ಶೀಘ್ರವಾಗಿ ಪ್ರಾರಂಭಿಸುವಂತೆ…

ಫೆ.24, 25ರಂದು ಉದ್ಯೋಗ ಮೇಳ
ಮೈಸೂರು

ಫೆ.24, 25ರಂದು ಉದ್ಯೋಗ ಮೇಳ

February 14, 2019

ಮೈಸೂರು: ಮೈಸೂರಿನ ಕೌಶ ಲಾಭಿವೃದ್ಧಿ ಇಲಾಖೆಯು ಮೈಸೂರಿ ನಲ್ಲಿ ಹಮ್ಮಿಕೊಂಡಿರುವ ಉದ್ಯೋಗ ಮೇಳ ಪೂರ್ವಭಾವಿ ಸಭೆಯು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆಯಿತು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳಿಗೆ ಫೆ.24 ಮತ್ತು 25ರಂದು ಮೈಸೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಹಲವಾರು ಕಂಪನಿಗಳು ಭಾಗವಹಿಸಲಿವೆ ಇದನ್ನು ಎಲ್ಲಾ ನಿರುದ್ಯೋಗಿಗಳು ಸದುಪ ಯೋಗಪಡಿಸಿಕೊಳ್ಳಬೇಕು ಎಂದರು. ಬರುವಂತಹ ಅಭ್ಯರ್ಥಿಗಳಿಗೆ ನೋಂದಣಿ ಮಾಡಿಸಿಕೊಳ್ಳಲು 10 ಕೌಂಟರ್ ಸ್ಥಾಪಿಸ ಬೇಕು, ಎಲ್ಲಾ ಕಡೆ ಹೆಚ್ಚಿನ ಪ್ರಚಾರ ನೀಡ ಬೇಕು ಮತ್ತು…

ಎಸ್‍ಐಟಿಗೆ ಸಿದ್ದು ಬಿಗಿಪಟ್ಟು: ಹೆಚ್‍ಡಿಕೆ; ಬಿಎಸ್‍ವೈಗೆ ಬಿಕ್ಕಟ್ಟು
ಮೈಸೂರು

ಎಸ್‍ಐಟಿಗೆ ಸಿದ್ದು ಬಿಗಿಪಟ್ಟು: ಹೆಚ್‍ಡಿಕೆ; ಬಿಎಸ್‍ವೈಗೆ ಬಿಕ್ಕಟ್ಟು

February 14, 2019

ಬೆಂಗಳೂರು: ಧ್ವನಿ ಸುರುಳಿಯ ದಾಳ ಬಳಸಿಕೊಂಡ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ನಾಯಕ ಬಿ.ಎಸ್.ಯಡಿ ಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಬ್ಬರೂ ಬೀದಿ ಕಾಳಗದಲ್ಲಿ ತೊಡಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಪರೇಷನ್ ಕಮಲ ಕಾರ್ಯಾಚರಣೆಯ ಧ್ವನಿ ಸುರುಳಿ ಪ್ರಕರಣ ಎಸ್‍ಐಟಿ ತನಿಖೆಗೆ ನೀಡಬಾರದೆಂದು ಕಳೆದ 2 ದಿನಗಳಿಂದ ವಿಧಾನಮಂಡಲದಲ್ಲಿ ನಡೆಸಿದ ಹೋರಾಟಕ್ಕೆ ಸರ್ಕಾರ ಮಣಿದಿಲ್ಲ. ಮುಖ್ಯಮಂತ್ರಿ ಅವರು ಒಂದು ಹಂತದಲ್ಲಿ ಎಸ್‍ಐಟಿ ತನಿಖೆಯಿಂದ ಹಿಂದೆ ಸರಿದು, ಸಭಾಧ್ಯಕ್ಷರು ಹೊಸದಾಗಿ ನೀಡುವ ಆದೇಶಕ್ಕೆ ಸಮ್ಮತಿಸಲು ಮುಂದಾಗಿದ್ದರು. ವಿಧಾನಸಭಾಧ್ಯಕ್ಷ…

`ಆಪರೇಷನ್ ಕಮಲ’ ಆಡಿಯೋ ಪ್ರಕರಣ ತನಿಖೆ ಎಸ್‍ಐಟಿಯೋ, ಸದನ ಸಮಿತಿಯೋ
ಮೈಸೂರು

`ಆಪರೇಷನ್ ಕಮಲ’ ಆಡಿಯೋ ಪ್ರಕರಣ ತನಿಖೆ ಎಸ್‍ಐಟಿಯೋ, ಸದನ ಸಮಿತಿಯೋ

February 13, 2019

ಬೆಂಗಳೂರು: ಆಪರೇಷನ್ ಕಮಲ ಆಡಿಯೋದಲ್ಲಿ ಸ್ಪೀಕರ್ ವಿರುದ್ಧ ಮಾಡಲಾಗಿರುವ 50 ಕೋಟಿ ರೂ. ಲಂಚದ ಆರೋಪ ಸಂಬಂಧ ಯಾವ ತನಿಖೆ ನಡೆಸಬೇಕು ಎಂಬುದರ ಬಗ್ಗೆ ವಿಧಾನಸಭಾ ಅಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಛೇಂಬರ್‍ನಲ್ಲಿ ನಾಳೆ ನಡೆಯಲಿರುವ ಆಡಳಿತ ಮತ್ತು ವಿಪಕ್ಷ ನಾಯಕರ ಸಭೆಯಲ್ಲಿ ನಿರ್ಧಾರವಾಗಲಿದೆ. ನಾಳೆ ಬೆಳಿಗ್ಗೆ 10.30ಕ್ಕೆ ಸ್ಪೀಕರ್ ರಮೇಶ್‍ಕುಮಾರ್, ಆಡಳಿತ ಮತ್ತು ಪ್ರತಿಪಕ್ಷದ ನಾಯಕರ ಸಭೆಯನ್ನು ತಮ್ಮ ಛೇಂಬರ್‍ನಲ್ಲಿ ಕರೆದಿದ್ದು, ಅಲ್ಲಿ ತೆಗೆದು ಕೊಂಡ ನಿರ್ಣಯವನ್ನು ಬೆಳಿಗ್ಗೆ 11.30ಕ್ಕೆ ಸಮಾ ವೇಶಗೊಳ್ಳಲಿರುವ ವಿಧಾನಸಭೆಯಲ್ಲಿ ಪ್ರಕಟಿಸ ಲಾಗುವುದು. ಈಗಾಗಲೇ…

ಸದನಕ್ಕೆ ಹಾಜರಾಗಿ ವಿವರಣೆ ನೀಡಿದರೆ ಅನರ್ಹತೆ ಶಿಫಾರಸು ಹಿಂದಕ್ಕೆ
ಮೈಸೂರು

ಸದನಕ್ಕೆ ಹಾಜರಾಗಿ ವಿವರಣೆ ನೀಡಿದರೆ ಅನರ್ಹತೆ ಶಿಫಾರಸು ಹಿಂದಕ್ಕೆ

February 13, 2019

ಬೆಂಗಳೂರು: ಬಜೆಟ್ ಅಧಿವೇಶನ ಕೊನೆಗೊಳ್ಳುವುದಕ್ಕೂ ಮುನ್ನ ಸದನಕ್ಕೆ ಹಾಜರಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರೆ ನಿಮ್ಮ ವಿರುದ್ಧ ನೀಡಿರುವ ಅನರ್ಹತೆ ಶಿಫಾರಸು ಹಿಂದಕ್ಕೆ ಪಡೆಯುವುದಾಗಿ ಕಾಂಗ್ರೆಸ್ ಹೈಕಮಾಂಡ್ ನಾಲ್ವರು ಬಂಡಾಯ ಶಾಸಕರಿಗೆ ಕೊನೆಯ ಅವ ಕಾಶ ನೀಡಿದೆ. ಮುಂಬೈನಲ್ಲಿ ವಾಸ್ತವ್ಯ ಹೂಡಿ ರುವ ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಳ್ಳಿ ಮತ್ತು ಉಮೇಶ್ ಜಾಧವ್ ನಿನ್ನೆ ಸಂಜೆ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಸಂಪರ್ಕಿಸಿ, ಅನರ್ಹತೆ ಶಿಫಾರಸ್ಸನ್ನು ಹಿಂದಕ್ಕೆ ಪಡೆ ಯುವಂತೆ ಮನವಿ…

ಡಾಂಬರ್ ಹಾಕಿದ ರಸ್ತೆಗೆ ಮತ್ತೆ ಜಲ್ಲಿ ಚೆಲ್ಲಿ 52 ಲಕ್ಷ ಬಿಲ್ ಮಾಡಿದರು…!!
ಮೈಸೂರು

ಡಾಂಬರ್ ಹಾಕಿದ ರಸ್ತೆಗೆ ಮತ್ತೆ ಜಲ್ಲಿ ಚೆಲ್ಲಿ 52 ಲಕ್ಷ ಬಿಲ್ ಮಾಡಿದರು…!!

February 13, 2019

ಮೈಸೂರು: ಡಾಂಬರೀ ಕರಣವಾಗಿದ್ದ ಮಹಾತ್ಮ ಗಾಂಧಿ (ಎಂಜಿ) ರಸ್ತೆಗೆ ಜಲ್ಲಿ ಹಾಕಿದ್ದೇವೆಂದು 52 ಲಕ್ಷ ರೂ. ಬಿಲ್ ಮಾಡಿ, ಹಣ ಪಡೆದಿರುವುದು ಸತ್ಯಶೋಧನಾ ಸಮಿತಿ ಸದಸ್ಯರ ಮುಂದೆ ಬಯಲಾಗಿದೆ. ಮೈಸೂರಿನ ಎಂಜಿ ರಸ್ತೆ ಡಬಲ್ ಕಾಮಗಾರಿ ಹೆಸರಲ್ಲಿ ನಡೆದಿದೆ ಎನ್ನಲಾದ 1.40 ಕೋಟಿ ರೂ. ಅವ್ಯವ ಹಾರದ ತನಿಖೆ ಆರಂಭಿಸಿರುವ ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದ ಸಮಿತಿ, ಇಂದೂ ಸಹ ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಸಭೆ ನಡೆಸಿ ಮೂಲ ಕಡತದ ದಾಖಲೆಗಳನ್ನು ಪರಿಶೀಲಿಸಿದಾಗ ಈಗಾ ಗಲೇ…

1 90 91 92 93 94 194
Translate »