ಸರ್ವರ್ ಡೌನ್:ಆಸ್ತಿ ನೋಂದಣಿಗೆ ಅಡೆತಡೆ
ಮೈಸೂರು

ಸರ್ವರ್ ಡೌನ್:ಆಸ್ತಿ ನೋಂದಣಿಗೆ ಅಡೆತಡೆ

February 13, 2019

ಮೈಸೂರು: ಸಾಫ್ಟ್‍ವೇರ್ ಯೂನಿಟ್‍ನ ಸರ್ವರ್ ಡೌನ್ ಹಿನ್ನೆಲೆಯಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ 14 ಉಪ ನೋಂದಣಾ ಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಕಾರ್ಯಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಸೋಮವಾರ ಬೆಳಿಗ್ಗೆ ಸ್ಥಗಿತಗೊಂಡಿದ್ದ ನೆಟ್‍ವರ್ಕ್ ಇಂದು (ಮಂಗಳವಾರ) ಬೆಳಿಗ್ಗೆ 11.45 ಗಂಟೆವರೆಗೂ ಸಿಗಲಿಲ್ಲ. ಬೆಂಗಳೂರಿನ ಮೇನ್ ಸರ್ವರ್‍ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಉಪನೋಂದಣಾಧಿ ಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಕಾರ್ಯ ಸ್ಥಗಿತಗೊಂಡು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು. ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್‍ವರ್ಕ್ (kswan)ನವರು ನಿರ್ವ ಹಣೆ ಮಾಡುತ್ತಿರುವ ಈ ಸಾಫ್ಟ್‍ವೇರ್ ಸಂಪರ್ಕ ಸಿಗದಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಆಸ್ತಿ ಖರೀದಿಸುವರು, ಮಾರುವವರು ಸಬ್‍ರಿಜಿ ಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿಗಾಗಿ ಕಾದು ಬಸವಳಿದು ಸೋಮವಾರ ಹಿಂತಿರುಗಬೇಕಾಯಿತು.

ಸಮಸ್ಯೆ ಸರಿ ಹೋಗಬಹುದೆಂದು ಮತ್ತೆ ಕಚೇರಿ ಗಳಿಗೆ ತೆರಳಿದ್ದರಾದರೂ ಸರ್ವರ್ ಡೌನ್ ಆಗಿ ನೆಟ್‍ವರ್ಕ್ ಸಿಗದೆ ಸಾರ್ವಜನಿಕರು ನಿರಾಶರಾಗಿ ದ್ದರು. ಅದೃಷ್ಟವಶಾತ್ ಬೆಳಿಗ್ಗೆ 11.45 ಗಂಟೆ ವೇಳೆಗೆ ತಂತ್ರಾಂಶದ ನೆಟ್‍ವರ್ಕ್ ಬಂದು ಮತ್ತೆ ಹತ್ತೇ ನಿಮಿಷದಲ್ಲಿ ಮಾಯವಾಯಿತು. ನಂತರ ಮಧ್ಯಾಹ್ನ 12.10 ಗಂಟೆಯಿಂದ ನೆಟ್‍ವರ್ಕ್ ಸಿಕ್ಕಿ ಸಂಜೆವರೆಗೂ ಮಂದಗತಿ (Network Slow)ಯಲ್ಲಿ ಆಸ್ತಿ ನೊಂದಣಿ ಪ್ರಕ್ರಿಯೆ ನಡೆಯಿತು. ಭೂಮಿ, ನಿವೇಶನ, ಮನೆಗಳ ಕ್ರಯ ಪತ್ರ, ಒಪ್ಪಂದ ಪತ್ರ, ಅಡಮಾನ ಪತ್ರ ಸೇರಿ ದಂತೆ ಇನ್ನಿತರ ನೋಂದಣಿ ಕಾರ್ಯಗಳಿಗೆ ತೀವ್ರ ತೊಂದರೆ ಉಂಟಾಯಿತು.

ಮೈಸೂರು ನಗರದ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ, ಮುಡಾ ಕಚೇರಿ, ತಿ.ನರಸೀಪುರ, ಬನ್ನೂರು, ನಂಜನಗೂಡು, ಹೆಚ್.ಡಿ. ಕೋಟೆ, ಹುಣಸೂರು, ಕೆ.ಆರ್.ನಗರ, ಪಿರಿಯಾ ಪಟ್ಟಣ, ಬೆಟ್ಟದಪುರ ಹಾಗೂ ಮಿರ್ಲೆ ಉಪ ನೋಂದ ಣಾಧಿಕಾರಿ ಕಚೇರಿಗಳಲ್ಲಿ ಸೋಮವಾರ ಒಂದೇ ಒಂದು ಆಸ್ತಿಯೂ ನೋಂದಣಿಯಾಗಲಿಲ್ಲ. ಒಂದು ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಸರಾಸರಿ 60ರಂತೆ ಒಂದು ದಿನಕ್ಕೆ ಮೈಸೂರು ಜಿಲ್ಲೆಯ ಎಲ್ಲಾ 14 ಕಚೇರಿಗಳಲ್ಲಿ ಒಟ್ಟು ಸುಮಾರು 1000 ಪತ್ರಗಳು ನೋಂದಣಿಯಾಗುತ್ತಿದ್ದವು. ಸ್ಟ್ಯಾಂಪ್ ಡ್ಯೂಟಿ, ರಿಜಿ ಸ್ಟ್ರೇಷನ್, ಸೆಸ್ ಚಾರ್ಜ್ ಹಾಗೂ ದಾಖಲಾತಿಗಳ ಸ್ಕ್ಯಾನಿಂಗ್ ಶುಲ್ಕದಿಂದ ಮೈಸೂರು ಜಿಲ್ಲೆಯಲ್ಲಿ ದಿನಕ್ಕೆ ಸುಮಾರು 2 ಕೋಟಿ ರೂ. ಸರ್ಕಾರಕ್ಕೆ ವರಮಾನ ಬರುತ್ತಿದೆ. ಒಂದು ದಿನ ಸರ್ವರ್ ವೈಫಲ್ಯದಿಂದ ಆಸ್ತಿ ನೋಂದಣಿ ಆಗದಿದ್ದಲ್ಲಿ ಮರು ದಿನ ಕಚೇರಿಗಳಿಗೆ ಒತ್ತಡ ಹೆಚ್ಚಾಗಿ ಆ ದಿನ ಸರಿಯಾಗಿ ನೋಂದಣಿ ಪ್ರಕ್ರಿಯೆ ನಡೆಯುವುದಿಲ್ಲ. ಬದಲಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತದೆ ಎಂದು ಉಪ ನೋಂದಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇ-ಗವನ್ರ್ಸ್ ಇಲಾಖೆಯು ಸಾಫ್ಟ್‍ವೇರ್ ನೆಟ್‍ವರ್ಕ್ ನಿರ್ವಹಿಸಲು ಕೆಸ್ಟಾನ್ ಸಂಸ್ಥೆಗೆ ಜವಾಬ್ದಾರಿ ವಹಿಸಿದ್ದು, ಕಂಪ್ಯೂಟರೀಕರಣದ ಮೂಲಕ ಆಸ್ತಿ ದಾಖಲೆ ಪತ್ರಗಳನ್ನು ನೋಂದಾಯಿಸುವ ವ್ಯವಸ್ಥೆ ಕಲ್ಪಿಸಿದೆ.

ಸರ್ವೆ, ಭೂಮಿಗೂ ತೊಂದರೆ

ತಂತ್ರಾಂಶದಲ್ಲಿ ದೋಷ ಉಂಟಾಗಿರುವು ದರಿಂದ ನೆಟ್‍ವರ್ಕ್ ಹೊಂದಿರುವ ಕಂದಾಯ ಇಲಾಖೆಯ ತಹಸೀಲ್ದಾರ್ ಕಚೇರಿ, ಭೂಮಿ ಕೇಂದ್ರ ಹಾಗೂ ಭೂಮಾಪನಾ ಶಾಖೆಗೂ ಇದರ ಬಿಸಿ ತಟ್ಟಿದೆ. ಆರ್‍ಟಿಸಿ ಇನ್‍ಕಾರ್ಪೊರೇಟ್ ಮಾಡಲು, ಎಂ.ಆರ್. ಮೂಲಕ ಖಾತೆ ವರ್ಗಾ ವಣೆ ಮಾಡಲು ಸಂಬಂಧಿಸಿದ ಆರ್‍ಐಗಳು, ಶಿರಸ್ತೇದಾರರು ತಂಬ್ ಇಂಪ್ರೆಷನ್ ನೀಡಲು ಸರ್ವರ್ ಡೌನ್ ಸಮಸ್ಯೆ ಅಡ್ಡಿಯುಂಟು ಮಾಡಿದೆ. ಕಂದಾಯ ದಾಖಲಾತಿಗಳನ್ನು ಪಡೆಯಲು ರೈತರು ಪರದಾಡುವಂತಾಗಿದೆ. ಭೂ ದಾಖಲೆಗಳ ವಿಭಾಗ, ಸರ್ವೆ ಸೆಕ್ಷನ್‍ಗಳಲ್ಲಿ, ಭೂಮಿ ಹದ್ದುಬಸ್ತು ನಿಗದಿ ಸರ್ವೆ ಸ್ಕೆಚ್, 11ಇ ಸ್ಕೆಚ್‍ಗಳಿಗೆ ಹಣ ಕಟ್ಟಿಸಿಕೊಳ್ಳಲು ಹಾಗೂ ತಯಾರಾದ ನಕ್ಷೆಯ ಪ್ರತಿ ತೆಗೆಯಲು ಸರ್ವರ್ ಡೌನ್ ರೈತರಿಗೆ ತೀವ್ರ ತೊಂದರೆ ಉಂಟು ಮಾಡಿದೆ. ಕಳೆದ 1 ತಿಂಗಳಿಂದ ನೆಟ್‍ವರ್ಕ್ ಸಮಸ್ಯೆಯಿಂದ ಇಡೀ ರಾಜ್ಯಾದ್ಯಂತ ಕಂದಾಯ ಇಲಾಖೆ ಹಾಗೂ ಜಿಲ್ಲಾ ನೋಂದಣಾ ಧಿಕಾರಿಗಳ ಅಧೀನದಲ್ಲಿ ಬರುವ ಎಲ್ಲಾ ಸಬ್ ರಿಜಿ ಸ್ಟ್ರಾರ್ ಕಚೇರಿಗಳಲ್ಲೂ ಸಮಸ್ಯೆ ಹೇಳತೀರದಾಗಿದೆ.

Translate »