ಮೈಸೂರು, ಜು.20(ಎಸ್‍ಬಿಡಿ)- ಮೈಸೂರಿನ ಕೃಷ್ಣರಾಜ ಕ್ಷೇತ್ರದ ಟಾಸ್ಕ್ ಫೋರ್ಸ್ ಕಮಿಟಿ ಸಭೆ ನಡೆಸಿ, ಕೊರೊನಾ ನಿಯಂತ್ರಣ ಸಂಬಂಧ ಕೆಲವು ನಿರ್ಣಯ ಕೈಗೊಳ್ಳಲಾಯಿತು.
ಶಾಸಕ ಎಸ್.ಎ.ರಾಮದಾಸ್ ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನೇತೃತ್ವ ದಲ್ಲಿ ಸೋಮವಾರ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಗರಪಾಲಿಕೆ ಆಯುಕ್ತ ರಾದ ಗುರುದತ್ ಹೆಗ್ಡೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು, ಕೃಷ್ಣರಾಜ ಕ್ಷೇತ್ರದ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ರೋಟರಿ ಲಯನ್ಸ್ ಸಂಸ್ಥೆ ವತಿಯಿಂದ ಕೆ.ಆರ್.ಕ್ಷೇತ್ರದ ಎಲ್ಲಾ ವಾರ್ಡ್‍ಗಳಲ್ಲಿ ಪ್ರತೀ ಮನೆ ಮನೆಗೆ ಭೇಟಿ ನೀಡಿ, ಸೂಕ್ತ ಮಾಹಿತಿ ನೀಡುವುದರೊಂದಿಗೆ ಆರೋಗ್ಯ ತಪಾ ಸಣೆ ನಡೆಸಲು ಉದ್ದೇಶಿಸಿರುವ ಪ್ರಾಯೋ ಗಿಕ ಯೋಜನೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಜಿಎಸ್‍ಎಸ್ ಯೋಗಿಕ್ ಫೌಂಡೇಶನ್‍ನ ಶ್ರೀಹರಿ, ಸೇಫ್ ವ್ಹೀಲ್ಸ್ ಮಾಲೀಕ ಬಿ.ಎಸ್.ಪ್ರಶಾಂತ್, ಫಾರ್ಮ ಅಸೋಸಿಯೇಷನ್ ಪ್ರತಿನಿಧಿ ಸುಧೀಂದ್ರ, ಮೈಸೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಸಿ.ನಾರಾಯಣ್‍ಗೌಡ, ಪೆಟ್ರೋಲ್ ಬಂಕ್ ಅಸೋಸಿಯೇಷನ್ ಪ್ರತಿನಿಧಿ ರಂಜಿತ್ ಹೆಗ್ಗಡೆ, ಮೈಸೂರು ಶಾಲೆಗಳ ಒಕ್ಕೂಟದ ಮಂಜುನಾಥ್ ವತ್ಸ, ಗೈಡ್ಸ್ ಅಸೋಸಿಯೇಷನ್ ಅಶೋಕ್, ಚಾಲಕರ ಸಂಘದ ನಾಗರಾಜ್, ಟ್ರಾವೆಲ್ಸ್ ಅಸೋ ಸಿಯೇಷನ್‍ನ ಶಿವಲಿಂಗಯ್ಯ, ಮೈಸೂರು ಗ್ರಾಹಕರ ಪರಿಷತ್‍ನ ಶಿವಶಂಕರ್, ಲೆಟ್ಸ್ ಡೂ ಇಟ್‍ನ ಭಾಷ್ಯಂ, ಚಿರಾಗ್ ಆಡ್ಸ್ ವಿವೇಕ್ ಸೇರಿದಂತೆ ವಿವಿಧ ಸಂಘ ಸಂಸ್ಥೆ ಗಳ ಪ್ರತಿನಿಧಿಗಳು, ನಗರ ಪಾಲಿಕೆ ಅಧಿಕಾರಿ ಗಳು ಸಭೆಯಲ್ಲಿ ಭಾಗವಹಿಸಿದ್ದರು
ನೆಗಡಿ, ಕೆಮ್ಮು, ಜ್ವರ ಇನ್ನಿತರ ಲಕ್ಷಣಗಳು ಕಾಣಿಸಿ ಕೊಂಡಾಗ ತಕ್ಷಣಕ್ಕೆ ಯಾರನ್ನು ಸಂಪರ್ಕಿಸಬೇಕು? ಯಾವ ಆಸ್ಪತ್ರೆಗಳಿಗೆ ಭೇಟಿ ನೀಡಬಹುದು? ನೋಡಲ್ ಅಧಿಕಾರಿ ಯಾರು? ಆರೋಗ್ಯಾಧಿಕಾರಿ ಯಾರು? ಇನ್ನಿತರ ಮಾಹಿತಿ ಜೊತೆಗೆ ಸಂಬಂಧಪಟ್ಟವರ ಮೊಬೈಲ್ ಸಂಖ್ಯೆಯನ್ನೊಳಗೊಂಡ ಕರಪತ್ರ ಸಿದ್ಧಪಡಿಸಿ, ಮನೆ ಮನೆಗೂ ಹಂಚಬೇಕು. ಕೆ.ಆರ್.ಕ್ಷೇತ್ರಕ್ಕೆ ಪ್ರತ್ಯೇಕ ಆಂಬು ಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು. ಸೋಂಕು ದೃಢಪಟ್ಟ ವ್ಯಕ್ತಿ ಗಳನ್ನು ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು. ಸಾಮಾ ಜಿಕ ಜಾಲತಾಣದ ಮೂಲಕ ಜಾಗೃತಿ ಮೂಡಿಸುವ ಮೂಲಕ ಜನರಲ್ಲಿ ಅನಗತ್ಯ ಆತಂಕವನ್ನು ದೂರಾ ಗಿಸುವುದು. 24×7 ಹೆಲ್ಪ್‍ಲೈನ್ ಆರಂಭಿಸಿ, ಸಾರ್ವಜನಿ ಕರಿಗೆ ಸಮರ್ಪಕ ಮಾಹಿತಿ ನೀಡುವುದು. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗಾಗಿ ಮಾಹಿತಿ ಕೇಂದ್ರ ಆರಂಭಿಸು ವುದು. ಆನ್‍ಲೈನ್ ತರಗತಿ ನಡೆಸುವ ಸಂದರ್ಭದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವಂತೆ ಮನವಿ ಮಾಡುವುದು. ಕೊರೊನಾದಿಂದ ಮೃತಪಟ್ಟವರ ಗೌರವಯುತ ಅಂತ್ಯಸಂಸ್ಕಾರಕ್ಕೆ ಸೂಕ್ತ ಕ್ರಮಕೈಗೊಳ್ಳು ವುದು. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹೆಚ್‍ಪಿ, ಸರ್ವೋ, ಭಾರತ್ ಪೆಟ್ರೋಲ್, ಶೆಲ್ ಕಂಪನಿಗಳ ಮುಖ್ಯಸ್ಥರ ಸಭೆ ನಡೆಸಿ, ಬಂಕ್‍ಗಳಲ್ಲಿ ಗ್ರಾಹಕರಿಗೆ ಜಾಗೃತಿ ಮೂಡಿ ಸುವುದರ ಜೊತೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಲಹೆ ನೀಡುವುದು ಹೀಗೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.