ಮೈಸೂರು: ಶಾಸಕರಿಗೆ ಹಣದ ಆಮಿಷವೊಡ್ಡುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಸಿನ್ ಖಾನ್ ಅವರು ಇಂದು ಮೈಸೂರಿನ ಟಿಪ್ಪು ಸರ್ಕಲ್ ಬಳಿ ಇರುವ ಎಸಿಬಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಅಭದ್ರಗೊಳಿಸಿ ಹಿಂಬಾಗಿಲಿನಿಂದ ಅಧಿಕಾರ ಪಡೆಯಲು ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ಶಾಸಕರಿಗೆ ಬಹಿರಂಗವಾಗಿಯೇ ಆಮಿಷವೊಡ್ಡಿದ್ದಾರೆ ಎಂದಿರುವ ಅವರು, ಒಬ್ಬ ಶಾಸಕರಿಗೆ 10 ಕೋಟಿ ರೂ. ಆಫರ್ ನೀಡಿರುವುದರಿಂದ ಇಷ್ಟೊಂದು ಬೃಹತ್ ಮೊತ್ತದ…
ಯದುವೀರ್ ದಂಪತಿಯಿಂದ ರಥಗಳಿಗೆ ಪೂಜೆ, ಉತ್ಸವ ಮೂರ್ತಿಗೆ ನಮನ
February 13, 2019ಮೈಸೂರು: ಮೈಸೂರು ಅರಮನೆ ಆವರಣದಲ್ಲಿರುವ ದೇವಾ ಲಯಗಳಲ್ಲಿ ರಥಸಪ್ತಮಿ ದಿನವಾದ ಮಂಗಳವಾರ ವಿಶೇಷ ಪೂಜೆಗಳು ನೆರವೇರಿದವು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಉಪಸ್ಥಿತರಿದ್ದರು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪತ್ನಿ ತ್ರಿಷಿಕಾ ಯದುವೀರ್ ಹಾಗೂ ಪುತ್ರ ಅಧ್ಯವೀರ ಒಡೆಯರ್ ಜೊತೆಗೂಡಿ ಅರಮನೆ ಆವರಣದಲ್ಲಿದ್ದ ರಥಗಳಿಗೆ ಪೂಜೆ ಸಲ್ಲಿಸಿದರು. ಭುವನೇಶ್ವರಿ, ತ್ರಿನೇಶ್ವರಸ್ವಾಮಿ ಲಕ್ಷ್ಮಿ ರಮಣಸ್ವಾಮಿ, ಮಹಾಲಕ್ಷ್ಮಿದೇವಿ, ಪ್ರಸನ್ನ ಕೃಷ್ಣ, ವೇದವರಾಹಸ್ವಾಮಿ, ವೆಂಕಟ ರಮಣಸ್ವಾಮಿ ಹಾಗೂ ಗಾಯಿತ್ರಿ ಅಮ್ಮನವರ ಉತ್ಸವ ಮೂರ್ತಿಗಳಿಗೆ ಭಕ್ತಿಯಿಂದ ನಮಿಸಿದರು….
‘ಹೊಯ್ಸಳರ ಶಿಲ್ಪಕಲೆಯಲ್ಲಿ ಮಹಿಳೆಯರು’ ವಿಶೇಷ ಉಪನ್ಯಾಸ
February 13, 2019ಮೈಸೂರು: ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗ ದಿಂದ ‘ಹೊಯ್ಸಳರ ಶಿಲ್ಪಕಲೆಯಲ್ಲಿ ಮಹಿಳೆಯರು’ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿ ಸಲಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಇತಿ ಹಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕ ರಾದ ಡಾ. ಎನ್. ಸರಸ್ವತಿ, ಹೊಯ್ಸಳರ ಕಾಲದ ಶಿಲ್ಪಕಲೆಯಲ್ಲಿ ಮಹಿಳೆಯರ ಪ್ರಧಾನ ಪಾತ್ರ ಪ್ರಸ್ತಾಪಿಸಿ, ಲೌಕಿಕ, ಆಧ್ಯಾತ್ಮಿಕ, ಪೌರಾಣಿಕ, ಸಾಮಾಜಿಕ ಹಾಗೂ ಧಾರ್ಮಿಕ ವೈಚಾರಿಕತೆಯಲ್ಲಿ ಶಿಲ್ಪಕಲೆಯ ಮೂಲಕ ಮಹಿಳೆಯರ ಕೊಡುಗೆಗಳನ್ನು ಸ್ಮರಿಸುತ್ತಾ, ಶಾಂತಲಾದೇವಿ, ಬೊಮ್ಮಲ ದೇವಿ, ಉಮಾದೇವಿ ಮೊದಲಾದ ಹೊಯ್ಸಳರ ಕಾಲದ…
ಕಲಾಪದಿಂದ ಹೊರಗುಳಿದ ವಕೀಲರು: ಮೆರವಣಿಗೆ ಮೂಲಕ ಡಿಸಿಗೆ ಮನವಿ ಸಲ್ಲಿಕೆ
February 13, 2019ಮೈಸೂರು: ವಕೀಲರ ರಕ್ಷಣೆ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಬೇಕೆಂದು ಆಗ್ರಹಿಸಿ ಮೈಸೂರು ವಕೀಲರ ಸಂಘದ ವತಿಯಿಂದ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮೈಸೂರು ಜಿಲ್ಲಾ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಸಮಾ ವೇಶಗೊಂಡ ವಕೀಲರು ಅಲ್ಲಿಂದ ಕೃಷ್ಣ ರಾಜ ಬುಲೇವಾರ್ಡ್ ರಸ್ತೆಯಲ್ಲಿ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಕೀಲರು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ ಕುಮಾರ್ ನೇತೃತ್ವದಲ್ಲಿ ಫೆ.12ರಂದು ತುರ್ತು…
ಮೈಸೂರು ಬಿಜೆಪಿ ಘಟಕದಿಂದಲೂ ಮೇರಾ ಪರಿವಾರ, ಬಿಜೆಪಿ ಪರಿವಾರ್
February 13, 2019ಮೈಸೂರು: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ರಾದ ಅಮಿತ್ ಶಾ ಮಂಗಳವಾರ ಬೆಳಿಗ್ಗೆ ರಾಷ್ಟ್ರಾದ್ಯಂತ ‘ಮೇರಾ ಪರಿವಾರ, ಬಿಜೆಪಿ ಪರಿವಾರ್’ ಕಾರ್ಯಕ್ರಮವನ್ನು ಉದ್ಘಾಟಿ ಸಿದರು. ಬಳಿಕ ಮೈಸೂರಿನಲ್ಲಿ ಭಾರತೀಯ ಜನತಾ ಪಾರ್ಟಿಯ ನಗರಾಧ್ಯಕ್ಷ ಡಾ. ಬಿ.ಹೆಚ್.ಮಂಜುನಾಥ್ ಮನೆಯಲ್ಲಿ ಪಕ್ಷದ ಧ್ವಜವನ್ನು ಹಾರಿಸಲಾಯಿತು. ಈ ಕಾರ್ಯಕ್ರಮವು ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ, ಪಕ್ಷಕ್ಕೆ ಬೆಂಬಲ ಕೋರುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿದೆ. ಈ ಸಂದರ್ಭ ದಲ್ಲಿ ಬಿಜೆಪಿ ನಗರಾಧ್ಯಕ್ಷರಾದ ಡಾ. ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ರಾದ ಕೋಟೆ…
ವಿಶೇಷ ವಿನ್ಯಾಸದಲ್ಲಿ ಬೇಕ್ ಪಾಯಿಂಟ್ ಸರ್ಕಲ್ ಅಭಿವೃದ್ಧಿ ಕೆಲಸ ಪೂರ್ಣ
February 13, 2019ಮೈಸೂರು: ಮೈಸೂರಿನ ಸರಸ್ವತಿಪುರಂನ ಬೇಕ್ ಪಾಯಿಂಟ್ ಬಳಿಯ ಸರ್ಕಲ್ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಪೆಬಲ್‍ಸ್ಟೋನ್ ಬಳಸಿ ನೆಲಹಾಸು, ಮಧ್ಯೆ ಪಾರಂಪರಿಕ ದೀಪಕ್ಕೆ ಪೈಪ್‍ಲೈನ್ ಹಾಕಿ ಸಂಪರ್ಕ ಕಲ್ಪಿಸಲಾಗಿದೆ. 2 ತಿಂಗಳ ಹಿಂದೆ ಮೈಸೂರು ಮಹಾನಗರ ಪಾಲಿಕೆಯಿಂದ ವಾರ್ಡ್ ನಂಬರ್ 21ರಲ್ಲಿ ಬರುವ ವಿಶ್ವಮಾನವ ಜೋಡಿ ರಸ್ತೆಯ ಬೇಕ್ ಪಾಯಿಂಟ್ ಬಳಿ ಸರ್ಕಲ್ ಅಭಿವೃದ್ಧಿ ಮತ್ತು ಸೌಂದರ್ಯೀಕರಣ ಕಾಮಗಾರಿ ಯನ್ನು 15 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಆರಂಭಿಸಲಾಗಿತ್ತು. ವಲಯ ಕಚೇರಿ 4ರ ಅಭಿವೃದ್ಧಿ…
‘ಆಧಾರ್’ಗೆ ಮತ್ತೆ ಜನರ ಹಾಹಾಕಾರ
February 13, 2019ಮೈಸೂರು: ಮೈಸೂರು ಜಿಲ್ಲೆಯ ನಾಗರಿಕರು ನಾಡ ಕಚೇರಿ ಮುಂದೆ ಮತ್ತೆ ಸಾಲುಗಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ವಿವಿಧ ಸೌಲಭ್ಯ ಪಡೆ ಯಲು ಆಧಾರ್ ಕಾರ್ಡ್ ಕಡ್ಡಾಯವಾಗಿರುವುದ ರಿಂದ ಇದೀಗ ಮೊಬೈಲ್ ನಂಬರ್ ನಮೂದಿಸಲು ಹಾಗೂ ಆಧಾರ್ ಕಾರ್ಡ್‍ನಲ್ಲಿರುವ ನ್ಯೂನತೆ ಸರಿಪಡಿಸಲು ದಿನಗಟ್ಟಲೇ ನಿಲ್ಲ್ಲಬೇಕಾಗಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಲು ಹಾಗೂ ಜಾತಿ, ಆದಾಯ ಪ್ರಮಾಣಪತ್ರ, ವಂಶವೃಕ್ಷ, ಸಾಗುವಳಿ ಪತ್ರ ಸೇರಿದಂತೆ ಕಂದಾಯ ಇಲಾಖೆಯ 36 ಸೇವೆ ಪಡೆಯಲು ಸಲ್ಲಿಸುವ ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಪ್ರತಿ ಲಗತ್ತಿಸಬೇಕಾಗಿದೆ. ಇದರೊಂದಿಗೆ…
ಗಿರಿಯಾಬೋವಿಪಾಳ್ಯದಲ್ಲಿ ಯುವಕನ ಬರ್ಬರ ಹತ್ಯೆ
February 13, 2019ಇಬ್ಬರ ಬಂಧನ, ತಲೆಮರೆಸಿಕೊಂಡಿರುವ ಇತರರ ಪತ್ತೆಗೆ ಶೋಧ ಮೈಸೂರು: ಕ್ಷುಲ್ಲಕ ಕಾರಣಕ್ಕಾಗಿ ಯುವಕನೋರ್ವನನ್ನು ಫೈಬರ್ ಪೈಪ್, ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ಮಾಡಿ ಕೊಲೆಗೈದಿರುವ ಘಟನೆ ಮೈಸೂರಿನ ಗಿರಿಯಾಬೋವಿಪಾಳ್ಯದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಮೈಸೂರಿನ ನಜರ್‍ಬಾದ್ ಠಾಣಾ ವ್ಯಾಪ್ತಿಯ ರಾಘವೇಂದ್ರನಗರ ನಿವಾಸಿ ಸವೇರಪ್ಪ ಅವರ ಮಗ ಚಿನ್ನಸ್ವಾಮಿ ಅಲಿಯಾಸ್ ಬಾಬು(22) ಹತ್ಯೆಯಾದ ಯುವಕ. ಈ ಸಂಬಂಧ ಪವನ್ ಮತ್ತು ಮನೋಜ್ ಎಂಬುವರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಪ್ರೇಮ್‍ಸಾಗರ್, ಪ್ರಜ್ವಲ್ ಹಾಗೂ ಇತರರ ಪತ್ತೆಗೆ ತೀವ್ರ ಶೋಧ…
ಸ್ಪೀಕರ್‍ಗೆ 50 ಕೋಟಿ ಲಂಚ ಆರೋಪ ಎಸ್‍ಐಟಿ ತನಿಖೆ
February 12, 2019ಸದನದಲ್ಲಿ ಆಪರೇಷನ್ ಕಮಲ ಆಡಿಯೋ ಸದ್ದು-ಗದ್ದಲ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕಟ 15 ದಿನದಲ್ಲಿ ತನಿಖಾ ವರದಿ ಮಂಡಿಸುವ ಭರವಸೆ ಲಂಚ ಆರೋಪದ ಬಗ್ಗೆ ಭಾವನಾತ್ಮಕವಾಗಿ ಅಭಿಪ್ರಾಯ ಮಂಡಿಸಿದ ಸ್ಪೀಕರ್ ರಮೇಶ್‍ಕುಮಾರ್ ಬೆಂಗಳೂರು: ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಸಲಹೆ ಮೇರೆಗೆ ವಿವಾದಿತ ಆಪರೇಷನ್ ಕಮಲ ಧ್ವನಿಸುರುಳಿ ಮುದ್ರಿಕೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಕಟಿಸಿದರು. ಸದನ ಬೆಳಿಗ್ಗೆ ಸಮಾವೇಶಗೊಳ್ಳುತ್ತಿ ದ್ದಂತೆ ಸಭಾಧ್ಯಕ್ಷರು ವಿಷಯ ಪ್ರಸ್ತಾಪಿಸಿ, ತಮ್ಮ ವಿರುದ್ಧ 50 ಕೋಟಿ ರೂ….
ಲಕ್ನೋದಲ್ಲಿ ಭಾರೀ ಜನಸ್ತೋಮದ ನಡುವೆ ಪ್ರಿಯಾಂಕಾ, ರಾಹುಲ್ ರೋಡ್ ಶೋ
February 12, 2019ಲಕ್ನೋ: ಇತ್ತೀಚಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಪೂರ್ವ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಉತ್ತರ ಪ್ರದೇಶ ರಾಜಧಾನಿ ಲಕ್ನೋಲ್ಲಿ ರೋಡ್ ಶೋ ನಡೆಸುವ ಮೂಲಕ ರಾಜಕೀಯ ಅಖಾಡಕ್ಕೆ ಧುಮುಕ್ಕಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರ ಪ್ರದೇಶ ಪಶ್ಚಿಮ ವಿಭಾಗದ ಉಸ್ತುವಾರಿ ಜ್ಯೋತಿರಾಧಿತ್ಯ ಸಿಂದಿಯಾ ಅವರೊಂದಿಗೆ ಐಸಿಸಿಸಿ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಪಶ್ಚಿಮ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ನಡೆಸಿದ ರೋಡ್ ಶೋನಲ್ಲಿ ಭಾರೀ ಜನಸ್ತೋಮ ಕಂಡುಬಂದಿತು….