ಮೈಸೂರು: ಮೈಸೂರು ಜಿಲ್ಲೆಯ ನಾಗರಿಕರು ನಾಡ ಕಚೇರಿ ಮುಂದೆ ಮತ್ತೆ ಸಾಲುಗಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ವಿವಿಧ ಸೌಲಭ್ಯ ಪಡೆ ಯಲು ಆಧಾರ್ ಕಾರ್ಡ್ ಕಡ್ಡಾಯವಾಗಿರುವುದ ರಿಂದ ಇದೀಗ ಮೊಬೈಲ್ ನಂಬರ್ ನಮೂದಿಸಲು ಹಾಗೂ ಆಧಾರ್ ಕಾರ್ಡ್‍ನಲ್ಲಿರುವ ನ್ಯೂನತೆ ಸರಿಪಡಿಸಲು ದಿನಗಟ್ಟಲೇ ನಿಲ್ಲ್ಲಬೇಕಾಗಿದೆ.
ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಲು ಹಾಗೂ ಜಾತಿ, ಆದಾಯ ಪ್ರಮಾಣಪತ್ರ, ವಂಶವೃಕ್ಷ, ಸಾಗುವಳಿ ಪತ್ರ ಸೇರಿದಂತೆ ಕಂದಾಯ ಇಲಾಖೆಯ 36 ಸೇವೆ ಪಡೆಯಲು ಸಲ್ಲಿಸುವ ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಪ್ರತಿ ಲಗತ್ತಿಸಬೇಕಾಗಿದೆ. ಇದರೊಂದಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ವಿವಿಧ ವಿದ್ಯಾರ್ಥಿ ವೇತನ ಪಡೆಯಲು, ವಿವಿಧ ಸಂಸ್ಥೆಗಳಲ್ಲಿನ ಉದ್ಯೋಗಿಗಳು ವೇತನ ಪಡೆಯಲು ಆಧಾರ್ ಕಾರ್ಡ್ ಪ್ರತಿ ನೀಡುವುದು ಅನಿವಾರ್ಯವಾಗಿರುವುದರಿಂದ ಇದೀಗ ಆಧಾರ್ ಕಾರ್ಡ್‍ನಲ್ಲಿನ ನ್ಯೂನತೆ ಸರಿಪಡಿಸಿಕೊಳ್ಳಲು ಹಾಗೂ ಮೊಬೈಲ್ ಸಂಖ್ಯೆ ನಮೂದಿಸಲು ನಾಡ ಕಚೇರಿ ಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುವಂತಾಗಿದೆ.
ಮೈಸೂರು ಜಿಲ್ಲೆಯಲ್ಲಿ 33 ಹೋಬಳಿಯಲ್ಲಿ ತಲಾ ಒಂದೊಂದರಂತೆ 33 ಹೋಬಳಿ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಸಮಸ್ಯೆ ಬಗೆಹರಿ ಸಲು ತಲಾ ಒಂದೊಂದು ಕಿಟ್ ನೀಡಲಾಗಿದೆ. ದಿನಕ್ಕೆ 30 ಮಂದಿಗೆ ಮಾತ್ರ ಆಧಾರ್ ಕಾರ್ಡ್ ತಿದ್ದುಪಡಿ ಮಾಡಬಹುದಾಗಿದೆ. ಆದರೆ ನೂರಾರು ಮಂದಿ ಸಾಲಿನಲ್ಲಿ ನಿಂತು ಪರಿತಪಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಹಿಂಭಾಗದ ಸ್ಪಂದನ ಕೇಂದ್ರ ಹಾಗೂ ಮಿನಿ ವಿಧಾನಸೌಧದ ನಾಡಕಚೇರಿ ಯಲ್ಲಿ ಕೌಂಟರ್ ತೆರೆಯಲಾಗಿದ್ದು, ಇಲ್ಲಿಗೆ ನಂಜನ ಗೂಡು, ಹುಣಸೂರು, ತಿ.ನರಸೀಪುರ, ಹೆಚ್.ಡಿ. ಕೋಟೆ ಸೇರಿದಂತೆ ವಿವಿಧೆಡೆಗಳಿಂದ ಪ್ರತಿದಿನ ನೂರಾರು ಮಂದಿ ಚಿಕ್ಕ ಮಕ್ಕಳೊಂದಿಗೆ ಆಧಾರ್ ಕಾರ್ಡ್ ಮಾಡಿ ಸಲು, ಕಾರ್ಡ್‍ನಲ್ಲಿರುವ ದೋಷ ಸರಿಪಡಿಸಲು ಬರುತ್ತಿದ್ದಾರೆ. ಒಬ್ಬರ ಕಾರ್ಡ್ ಮಾಡಲು 15ರಿಂದ 20 ನಿಮಿಷ ಬೇಕಾಗಿರುವುದರಿಂದ ದಿನಕ್ಕೆ 30 ಮಂದಿ ಮಾತ್ರ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬಹುದಾಗಿದೆ. ಬಂದವರಿಗೆ ಅರ್ಜಿ ಸಲ್ಲಿಸಿ, ನಿಗದಿತ ದಿನ ಬರುವಂತೆ ಸೂಚಿಸಲಾಗುತ್ತಿದೆ. ಪ್ರತಿ ದಿನ 60 ಅರ್ಜಿ ಮಾತ್ರ ವಿತರಿಸಲಾಗುತ್ತಿದೆ. ಆಧಾರ್ ಕೇಂದ್ರದಲ್ಲಿ ಒಬ್ಬ ಸಿಬ್ಬಂದಿಯ ನ್ನಷ್ಟೇ ನಿಯೋಜಿಸಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ.
ಇನ್ನೊಂದೆಡೆ ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಆಧಾರ್ ಕಾರ್ಡ್ ನೋಂದಣಿ ತಿದ್ದುಪಡಿ ಮಾಡಲು ನಿರಾಕರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿವೆ. ಸರ್ಕಾರದ ಯಾವುದೇ ಆದೇಶ ಬಂದಿಲ್ಲ ಎಂಬ ಉತ್ತರ ಬ್ಯಾಂಕ್ ಮತ್ತು ಅಂಚೆ ಕಚೇರಿಯಿಂದ ಬರುತ್ತಿವೆ. ಪರಿ ಣಾಮ ನಾಡ ಕಚೇರಿಗೆ ಜನ ಮುಗಿಬೀಳುತ್ತಿದ್ದಾರೆ.
ತಾಂತ್ರಿಕ ದೋಷ: ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುತ್ತಿರುವವರಿಗೆ ತಾಂತ್ರಿಕ ದೋಷವುಳ್ಳ ಕಾರ್ಡ್ ನೀಡುತ್ತಿರುವುದು ಹೊಸ ಸಮಸ್ಯೆ ಸೃಷ್ಟಿಸಿದೆ. ಸಾಫ್ಟ್‍ವೇರ್ ದೋಷದಿಂದ ಸನ್ ಆಫ್, ಡಾಟರ್ ಆಫ್, ವೈಫ್ ಆಫ್ ಪದ ಬಳಕೆ ಬದಲು ಕೇರ್ ಆಫ್ ಎಂದು ನಮೂದಾಗುತ್ತಿದೆ. ಇದರಿಂದ ಸರ್ಕಾರಿ ಸವಲತ್ತು ಪಡೆಯುವುದಕ್ಕೆ ಅರ್ಜಿ ಸಲ್ಲಿಸಿದರೆ ಆಧಾರ್ ಕಾರ್ಡ್‍ನ ದೋಷದಿಂದ ತಿರಸ್ಕøತವಾಗು ತ್ತಿದೆ. ಶಾಲಾ-ಕಾಲೇಜುಗಳಲ್ಲಿಯೂ ನೋಂದಣಿ ಪ್ರಕ್ರಿಯೆಗೆ ಹಿನ್ನಡೆಯಾಗುತ್ತಿದೆ. ಇದನ್ನು ಸರಿಪಡಿಸಲು ಮತ್ತೊಮ್ಮೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
ಎಂ.ಟಿ.ಯೋಗೇಶ್ ಕುಮಾರ್