ಯದುವೀರ್ ದಂಪತಿಯಿಂದ ರಥಗಳಿಗೆ ಪೂಜೆ, ಉತ್ಸವ ಮೂರ್ತಿಗೆ ನಮನ
ಮೈಸೂರು

ಯದುವೀರ್ ದಂಪತಿಯಿಂದ ರಥಗಳಿಗೆ ಪೂಜೆ, ಉತ್ಸವ ಮೂರ್ತಿಗೆ ನಮನ

February 13, 2019

ಮೈಸೂರು: ಮೈಸೂರು ಅರಮನೆ ಆವರಣದಲ್ಲಿರುವ ದೇವಾ ಲಯಗಳಲ್ಲಿ ರಥಸಪ್ತಮಿ ದಿನವಾದ ಮಂಗಳವಾರ ವಿಶೇಷ ಪೂಜೆಗಳು ನೆರವೇರಿದವು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಉಪಸ್ಥಿತರಿದ್ದರು.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪತ್ನಿ ತ್ರಿಷಿಕಾ ಯದುವೀರ್ ಹಾಗೂ ಪುತ್ರ ಅಧ್ಯವೀರ ಒಡೆಯರ್ ಜೊತೆಗೂಡಿ ಅರಮನೆ ಆವರಣದಲ್ಲಿದ್ದ ರಥಗಳಿಗೆ ಪೂಜೆ ಸಲ್ಲಿಸಿದರು. ಭುವನೇಶ್ವರಿ, ತ್ರಿನೇಶ್ವರಸ್ವಾಮಿ ಲಕ್ಷ್ಮಿ ರಮಣಸ್ವಾಮಿ, ಮಹಾಲಕ್ಷ್ಮಿದೇವಿ, ಪ್ರಸನ್ನ ಕೃಷ್ಣ, ವೇದವರಾಹಸ್ವಾಮಿ, ವೆಂಕಟ ರಮಣಸ್ವಾಮಿ ಹಾಗೂ ಗಾಯಿತ್ರಿ ಅಮ್ಮನವರ ಉತ್ಸವ ಮೂರ್ತಿಗಳಿಗೆ ಭಕ್ತಿಯಿಂದ ನಮಿಸಿದರು.

ರಾಜಮಹಾರಾಜರ ಕಾಲದಿಂದಲೂ ಇರುವ ಈ ಸಂಪ್ರದಾಯ ಇಂದಿಗೂ ಆಚರಣೆಯಲಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹಿಂದಿ ನಿಂದ ನಡೆದು ಬಂದಿರುವ ಸಂಪ್ರದಾಯ ಪ್ರಕಾರವೇ ರಥಗಳಿಗೆ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದುಕೊಂಡರು.

ಅರಮನೆ ಆವರಣದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಸಾರ್ವಜನಿಕರಿಗೆ ಉತ್ಸವ ಮೂರ್ತಿ ಗಳÀ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನವಾದ ರಥಸಪ್ತಮಿಯಂದು ಸೂರ್ಯ ದೇವನು ಅಶ್ವಾರೂಢನಾಗಿ ದಕ್ಷಿಣದಿಂದ ಉತ್ತರ ಪಥದತ್ತ ಪಯಣಿಸುತ್ತಾನೆ. ದಕ್ಷಿಣಾಯನದಲ್ಲಿ ಚಳಿ ಮತ್ತು ಮಳೆ ಯಿದ್ದು, ಸೂರ್ಯ ಉತ್ತರಾಯಣದಲ್ಲಿ ತನ್ನ ಪಥ ಬದಲಿಸುವುದರಿಂದ ಬಿಸಿಲಿನ ಪ್ರಖರತೆ ಹೆಚ್ಚುತ್ತದೆ. ರೋಗಾಣುಗಳನ್ನು ನಾಶಪಡಿಸುವ ಶಕ್ತಿ ಸೂರ್ಯನಲ್ಲಿದೆ ಎಂದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಈ ಶುಭ ದಿನದಂದು ಪ್ರಾತಃಕಾಲವೇ ಎದ್ದು ಎಕ್ಕದ ಎಲೆಯ ಸ್ನಾನ ಮಾಡಿ ಸೂರ್ಯ ನನ್ನು ಆರಾಧಿಸಿದರೆ ಸಕಲ ರೋಗ ಗಳಿಂದ ಮುಕ್ತರಾಗುತ್ತಾರೆ ಎಂದು ಹೇಳ ಲಾಗುತ್ತದೆ. ಹೀಗಾಗಿ ಇಂದು ಬೆಳಿಗ್ಗೆ ಯಿಂದಲೇ ಜನರು ಸೂರ್ಯನಿಗೆ ನಮ ಸ್ಕರಿಸಿ, ಅರಮನೆ ಸೇರಿದಂತೆ ಮೈಸೂರಿನ ವಿವಿಧ ದೇವಾಲಯಗಳಿಗೆ ತೆರಳಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.

Translate »