ಡಾಂಬರ್ ಹಾಕಿದ ರಸ್ತೆಗೆ ಮತ್ತೆ ಜಲ್ಲಿ ಚೆಲ್ಲಿ 52 ಲಕ್ಷ ಬಿಲ್ ಮಾಡಿದರು…!!
ಮೈಸೂರು

ಡಾಂಬರ್ ಹಾಕಿದ ರಸ್ತೆಗೆ ಮತ್ತೆ ಜಲ್ಲಿ ಚೆಲ್ಲಿ 52 ಲಕ್ಷ ಬಿಲ್ ಮಾಡಿದರು…!!

February 13, 2019

ಮೈಸೂರು: ಡಾಂಬರೀ ಕರಣವಾಗಿದ್ದ ಮಹಾತ್ಮ ಗಾಂಧಿ (ಎಂಜಿ) ರಸ್ತೆಗೆ ಜಲ್ಲಿ ಹಾಕಿದ್ದೇವೆಂದು 52 ಲಕ್ಷ ರೂ. ಬಿಲ್ ಮಾಡಿ, ಹಣ ಪಡೆದಿರುವುದು ಸತ್ಯಶೋಧನಾ ಸಮಿತಿ ಸದಸ್ಯರ ಮುಂದೆ ಬಯಲಾಗಿದೆ. ಮೈಸೂರಿನ ಎಂಜಿ ರಸ್ತೆ ಡಬಲ್ ಕಾಮಗಾರಿ ಹೆಸರಲ್ಲಿ ನಡೆದಿದೆ ಎನ್ನಲಾದ 1.40 ಕೋಟಿ ರೂ. ಅವ್ಯವ ಹಾರದ ತನಿಖೆ ಆರಂಭಿಸಿರುವ ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದ ಸಮಿತಿ, ಇಂದೂ ಸಹ ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಸಭೆ ನಡೆಸಿ ಮೂಲ ಕಡತದ ದಾಖಲೆಗಳನ್ನು ಪರಿಶೀಲಿಸಿದಾಗ ಈಗಾ ಗಲೇ ಜಲ್ಲಿ ಹಾಕಿ ಅಸ್ವಾಲ್ಟಿಂಗ್ ಮಾಡಿ ಬಿಲ್ ಪಾವತಿಸಿರುವ ಎಂಜಿ ರಸ್ತೆಗೆ ಮತ್ತೆ ಜಲ್ಲಿ ಹಾಕಿ ಸಮತಟ್ಟು ಮಾಡಿದ್ದೇವೆಂದು ಬಿಲ್ ತಯಾರಿಸಿರುವುದು ಬೆಳಕಿಗೆ ಬಂದಿದೆ.

ಜಲ್ಲಿ ಹಾಕಿದ ಮೇಲೆ ಡಾಂಬರೀಕರಣ ಮಾಡುವುದು ಸಹಜ. ಆದರೆ ಪಾಲಿಕೆ ಅಧಿ ಕಾರಿಗಳಾದ ಸುನಿಲ್‍ಬಾಬು, ಮೋಹನ ಕುಮಾರಿ ಮತ್ತು ಗುತ್ತಿಗೆದಾರ ಕರೀಗೌಡರ ಪ್ರಕಾರ ಡಾಂಬರೀಕರಣದ ನಂತರವೂ ಜಲ್ಲಿ ಹಾಕಲಾಗಿದೆ ಎಂಬುದನ್ನು ದಾಖ ಲಾತಿಗಳು ಹೇಳುತ್ತಿವೆ. ಅದೇ ರೀತಿ ರಸ್ತೆಯ ಇಕ್ಕೆಲಗಳ ಫುಟ್‍ಪಾತ್‍ಗೆ 29,95,000 ರೂ. ವೆಚ್ಚದಲ್ಲಿ ಹೊಸದಾಗಿ ಇಂಟರ್ ಲಾಕಿಂಗ್ ಟೈಲ್ಸ್ ಅಳವಡಿಸಲಾಗಿದೆ. ಎಂಜಿ ರಸ್ತೆಯ ಎರಡೂ ಕಡೆ 4 ಅಡಿ ಅಗಲದ 636 ಸಿಮೆಂಟ್ ಕಾಂಕ್ರಿಟ್ ಸ್ಲ್ಯಾಬ್ ಗಳನ್ನು ಅಳವಡಿಸಲಾಗಿದೆ (15 ಲಕ್ಷ ರೂ.), 9.8 ಲಕ್ಷ ರೂ. ವೆಚ್ಚದಲ್ಲಿ ರಸ್ತೆಗೆ ಬಿಳಿ ಪಟ್ಟಿ ಬಳಿಯಲಾಗಿದೆ. 8 ಲಕ್ಷ ರೂ. ಖರ್ಚು ಮಾಡಿ ರಿಫ್ಲೆಕ್ಟರ್ ಸ್ಟಡ್‍ಗಳನ್ನು ಹಾಕಿದ್ದೇವೆ ಎಂದು ಬಿಲ್ ಸಲ್ಲಿಸಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ. ಅತ್ಯಾಶ್ಚರ್ಯವೆಂದರೆ, ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಹಗರಣ ಹೊರಬಂದ ಎರಡು ದಿನಗಳ ನಂತರ ರಾತ್ರೋರಾತ್ರಿ ಎಂಜಿ ರಸ್ತೆಗೆ ರಿಫ್ಲೆಕ್ಟರ್‍ಗಳನ್ನು ಅಳವಡಿಸಲಾಗಿದ್ದು, ಭ್ರಷ್ಟಾಚಾರ ನಡೆದಿದೆ ಎನ್ನುವುದಕ್ಕೆ ಸಾಕ್ಷಿ ಎಂಬುದು ಸಮಿತಿ ಸದಸ್ಯರಿಗೆ ಮನವರಿಕೆಯಾಯಿತು. ಇಂದು ವಿಚಾರಣೆ ನಡೆಸಿದಾಗ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಮಕೃಷ್ಣ ಅವರು ಆತುರಾತುರವಾಗಿ ಬಿಲ್ ತಯಾರಿಸಿ ತರಲು ಒತ್ತಡ ಹೇರಿದ್ದರಿಂದ ನಾವು ಬಿಲ್ ಸಲ್ಲಿಸಿದೆವು ಎಂದು ಮೋಹನಕುಮಾರಿ ಅವರು ತಮ್ಮ ಮೇಲಿನ ತಪ್ಪನ್ನು ವರ್ಗಾಯಿಸಿದರು. ಈ ಬಗ್ಗೆ ಲಿಖಿತ ರೂಪದಲ್ಲಿ ಹೇಳಿಕೆ ನೀಡಿ ಎಂದು ಸಮಿತಿ ಸದಸ್ಯರು ಹೇಳಿದರಾದರೂ, ಮೋಹನಕುಮಾರಿ ಅವರು ಬೇರೆ ಸಬೂಬು ಹೇಳಿ ಜಾರಿಕೊಂಡರು. ಇಂದು ಎಂಜಿ ರಸ್ತೆ ಖುದ್ದು ಪರಿಶೀಲಿಸುವ ಉದ್ದೇಶವಿತ್ತಾದರೂ, ಸಮಿತಿಯ ಸದಸ್ಯ ಕಾರ್ಯದರ್ಶಿ ಗಳಾದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪ್ರಕಾಶ ಅವರು ಲಭ್ಯವಿಲ್ಲದ ಕಾರಣ ಆ ಕಾರ್ಯಕ್ರಮವನ್ನು ಶನಿವಾರಕ್ಕೆ ನಿಗದಿಪಡಿಸಲಾಯಿತು.

 

Translate »