`ಆಪರೇಷನ್ ಕಮಲ’ ಆಡಿಯೋ ಪ್ರಕರಣ ತನಿಖೆ ಎಸ್‍ಐಟಿಯೋ, ಸದನ ಸಮಿತಿಯೋ
ಮೈಸೂರು

`ಆಪರೇಷನ್ ಕಮಲ’ ಆಡಿಯೋ ಪ್ರಕರಣ ತನಿಖೆ ಎಸ್‍ಐಟಿಯೋ, ಸದನ ಸಮಿತಿಯೋ

February 13, 2019

ಬೆಂಗಳೂರು: ಆಪರೇಷನ್ ಕಮಲ ಆಡಿಯೋದಲ್ಲಿ ಸ್ಪೀಕರ್ ವಿರುದ್ಧ ಮಾಡಲಾಗಿರುವ 50 ಕೋಟಿ ರೂ. ಲಂಚದ ಆರೋಪ ಸಂಬಂಧ ಯಾವ ತನಿಖೆ ನಡೆಸಬೇಕು ಎಂಬುದರ ಬಗ್ಗೆ ವಿಧಾನಸಭಾ ಅಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಛೇಂಬರ್‍ನಲ್ಲಿ ನಾಳೆ ನಡೆಯಲಿರುವ ಆಡಳಿತ ಮತ್ತು ವಿಪಕ್ಷ ನಾಯಕರ ಸಭೆಯಲ್ಲಿ ನಿರ್ಧಾರವಾಗಲಿದೆ.

ನಾಳೆ ಬೆಳಿಗ್ಗೆ 10.30ಕ್ಕೆ ಸ್ಪೀಕರ್ ರಮೇಶ್‍ಕುಮಾರ್, ಆಡಳಿತ ಮತ್ತು ಪ್ರತಿಪಕ್ಷದ ನಾಯಕರ ಸಭೆಯನ್ನು ತಮ್ಮ ಛೇಂಬರ್‍ನಲ್ಲಿ ಕರೆದಿದ್ದು, ಅಲ್ಲಿ ತೆಗೆದು ಕೊಂಡ ನಿರ್ಣಯವನ್ನು ಬೆಳಿಗ್ಗೆ 11.30ಕ್ಕೆ ಸಮಾ ವೇಶಗೊಳ್ಳಲಿರುವ ವಿಧಾನಸಭೆಯಲ್ಲಿ ಪ್ರಕಟಿಸ ಲಾಗುವುದು. ಈಗಾಗಲೇ ಸ್ಪೀಕರ್ ರಮೇಶ್‍ಕುಮಾರ್ ಅವರ ಸಲಹೆ ಅನುಸಾರ ಮುಖ್ಯಮಂತ್ರಿ ಕುಮಾರ ಸ್ವಾಮಿ ಆಪರೇಷನ್ ಕಮಲ ಆಡಿಯೋದಲ್ಲಿ ಸ್ಪೀಕರ್‍ಗೆ 50 ಕೋಟಿ ರೂ. ಲಂಚ ನೀಡಿಕೆ ಹೇಳಿಕೆ ಸಂಬಂಧ ಎಸ್‍ಐಟಿ ಮೂಲಕ ತನಿಖೆ ನಡೆಸುವುದಾಗಿ ಸೋಮ ವಾರ ವಿಧಾನಸಭೆಯಲ್ಲಿ ಪ್ರಕಟಿಸಿದ್ದರು. ಆದರೆ ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಮಂಗಳವಾರ ಬೆಳಿಗ್ಗೆ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿಯ ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಕೆ.ಜಿ.ಬೋಪಯ್ಯ, ಶ್ರೀರಾಮುಲು, ಸುರೇಶ್‍ಕುಮಾರ್, ಈಶ್ವರಪ್ಪ ಇತರರು ವಿಷಯ ಪ್ರಸ್ತಾಪಿಸಿ ಎಸ್‍ಐಟಿ ತನಿಖೆಗೆ ತಮ್ಮ ವಿರೋಧವಿದೆ. ಸರ್ಕಾರದ ವಶದಲ್ಲಿರುವ ಎಸ್‍ಐಟಿ ಯಿಂದ ನಿಷ್ಪಕ್ಷಪಾತ ತನಿಖೆ ನಡೆಯುತ್ತದೆಂಬ ಬಗ್ಗೆ ವಿಶ್ವಾಸವಿಲ್ಲ. ಅದರ ಬದಲು ಸದನ ಸಮಿತಿ ಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಕೂಡ ಆರೋಪಿಯಾಗಿರುವುದರಿಂದ ಎಸ್‍ಐಟಿಯಿಂದ ನ್ಯಾಯಸಮ್ಮತ ತನಿಖೆ ಸಾಧ್ಯವೇ ಇಲ್ಲ. ಒಂದು ವೇಳೆ ಇದರ ಮೂಲಕವೇ ತನಿಖೆ ನಡೆಸುವುದಾದರೆ ಅದಕ್ಕೆ ನಮ್ಮ ವಿರೋಧವಿದೆ ಎಂದರು. ಸೋಮವಾರದ ಕಲಾಪ ವೇಳೆ ಪೂರ್ಣ ಮೌನವಾಗಿದ್ದ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿ ಯೂರಪ್ಪ ಅವರು ಕೊನೆಗೂ ಇಂದು ಮಾತ ನಾಡಿದರು. ಈ ಆಡಿಯೋವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಮಗೆ ಇಷ್ಟ ಬಂದಂತೆ ಸೃಷ್ಟಿಸಿ ದ್ದಾರೆ. ಒಟ್ಟು 40 ನಿಮಿಷಗಳ ಸಂಭಾಷಣೆಯ ಈ ಆಡಿಯೋವನ್ನು ಬೇಕು ಬೇಕಾದಲ್ಲಿ ತುಂಡರಿಸಿ, ಎಡಿಟಿಂಗ್ ಮಾಡಿ 2-3 ನಿಮಿಷಕ್ಕೆ ಇಳಿಸಿ ಬಿಡು ಗಡೆ ಮಾಡಲಾಗಿದೆ. ಒಟ್ಟಾರೆ ಇದು ಒಂದು ನಕಲಿ ಆಡಿಯೋ. ಇಲ್ಲಿ ಮುಖ್ಯಮಂತ್ರಿಗಳಿಂದಲೇ ಸುಳ್ಳು ದಾಖಲೆ ಸೃಷ್ಟಿಯಾಗಿದ್ದು,ಇದು ಮೋಸದ ಪ್ರಯತ್ನವಾಗಿದೆ ಎಂದು ಸದನದ ಗಮನ ಸೆಳೆಯಲು ಯತ್ನಿಸಿದರು.

ಪ್ರಕರಣದಲ್ಲಿ ಮುಖ್ಯಮಂತ್ರಿಗಳೇ ಮೊದಲನೇ ಆರೋಪಿಯಾಗಲಿದ್ದಾರೆ. ಅವರಿಂದಲೇ ಸೃಷ್ಟಿಯಾದ ಈ ಆಡಿಯೋದ ಬಗ್ಗೆ ಅವರ ಅಧೀನದಲ್ಲೇ ಬರುವ ಎಸ್‍ಐಟಿಯಿಂದ ನ್ಯಾಯಸಮ್ಮತ ತನಿಖೆ ಸಾಧ್ಯವೇ ಇಲ್ಲ ಎಂದರು. ಸ್ಪೀಕರ್ ಅವರನ್ನು ಉದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಸರ್ಕಾರದ ವಶದಲ್ಲಿರುವ ಎಸ್‍ಐಟಿಯಿಂದ ತನಿಖೆಗೆ ನಮ್ಮ ವಿರೋಧವಿದೆ. ಇದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವೇ ಇಲ್ಲ. ಹಾಗಾಗಿ ಸದನ ಸಮಿತಿ ಮಾಡಿ ಆ ಮೂಲಕ ಸಮಗ್ರ ತನಿಖೆಗೆ ಸರ್ಕಾರಕ್ಕೆ ಸಲಹೆ ನೀಡಿ ಎಂದು ಮನವಿ ಮಾಡಿದರು. ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್‍ನ ಪ್ರಿಯಾಂಕ ಖರ್ಗೆ, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್ ಇತರರು, ಆಪರೇಷನ್ ಕಮಲ ಆಡಿಯೋದಲ್ಲಿ ಸ್ಪೀಕರ್ ವಿರುದ್ಧ ಮಾಡಲಾಗಿರುವ ಆರೋಪ ಅತ್ಯಂತ ಗಂಭೀರವಾದುದು. ಸ್ಪೀಕರ್ ಸ್ಥಾನದ ಘನತೆ ಎತ್ತಿ ಹಿಡಿಯಬೇಕಾಗಿದೆ. ಸದನದ ಗೌರವವೂ ಇದರಲ್ಲಿ ಅಡಕವಾಗಿರುವುದರಿಂದ ಈಗಾಗಲೇ ಪ್ರಕಟಿಸಲಾಗಿರುವಂತೆ ಎಸ್‍ಐಟಿ ಮೂಲಕವೇ ತನಿಖೆ ಮಾಡಿಸಬೇಕು ಎಂದು ತಮ್ಮ ವಾದವನ್ನು ಮಂಡಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಸಿದ್ದರಾಮಯ್ಯ ಮಾತನಾಡಿ, ಈಗ ಆಡಿಯೋದ್ದೇ ಎಲ್ಲೆಡೆ ಸದ್ದು. ಹಾಗಾಗಿ ಆಡಿಯೋ ಸದನದ ಆಸ್ತಿಯಾಗಿದೆ. ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಈಗಾಗಲೇ ಈ ವಿಚಾರ ಪ್ರಸ್ತಾಪವಾಗಿದೆ. ಹಾಗಾಗಿ ಉಭಯ ಸದನಗಳಲ್ಲಿ ಆಡಿಯೋ ವಿಚಾರ ಸದನದ ಆಸ್ತಿ ಎಂದರು. ಸ್ಪೀಕರ್ ಬಗ್ಗೆ ಸದನದ 224 ಶಾಸಕರ ವಿಶ್ವಾಸವಿದೆ. ನಿಮ್ಮ ಪ್ರಾಮಾಣಿಕತೆ ಬಗ್ಗೆ, ವೈಯಕ್ತಿಕ ಜೀವನದ ಬಗ್ಗೆಯೂ ಎಲ್ಲರಿಗೂ ವಿಶ್ವಾಸವಿದೆ. ಆದರೆ ಅದನ್ನು ಜನರಿಗೆ ತಿಳಿಸಬೇಕಿದೆ ಅಷ್ಟೆ ಎಂದು ಅಭಿಪ್ರಾಯಪಟ್ಟರು.

ದೆಹಲಿಗೆ ಹೋದಾಗ ಅಲ್ಲಿ ನನ್ನನ್ನು ಸಮ್ಮಿಶ್ರ ಸರ್ಕಾರದ ಬಗ್ಗೆ ಕೇಳ್ತಾನೇ ಇರ್ತಾರೆ. ಈ ಸರ್ಕಾರ ಉಳಿಯುತ್ತಾ ಅಂತಾ ಕೇಳ್ತಾರೆ. ನಾನಂತೂ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದ್ದೇನೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದಾಗಿನಿಂದಲೂ ಅಲ್ಲಿ ಶಾಸಕರು ಹೋದರಂತೆ, ಅವರು 11 ಜನ ಅಂತೆ, ಬಾಂಬೆಗೆ ಶಾಸಕರು ಹೋದರಂತೆ, ಹೀಗೆಲ್ಲಾ ಪ್ರಶ್ನೆಗಳನ್ನು ಎದುರಿಸಬೇಕಾಗಿದೆ. ಕೆಲವರಂತೂ ಸರ್ಕಾರಕ್ಕೆ ಗಡುವು ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಿಯೋ ರಿಲೀಸ್ ಆಗಿದೆ ಎಂದರು. ಹೆಬಿಚುಯಲ್ ಅಫೆಂಡರ್ಸ್ ತಾವೇ ಕೋರ್ಟ್‍ನಲ್ಲಿ ವಾದ ಮಾಡುತ್ತಾರೆ. ಪದೇ ಪದೆ ಕೋರ್ಟಿಗೆ ಹೋಗಿ ಬರುವ ವಾದಿಗಳು ತಾವೇ ವಾದ ಮಾಡುತ್ತಾರೆ ಎಂದು ಹೇಳುವ ಸಂದರ್ಭದಲ್ಲಿ ಬಿಜೆಪಿಯ ಸಿ.ಟಿ.ರವಿ ಮಧ್ಯೆ ಪ್ರವೇಶಿಸಿದರು. ಆಗ ಸಿದ್ದರಾಮಯ್ಯ ನೀನು ಹೆಬಿಚುಯಲ್ ಅಫೆಂಡರ್ ಅಲ್ಲ, ಕೂರಪ್ಪಾ ಎಂದರು. ಈ ವೇಳೆ ಸ್ಪೀಕರ್, ಉದಾಹರಣೆಗೆ ಚಾಲ್ರ್ಸ್ ಶೋಭರಾಜ್ ಎಂದಾಗ, ಹೌದು, ಆತ ಅಂತಾರಾಷ್ಟ್ರೀಯ ಅಪರಾಧಿ. ಅವನು ತನ್ನ ಪರ ತಾನೇ ವಾದ ಮಾಡುತ್ತಿದ್ದ ಎಂದರು. ಸ್ಪೀಕರ್ ಅವರು ಕಾನೂನು ಓದದೇ ಇದ್ದರೂ, ಕಾನೂನನ್ನು ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ಎಸ್‍ಐಟಿ ತನಿಖೆ ಆಗಲಿ ಎಂದಿದ್ದು, ಸದನ ಸಮಿತಿ, ನ್ಯಾಯಾಂಗ ತನಿಖೆ ಬೇಡ ಎಂದಿದ್ದಾರೆ ಎಂದು ಸಿದ್ದ ರಾಮಯ್ಯ ತಿಳಿಸಿದರು. ಮುಂದುವರೆದು, ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಎಸ್‍ಐಟಿ ತನಿಖೆ ಬಗ್ಗೆ ಹೇಳಿದ್ದಾರೆ. ಹಾಗಾಗಿ ಮತ್ತೆ ಪರಿಶೀಲನೆ ಅಗತ್ಯವಿಲ್ಲ. ಎಸ್‍ಐಟಿ ತನಿಖೆಯೇ ಆಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದರು.

ರೇಪ್‍ಗೆ ಒಳಗಾದವರ ಪರಿಸ್ಥಿತಿ ನನ್ನದು!
ಆಪರೇಷನ್ ಕಮಲ ಆಡಿಯೋ ಟೇಪ್ ಪ್ರಕರಣ 2ನೇ ದಿನವೂ ಸದನದಲ್ಲಿ ಚರ್ಚೆಗೆ ಕಾರಣ ವಾಗಿದ್ದು, ಈ ವೇಳೆ ವಿಧಾನಸಭಾ ಅಧ್ಯಕ್ಷ ರಮೇಶ್‍ಕುಮಾರ್ ತಮ್ಮ ಸ್ಥಿತಿಯ ಬಗ್ಗೆ ವ್ಯಂಗ್ಯ ಮಾಡಿ ಎರಡು ಪಕ್ಷಗಳ ನಾಯಕರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ. ಸದನದಲ್ಲಿ ನಡೆದ ಚರ್ಚೆ ವೇಳೆ ಸ್ಪೀಕರ್ ಅವರಿಗೆ ಎಲ್ಲಾ ಶಾಸಕರು ಕೂಡ ಬೆಂಬಲ ನೀಡುವಂತೆ ಮಾತನಾಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ನನ್ನ ಸದ್ಯದ ಸ್ಥಿತಿ ರೇಪ್‍ಗೆ ಒಳಗಾದವರ ಪರಿಸ್ಥಿತಿಯಂತಿದೆ. ರೇಪ್ ಆದ ವ್ಯಕ್ತಿಗೆ ಕೋಟ್ ್ನಲ್ಲಿ ಹೋದರೆ ಎಲ್ಲಿ ಆಯ್ತು? ಹೇಗಾಯ್ತು ಎಂದು ಪದೇ ಪದೇ ಕೇಳುತ್ತಾರೆ. ಅದೇ ರೀತಿ ನೀವೆಲ್ಲಾ ನನ್ನ ರೇಪ್ ಮಾಡುತ್ತಿದ್ದೀರಿ ಎಂದು ತಮ್ಮ ನೋವನ್ನು ಹೊರ ಹಾಕಿದರು. ಸಭಾಧ್ಯಕ್ಷರನ್ನು ಬೀದಿಗೆ ತಂದಿದ್ದಾರೆ ಎಂದು ಪದೇ ಪದೇ ಎರಡು ಪಕ್ಷಗಳು ಹೇಳುತ್ತಿದೆ. ಆದರೆ ರೇಪ್ ಆದ ಪರಿಸ್ಥಿತಿ ನನಗೆ ಆಗಿದ್ದು, ಕೋರ್ಟಿನಲ್ಲಿ ವಕೀಲರು ಪದೇ ಪದೇ ಪ್ರಶ್ನೆ ಮಾಡುತ್ತಾರೆ. ಒಬ್ಬ ವ್ಯಕ್ತಿಯ ಮೇಲೆ 1 ಬಾರಿ ರೇಪ್ ಆಗಿದ್ದರೆ, ಕೋರ್ಟ್‍ನಲ್ಲಿ 100 ಬಾರಿ ರೇಪ್ ಮಾಡುತ್ತಾರೆ ಎಂಬಂತೆ ನನ್ನ ಸ್ಥಿತಿಯೂ ಆಗಿದೆ ಎಂದರು. ಆಪರೇಷನ್ ಕಮಲ ವಿಡಿಯೋ ಬಗ್ಗೆ ಸ್ಪೀಕರ್ ಗಮನಕ್ಕೆ ಮೊದಲು ತರಬೇಕಿತ್ತು. ಆದರೆ ಮಾಧ್ಯಮಗಳ ಮುಂದೇ ಸ್ಪೀಕರ್ ಬಗ್ಗೆ ಮಾತನಾಡಿ ಅವರನ್ನು ಬೀದಿಗೆ ತಂದಿದ್ದಾರೆ ಎಂದು ಬಿಜೆಪಿ ಶಾಸಕರು ಸದನದಲ್ಲಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಆರೋಪಿಸಿದರು.

Translate »