ವಿಶೇಷ ವಿನ್ಯಾಸದಲ್ಲಿ ಬೇಕ್ ಪಾಯಿಂಟ್  ಸರ್ಕಲ್ ಅಭಿವೃದ್ಧಿ ಕೆಲಸ ಪೂರ್ಣ
ಮೈಸೂರು

ವಿಶೇಷ ವಿನ್ಯಾಸದಲ್ಲಿ ಬೇಕ್ ಪಾಯಿಂಟ್ ಸರ್ಕಲ್ ಅಭಿವೃದ್ಧಿ ಕೆಲಸ ಪೂರ್ಣ

February 13, 2019

ಮೈಸೂರು: ಮೈಸೂರಿನ ಸರಸ್ವತಿಪುರಂನ ಬೇಕ್ ಪಾಯಿಂಟ್ ಬಳಿಯ ಸರ್ಕಲ್ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ.

ಪೆಬಲ್‍ಸ್ಟೋನ್ ಬಳಸಿ ನೆಲಹಾಸು, ಮಧ್ಯೆ ಪಾರಂಪರಿಕ ದೀಪಕ್ಕೆ ಪೈಪ್‍ಲೈನ್ ಹಾಕಿ ಸಂಪರ್ಕ ಕಲ್ಪಿಸಲಾಗಿದೆ. 2 ತಿಂಗಳ ಹಿಂದೆ ಮೈಸೂರು ಮಹಾನಗರ ಪಾಲಿಕೆಯಿಂದ ವಾರ್ಡ್ ನಂಬರ್ 21ರಲ್ಲಿ ಬರುವ ವಿಶ್ವಮಾನವ ಜೋಡಿ ರಸ್ತೆಯ ಬೇಕ್ ಪಾಯಿಂಟ್ ಬಳಿ ಸರ್ಕಲ್ ಅಭಿವೃದ್ಧಿ ಮತ್ತು ಸೌಂದರ್ಯೀಕರಣ ಕಾಮಗಾರಿ ಯನ್ನು 15 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಆರಂಭಿಸಲಾಗಿತ್ತು.

ವಲಯ ಕಚೇರಿ 4ರ ಅಭಿವೃದ್ಧಿ ಅಧಿಕಾರಿ ಬಿ.ಆರ್.ನಳಿನ ಹಾಗೂ ಅಸಿಸ್ಟೆಂಟ್ ಇಂಜಿನಿಯರ್ ಶರತ್‍ಗೌಡ ಅವರು ಕಾಮಗಾರಿಯ ಮೇಲ್ವಿಚಾರಣೆ ವಹಿಸಿದ್ದರು. ಸಿವಿಲ್ ಕಂಟ್ರಾಕ್ಟರ್ ಬಾಲಸುಬ್ರಹ್ಮಣ್ಯ ರಾಜೇ ಅರಸ್, ಟೆಂಡರ್ ಮೂಲಕ ಗುತ್ತಿಗೆ ಪಡೆದು ನಿಗದಿತ ಅವಧಿಯಲ್ಲಿ ಸರ್ಕಲ್ ಅಭಿವೃದ್ಧಿ ಕೆಲಸ ಪೂರ್ಣಗೊಳಿಸಿದ್ದಾರೆ ಎಂದು ನಳಿನ ತಿಳಿಸಿದ್ದಾರೆ.

ಸರ್ಕಲ್ ಸೌಂದರ್ಯ ವೃದ್ಧಿಸಲು ಪಾರಂಪರಿಕ ಶೈಲಿಯ ದೀಪಗಳನ್ನು ಪಾಲಿಕೆ ಎಲೆಕ್ಟ್ರಿಕಲ್ ವಿಭಾಗದಿಂದ ಶೀಘ್ರ ಅಳವಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

 

Translate »