ಲಕ್ನೋ: ಇತ್ತೀಚಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಪೂರ್ವ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಉತ್ತರ ಪ್ರದೇಶ ರಾಜಧಾನಿ ಲಕ್ನೋಲ್ಲಿ ರೋಡ್ ಶೋ ನಡೆಸುವ ಮೂಲಕ ರಾಜಕೀಯ ಅಖಾಡಕ್ಕೆ ಧುಮುಕ್ಕಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರ ಪ್ರದೇಶ ಪಶ್ಚಿಮ ವಿಭಾಗದ ಉಸ್ತುವಾರಿ ಜ್ಯೋತಿರಾಧಿತ್ಯ ಸಿಂದಿಯಾ ಅವರೊಂದಿಗೆ ಐಸಿಸಿಸಿ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಪಶ್ಚಿಮ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ನಡೆಸಿದ ರೋಡ್ ಶೋನಲ್ಲಿ ಭಾರೀ ಜನಸ್ತೋಮ ಕಂಡುಬಂದಿತು.
ಸುಮಾರು 25 ಕಿಲೋ ಮೀಟರ್ ದೂರದವರೆಗೂ ಸಾಗಿದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ರಾಹುಲ್, ರಾಹುಲ್ ಎಂಬ ಜಯ ಘೋಷ ಮೊಳಗಿಸುತ್ತಿದ್ದರು. ಅಲ್ಲದೇ ಈ ಮೂವರನ್ನು ಸೆಲ್ಪಿ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದರು. ಈ ರೋಡೋ ಶೋ ವಿಡಿಯೋವನ್ನು ಎಐಸಿಸಿ ಟ್ವೀಟರ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ಕಾಂಗ್ರೆಸ್ ಮುಖಂಡರಾದ ರಾಜ್ ಬಬ್ಬರ್, ಆರ್‍ಪಿಎನ್ ಸಿಂಗ್, ಹರೀಶ್ ರಾವತ್, ರಾಜೀವ್ ಶುಕ್ಲಾ ಮತ್ತಿತರರು ಪಾಲ್ಗೊಂಡಿದ್ದರು.
ರೋಡ್ ಶೋನಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಮೋದಿ ಹಣವನ್ನು ಲೂಟಿ ಹೊಡೆದಿದ್ದು, ಚೌಕಿದಾರ್ ಚೋರ್ ಹೈ ಎಂದು ಆರೋಪಿಸಿ ದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸುವಂತೆ ರಾಹುಲ್ ಗಾಂಧಿ ಮನವಿ ಮಾಡಿಕೊಂಡರು. ಪ್ರಧಾನಿ ಮೋದಿ ಸರ್ಕಾರ ಜುಮ್ಲಾ ಸರ್ಕಾರ ಎಂದು ಟೀಕಿಸಿದ ಜ್ಯೋತಿರಾಧಿತ್ಯ ಸಿಂದಿಯಾ, ಬಾಲಿವುಡ್‍ನ ಪ್ರಸಿದ್ಧ ಗೀತೆಯೊಂದರ ಮೂಲಕ ಬಿಜೆಪಿಗೆ ಸವಾಲು ಹಾಕಿದ್ದಾರೆ. ಪ್ರಸ್ತುತ ರಾಜಕೀಯ ದಲ್ಲಿ ಯಾರೂ ಪೈಪೆÇೀಟಿ ನಡೆಸುತ್ತಾರೆ ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದ್ದಾರೆ. ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯ ಕರ್ತರ ನಡುವಿನ ಪೆÇೀಸ್ಟರ್‍ಗಳಲ್ಲಿ ವಾರ್ ಕಂಡುಬಂದಿದೆ. ಕಾಂಗ್ರೆಸ್ ಪಕ್ಷದ ಪೆÇೀಸ್ಟರ್ ಗಳಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮುಗುಳು ನಗೆ ರೂಪದಲ್ಲಿ ಹಾಕಿದ್ದರೆ, ಬಿಜೆಪಿಯ ಪೆÇೀಸ್ಟರ್‍ಗಳಲ್ಲಿ ಉತ್ತರ ಪ್ರದೇಶವನ್ನು ದೋಚಲು ಬಂದಿರುವುದಾಗಿ ಎಂಬ ಅಡಿಬರಹ ನೀಡಿ ಪೆÇೀಸ್ಟರ್ ಹಾಕಲಾಗಿದೆ. ಮತ್ತೊಂದು ಪೆÇೀಸ್ಟರ್‍ನಲ್ಲಿ ಅನಿಲ್ ಅಂಬಾನಿ ಹಾಗೂ ಪ್ರಧಾನಿ ಮೋದಿ ತಬ್ಬಿಕೊಳ್ಳುತ್ತಿರುವ ಚಿತ್ರವನ್ನು ಹಾಕಲಾಗಿತ್ತು.
ಪಾರಾದ ರಾಹುಲ್, ಪ್ರಿಯಾಂಕಾ: ಉತ್ತರ ಪ್ರದೇಶದ ಲಕ್ನೋದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ನೇತಾಡುವ ವಿದ್ಯುತ್ ತಂತಿಗಳಿಂದ ಕಾಂಗ್ರೆಸ್ ಮುಖಂಡರು ಸ್ವಲ್ಪದರಲ್ಲಿಯೇ ಬಚಾವಾದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಜೋತಿರಾಧಿತ್ಯ ಸಿಂಧಿಯಾ ಸೇರಿದಂತೆ ಅನೇಕರು ವಾಹನದಲ್ಲಿ ತೆರಳುತ್ತಿದ್ದರು. ಒಂದು ಕಡೆ ರಸ್ತೆಯ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಗಳು ತೀರಾ ಕೆಳಮಟ್ಟದಲ್ಲಿ ನೇತಾಡುತ್ತಿದ್ದವು. ವಾಹನದಲ್ಲಿ ನಿಂತು ಜನರತ್ತ ಕೈಬೀಸುತ್ತಿದ್ದ ರಾಹುಲ್ ಮತ್ತು ಪ್ರಿಯಾಂಕಾ ವಾಹನದ ಒಳಗೆ ಬಗ್ಗಿ ಕುಳಿತುಕೊಂಡರು. ಅವರ ಜೊತೆಯಲ್ಲಿದ್ದ ಇತರೆ ಮುಖಂಡರು ಮತ್ತು ರಕ್ಷಣಾ ಸಿಬ್ಬಂದಿ ಕೋಲಿನಿಂದ ತಂತಿಗಳನ್ನು ಮೇಲಕ್ಕೆತ್ತಿ ಅಪಾಯದಿಂದ ಪಾರಾದರು.