ಪ್ರೇಕ್ಷಕರಿಗೆ ತಡೆಯೊಡ್ಡಿದವರ ವಿರುದ್ಧ ಕ್ರಮಕೈಗೊಳ್ಳಿ ಪೊಲೀಸರಿಗೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಒತ್ತಾಯ
ಮೈಸೂರು

ಪ್ರೇಕ್ಷಕರಿಗೆ ತಡೆಯೊಡ್ಡಿದವರ ವಿರುದ್ಧ ಕ್ರಮಕೈಗೊಳ್ಳಿ ಪೊಲೀಸರಿಗೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಒತ್ತಾಯ

December 23, 2021

ಮೈಸೂರು,ಡಿ.22(ಎಸ್‍ಪಿಎನ್)-ರಂಗಾಯಣಕ್ಕೆ ನಾಟಕ ನೋಡಲು ಬಂದ ಪ್ರೇಕ್ಷಕರಿಗೆ ಬುಧ ವಾರ ಸಂಜೆ ಪ್ರವೇಶ ದ್ವಾರದಲ್ಲೇ ತಡೆ ಯೊಡ್ಡಿದ್ದಾರೆ. ಇಂಥ ವರ ವಿರುದ್ಧ ಪೊಲೀ ಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಂಗಾಯಣ ನಿರ್ದೇ ಶಕ ಅಡ್ಡಂಡ ಸಿ.ಕಾರ್ಯಪ್ಪ ಒತ್ತಾಯಿಸಿದರು.
ಹವ್ಯಾಸಿ ಕಲಾವಿದರ ಸೋಗಿನಲ್ಲಿ ಕೆಲ ದುಷ್ಕರ್ಮಿಗಳು ಈ ರೀತಿ ಮಾಡುತ್ತಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಲಾವಿದರ ಹೆಸರಿನಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಅಡೆತಡೆಯೊಡ್ಡುವವರು ಹೇಗೆ ನಮ್ಮ ಸಂಸ್ಕøತಿ, ರಂಗಭೂಮಿ ರಕ್ಷಿಸುತ್ತಾರೆ, ರಂಗಭೂಮಿಯನ್ನು ಹೇಗೆ ಬೆಳೆಸುತ್ತಾರೆ ಎಂದು ಪ್ರಶ್ನಿಸಿದರು.

ರಂಗಾಯಣ ಹೊರಭಾಗದಲ್ಲಿನ ಬೆಳ ವಣಿಗೆಯಿಂದ ಹಿರಿಯ ಮತ್ತು ಕಿರಿಯ ಕಲಾವಿದರು ತೀವ್ರ ನೊಂದುಕೊಂಡಿದ್ದಾರೆ. ಇಂತಹವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಂಗಾ ಯಣದ ದಿನನಿತ್ಯದ ಚಟುವಟಿಕೆಗಳಿಗೆ ತೀವ್ರ ತೊಂದರೆ ಆಗುವ ಸಂಭವವಿದೆ.
ರಂಗಾಯಣ ಆವರಣದಲ್ಲಿ ಭಾರತೀಯ ರಂಗಶಿಕ್ಷಣ ಶಾಲೆಯಿದೆ. 2 ರೆಪರ್ಟರಿ ಯಿದೆ. ಈ ವೇದಿಕೆಯಲ್ಲಿ ದಿನನಿತ್ಯ ಒಂದಿ ಲ್ಲೊಂದು ಕಲೆ, ಸಾಹಿತ್ಯ ಹಾಗೂ ರಂಗ ಭೂಮಿ ಕುರಿತಾದ ಪಠ್ಯ ಚಟುವಟಿಕೆಗಳ ಕುರಿತು ಕಲಾವಿದರು ಅಭ್ಯಾಸದಲ್ಲಿ ತೊಡಗಿರುತ್ತಾರೆ. ಕಲಾವಿದರ ಸೋಗಿನಲ್ಲಿ ಈ ರೀತಿ ದುಷ್ಕøತ್ಯ ಎಸಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ರಂಗಾಯಣ ಹೊರಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಯಿಂದ ಇಲ್ಲಿನ ಕಲಾವಿದರಿಗೆ ತೊಂದರೆ ಯಾದರೆ ಯಾರು ಹೊಣೆ? ಈ ಸಂಬಂಧ ಪೊಲೀಸರಿಗೆ 3 ಬಾರಿ ದೂರು ಕೊಟ್ಟಿದ್ದೇನೆ. ಈ ದೂರಿನ ಮೇರೆಗೆ ಪೊಲೀಸರು ಎಫ್‍ಐಆರ್ ದಾಖಲಿಸಿ, ಕ್ರಮ ಜರುಗಿಸ ಬೇಕು. ಇಂದು ಸಂಜೆ ಗುಂಪೊಂದು ಇದ್ದಕ್ಕಿ ದ್ದಂತೆ ಕಲಾಮಂದಿರ ಆವರಣದಲ್ಲಿ ಗುಂಪು ಗೂಡಲು ಯತ್ನಿಸಿತ್ತು. ಇದರಿಂದ ಇಲ್ಲಿನ ಅಧಿಕಾರಿಗಳಲ್ಲಿ ಆತಂಕ ಉಂಟಾಗಿತ್ತು. ಅಲ್ಲದೆ, ಸರ್ಕಾರಿ ಕಚೇರಿ ಆವರಣದಲ್ಲಿ ಖಾಸಗಿಯವರು ಬಂದು ಚರ್ಚಿಸುವುದು ಎಷ್ಟು ಸರಿ? ಈ ರೀತಿ ಚರ್ಚಿಸಲು ರೀತಿ- ನೀತಿ ಇಲ್ಲವೇ ಎಂದು ಪ್ರಶ್ನಿಸಿದರು.

ರಂಗಾಯಣ ದಿನನಿತ್ಯದ ಚಟುವಟಿಕೆಗಳಿಗೆ ಇಲ್ಲಿಯವರೆಗೆ ಯಾರಿಂದಲೂ ಯಾವುದೇ ರೀತಿ ತೊಂದರೆ ಆಗಿಲ್ಲ. ಆದರೆ, ಕಳೆದೆರಡು ದಿನಗಳಿಂದ ರಂಗಾಯಣ ಹೊರಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಘಟನೆಯಿಂದ ಪರಿಸ್ಥಿತಿ ಸೂಕ್ಷ್ಮವಾಗುತ್ತಿದೆ. ಆದರೂ ರಂಗಾಯಣದಿಂದ ರಕ್ಷಣೆ ಕೋರಿ, ಈಗಾಗಲೇ ಜಯಲಕ್ಷ್ಮೀಪುರಂ ಪೊಲೀಸರಿಗೆ ದೂರು ನೀಡಿ, ಇಲ್ಲಿನ ಕಲಾವಿದರು, ಕಚೇರಿ ಸಿಬ್ಬಂದಿ, ರಂಗಾಯಣ ಆಸ್ತಿ-ಪಾಸ್ತಿಗೆ ರಕ್ಷಣೆ ನೀಡುವಂತೆ ಮನವಿ ಮಾಡ ಲಾಗಿದೆ. ಪರಿಸ್ಥಿತಿ ಕೈಮೀರಿದರೆ, ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ಜರುಗಿಸುತ್ತೇವೆ.

-ಮಲ್ಲಿಕಾರ್ಜುನಸ್ವಾಮಿ, ಆಡಳಿತಾಧಿಕಾರಿ, ರಂಗಾಯಣ

ಬುಧವಾರ ಸಂಜೆ ನಾಲ್ಕಾರು ಜನ ಸೇರಿ ಕೊಂಡು ಕಿಂದರಿಜೋಗಿ ವೇದಿಕೆ ಬಳಿ ಚರ್ಚಿಸುತ್ತೇವೆ ಎಂದು ನಮ್ಮ ಕಚೇರಿಗೆ ಆಗಮಿಸಿದ್ದರು. ಆದರೆ, ಕಲಾ ಮಂದಿರ ಆವರಣದಲ್ಲಿ ಕಳೆದೆರಡು ದಿನಗಳ ಬೇರೆ ಪರಿಸ್ಥಿತಿ ನಿರ್ಮಾಣ ವಾಗಿ ದಿನೇ ದಿನೆ ಪರಿಸ್ಥಿತಿ ಸೂಕ್ಷ್ಮ ವಾಗುತ್ತಿದೆ. ಹಾಗಾಗಿ ಯಾರಿಗೂ ಈ ಆವರಣದಲ್ಲಿ ಚರ್ಚಿಸಲು ಅವಕಾಶ ನೀಡುವುದಿಲ್ಲ ಎಂದು ಅವರಿಗೆ ಪರಿ ಸ್ಥಿತಿಯನ್ನು ಮನವರಿಕೆ ಮಾಡಿ ಕಳು ಹಿಸಿದ್ದೇನೆ. ಮುಂದೆಯೂ ಕಲಾಮಂದಿರ ಆವರಣದಲ್ಲಿ ಪರಿಸ್ಥಿತಿ ಹೀಗೆ ಬಿಗಾಡಿಸಿ ದರೆ ಸಂದರ್ಭಾನುಸಾರ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಈ ಸಂಬಂಧ ಮೂರು ದಿನಗಳ ಹಿಂದೆಯೇ ರಕ್ಷಣೆ ಕೋರಿ, ಜಯಲಕ್ಷ್ಮೀಪುರಂ ಪೊಲೀಸರಿಗೆ ನಮ್ಮ ಕಚೇರಿಯಿಂದ ದೂರು ನೀಡಿದ್ದೇವೆ.

-ಹನೂರು ಚೆನ್ನಪ್ಪ, ಸಹಾಯಕ ನಿರ್ದೇಶಕ, ಕನ್ನಡ-ಸಂಸ್ಕøತಿ ಇಲಾಖೆ

Translate »