ಸದನಕ್ಕೆ ಹಾಜರಾಗಿ ವಿವರಣೆ ನೀಡಿದರೆ ಅನರ್ಹತೆ ಶಿಫಾರಸು ಹಿಂದಕ್ಕೆ
ಮೈಸೂರು

ಸದನಕ್ಕೆ ಹಾಜರಾಗಿ ವಿವರಣೆ ನೀಡಿದರೆ ಅನರ್ಹತೆ ಶಿಫಾರಸು ಹಿಂದಕ್ಕೆ

February 13, 2019

ಬೆಂಗಳೂರು: ಬಜೆಟ್ ಅಧಿವೇಶನ ಕೊನೆಗೊಳ್ಳುವುದಕ್ಕೂ ಮುನ್ನ ಸದನಕ್ಕೆ ಹಾಜರಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರೆ ನಿಮ್ಮ ವಿರುದ್ಧ ನೀಡಿರುವ ಅನರ್ಹತೆ ಶಿಫಾರಸು ಹಿಂದಕ್ಕೆ ಪಡೆಯುವುದಾಗಿ ಕಾಂಗ್ರೆಸ್ ಹೈಕಮಾಂಡ್ ನಾಲ್ವರು ಬಂಡಾಯ ಶಾಸಕರಿಗೆ ಕೊನೆಯ ಅವ ಕಾಶ ನೀಡಿದೆ.

ಮುಂಬೈನಲ್ಲಿ ವಾಸ್ತವ್ಯ ಹೂಡಿ ರುವ ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಳ್ಳಿ ಮತ್ತು ಉಮೇಶ್ ಜಾಧವ್ ನಿನ್ನೆ ಸಂಜೆ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಸಂಪರ್ಕಿಸಿ, ಅನರ್ಹತೆ ಶಿಫಾರಸ್ಸನ್ನು ಹಿಂದಕ್ಕೆ ಪಡೆ ಯುವಂತೆ ಮನವಿ ಮಾಡಿದ್ದರು. ಅನ್ಯ ಕಾರಣಗಳಿಂದ ವಿಧಾನಮಂಡಲದ ಅಧಿ ವೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ, ನಾವೂ ಕಾಂಗ್ರೆಸ್ಸಿಗರೇ ನಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಡಿ ಎಂದಿದ್ದರು.

ಅಧಿವೇಶನದಲ್ಲಿ ಪಾಲ್ಗೊಂಡು ಸದನ ದಲ್ಲೇ ನಾವು ಪಕ್ಷ ತೊರೆಯುವುದಿಲ್ಲ ಎಂಬ ಭರವಸೆ ನೀಡಿದರೆ ನಿಮ್ಮ ವಿರುದ್ಧ ಕೈಗೊಂಡಿ ರುವ ಶಿಸ್ತು ಕ್ರಮವನ್ನು ಹಿಂದಕ್ಕೆ ಪಡೆ ಯುತ್ತೇವೆ. ಮೊದಲು ಕರ್ನಾಟಕಕ್ಕೆ ಬನ್ನಿ, ಅಧಿವೇಶನದಲ್ಲಿ ಪಾಲ್ಗೊಳ್ಳಿ, ಈ ಕಾರ್ಯ ಆಗದೆ ನಾವು ನಿಮ್ಮ ವಿರುದ್ಧದ ಅನರ್ಹತೆ ಶಿಫಾರಸನ್ನು ಹಿಂದಕ್ಕೆ ಪಡೆಯಲು ಸಾಧ್ಯ ವಿಲ್ಲ ಎಂದು ವೇಣುಗೋಪಾಲ್ ಸ್ಪಷ್ಟ ಪಡಿಸಿದರು.

ಇದಕ್ಕೂ ಮುನ್ನ ಅತೃಪ್ತರು ರಾಜ್ಯ ಕಾಂಗ್ರೆಸ್ ಮುಖಂಡರೊಂದಿಗೂ ಸಮಾಲೋಚನೆ ನಡೆಸಿದ್ದರು, ಆದರೆ ಅವರ್ಯಾರೂ ಇವರ ಪರವಾಗಿ ನಿಲ್ಲುವ ಸ್ಥಿತಿಯಲ್ಲಿ ಇಲ್ಲ. ವರಿಷ್ಠರೇ ನಿಮ್ಮನ್ನು ಉಳಿಸಿಕೊಳ್ಳಬೇಕು, ನಮ್ಮ ವ್ಯಾಪ್ತಿಯಿಂದ ಇದು ಕೈಮೀರಿ ಹೋಗಿದೆ ಎಂದಾಗ, ಬಂಡಾಯಗಾರರು ವರಿಷ್ಠರ ಮೊರೆ ಹೋದರು. ನಾಲ್ವರು ಶಾಸಕರನ್ನು ಅನರ್ಹಗೊಳಿ ಸುವಂತೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿನ್ನೆ ವಿಧಾನಸಭಾಧ್ಯಕ್ಷರಿಗೆ 82 ಪುಟಗಳ ದೂರು ನೀಡಿದ್ದರು. ದೂರು ಆಧರಿಸಿ ಸ್ಪೀಕರ್ ಅವರು ನೋಟೀಸ್ ಜಾರಿ ಮಾಡಿ ವಿಚಾರಣೆ ಆರಂಭಿಸಬೇಕಿದೆ. ನಿನ್ನೆ ದೂರು ಸಲ್ಲಿಕೆಯಾಗುತ್ತಿದ್ದಂತೆ ಅತೃಪ್ತ ಶಾಸಕರಲ್ಲಿ ಗಲಿಬಿಲಿ ಆರಂಭವಾಗಿದ್ದು, ಕಾಂಗ್ರೆಸ್ ಮುಖಂಡರ ಜತೆ ಮಾತುಕತೆಗೆ ಸಿದ್ಧರಾಗಿ ಕೆ.ಸಿ.ವೇಣುಗೋಪಾಲ್ ಅವರ ಜತೆ ಮಾತುಕತೆ ನಡೆಸಿದ್ದಾರೆ.

Translate »