ಹೋಟೆಲ್, ಪ್ರವಾಸೋದ್ಯಮಕ್ಕೆ ತೆರಿಗೆ, ಶುಲ್ಕ ರಿಯಾಯಿತಿ ಕಷ್ಟ
ಮೈಸೂರು

ಹೋಟೆಲ್, ಪ್ರವಾಸೋದ್ಯಮಕ್ಕೆ ತೆರಿಗೆ, ಶುಲ್ಕ ರಿಯಾಯಿತಿ ಕಷ್ಟ

January 20, 2021

ಮೈಸೂರು, ಜ.19(ಎಂಕೆ)- ಕೋವಿಡ್-19 ಹಿನ್ನೆಲೆ ಕಳೆದೊಂದು ವರ್ಷದಿಂದ ಪ್ರವಾಸೋದ್ಯಮ ಒಂದೇ ಅಲ್ಲ, ಎಲ್ಲಾ ಉದ್ಯಮ ಕ್ಷೇತ್ರಗಳಿಗೂ ದೊಡ್ಡ ಹೊಡೆತ ಬಿದ್ದಿದೆ. ಇದರಲ್ಲಿ ಒಂದು ಉದ್ಯಮ ಕ್ಷೇತ್ರ ಕ್ಕಾಗಿ ಸರ್ಕಾರ ವಿವಿಧ ತೆರಿಗೆ, ಶುಲ್ಕಗಳನ್ನು ಮನ್ನಾ ಮಾಡುತ್ತದೆÀ ಅಥವಾ ರಿಯಾಯಿತಿ ನೀಡುತ್ತದೆ ಎಂದು ನಿರೀಕ್ಷೆ ಮಾಡಲಾಗದ ಸ್ಥಿತಿ ಇದೆ ಎಂದು ರಾಜ್ಯ ಪ್ರವಾಸೋ ದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್ ತಿಳಿಸಿದರು.

`ದಕ್ಷಿಣ ಭಾರತ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳ ಸಂಘ’ ನಗರದ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ಮೈಸೂರು ಹೋಟೆಲ್ ಮಾಲೀಕರೊಂದಿಗೆ ಆಯೋ ಜಿಸಿದ್ದ ಸಂವಾದದಲ್ಲಿ ಭಾಗಿಯಾಗಿದ್ದ ಅವರು, ‘ಹೋಟೆಲ್ ಉದ್ಯಮ ಆರ್ಥಿಕ ಸಂಕಷ್ಟದಲ್ಲಿದೆ. ಸರ್ಕಾರದಿಂದ ಒಂದು ವರ್ಷದ ಆಸ್ತಿ ಅಥವಾ ಐಷಾರಾಮಿ ತೆರಿಗೆ, ಶುಲ್ಕ ರದ್ದು ಮಾಡಿಸಿ ಹಾಗೂ ಕೆಲವು ರಿಯಾಯಿತಿ ಕೊಡಿಸಿ’ ಎಂಬ ಮನವಿಗೆ ಪ್ರತಿಕ್ರಿಯಿಸಿದರು. ಪ್ರವಾಸೋದ್ಯಮ ಒಂದೇ ಅಲ್ಲ ಎಲ್ಲಾ ಕ್ಷೇತ್ರಕ್ಕೂ ಆರ್ಥಿಕ ನಷ್ಟ ಉಂಟಾ ಗಿದೆ. ಸರ್ಕಾರಕ್ಕೆ ನಿಮ್ಮ ಮನವಿಯನ್ನು ತಲುಪಿ ಸುವ ಪ್ರಯತ್ನ ಮಾಡುತ್ತೇವೆ. ಆದರೆ ಭರ ವಸೆ ನೀಡುವುದು ಕಷ್ಟ ಎಂದು ಹೇಳಿದರು.

ಕೊರೊನಾ ಸೋಂಕು ಹರಡುವಿಕೆ ಕಡಿಮೆಯಾಗುತ್ತಿದೆ. ಎಲ್ಲೆಡೆ ಎಂದಿನಂತೆ ವ್ಯಾಪಾರ-ವಹಿವಾಟು ನಡೆಯುತ್ತಿದೆ. ರಾಜ್ಯದಲ್ಲಿ ಐತಿಹಾಸಿಕ ಪ್ರವಾಸಿ ತಾಣ ಗಳಿವೆ. ದೇಶದಲ್ಲಿಯೇ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ವೈಶಿಷ್ಟ್ಯಗಳನ್ನು ಒಳ ಗೊಂಡಿದೆ. ಹೊಸ ಬಗೆಯ ಯೋಜನೆ ಗಳನ್ನು ರೂಪಿಸಿದರೆ ಉದ್ಯಮ ಕ್ಷೇತ್ರ ಆರ್ಥಿಕ ನಷ್ಟದಿಂದ ಹೊರಬರಲು ಸಾಧ್ಯ ಎಂದು ಸಲಹೆ ನೀಡಿದರು.

ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಶೇ.14.8 ರಷ್ಟು ಆದಾಯವಾಗುತ್ತಿದೆ. ಇದನ್ನು 2025ರ ವೇಳೆಗೆ ಶೇ.20ಕ್ಕೆ ಹೆಚ್ಚಿಸಲು ಸಹಕಾರಿ ಯಾಗುವ ಯೋಜನೆಗಳನ್ನು ಸಿದ್ಧಪಡಿಸ ಲಾಗಿದೆ. ಕೆಲವು ಯೋಜನೆಗಳು ಈಗಾ ಗಲೇ ಪ್ರಾರಂಭವಾಗಿವೆ. ಮೈಸೂರು, ಕಾರ ವಾರದ ಏರ್‍ಪೋರ್ಟ್‍ಗಳು ಅಭಿವೃದ್ಧಿ ಯಾಗುತ್ತಿವೆ. ಮೈಸೂರು ಏರ್‍ಪೋರ್ಟ್ ಮತ್ತಷ್ಟು ವಿಸ್ತರಣೆಯಾಗುತ್ತಿದೆ. ರಸ್ತೆಗಳ ಅಭಿವೃದ್ಧಿಯಾಗುತ್ತಿದ್ದು ಪ್ರವಾಸೋದ್ಯಮ ಅಭಿವೃದ್ಧಿಯತ್ತ ಸಾಗಲಿದೆ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ಮೈಸೂರು ಡಿಸಿಯಾಗಿ ಮೂರೂವರೆ ತಿಂಗಳು ಕಳೆದಿದೆ. ಕೊರೊನಾ ದಿಂದಾಗಿ ಹೋಟೆಲ್‍ಗಳು ಸಂಪೂರ್ಣ ಬಂದ್ ಆಗಿದ್ದವು. ಲಾಕ್‍ಡೌನ್ ವೇಳೆ ಕೆಲವು ಹೋಟೆಲ್‍ಗಳು ಕ್ವಾರಂಟೈನ್ ಕೇಂದ್ರಗಳಾಗಿದ್ದವು. ಸದ್ಯಕ್ಕೆ ಕೊರೊನಾ ವ್ಯಾಕ್ಸಿನ್ ಬಂದಿದ್ದು, ನಿಧಾನಗತಿಯಲ್ಲಿ ಹೋಟೆಲ್ ಉದ್ಯಮ ಚೇತರಿಕೆ ಕಾಣು ತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಮೊದಲಿನಂತಾಗಲಿದೆ ಎಂದು ಆಶಾ ವಾದ ವ್ಯಕ್ತಪಡಿಸಿದರು.

ಕಾರಿನೊಳಗಿದ್ದರೂ ದಂಡ: ಹೋಟೆಲ್ ಉದ್ಯಮಿಯೊಬ್ಬರು ‘ನಾನು ಕೆಲ ದಿನಗಳ ಹಿಂದೆ ಕುಟುಂಬ ಸಮೇತ ತಮಿಳುನಾಡಿ ನಿಂದ ಮೈಸೂರಿಗೆ ಬಂದಿದ್ದೆ. ಇಬ್ಬರು ಕಾರಿ ನೊಳಗಿದ್ದಾಗ ಮಾಸ್ಕ್ ಧರಿಸಿರಲಿಲ್ಲ. ಪೊಲೀ ಸರು ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ಕಾರಿನಿಂದ ಕೆಳಗಿಳಿಸಿ ತಲಾ 200 ರೂ. ದಂಡ ವಿಧಿಸಿದರು. ಕಾರಿನೊಳಗಿದ್ದರೂ ದಂಡ ಕಟ್ಟಿಸಿಕೊಂಡರು’ ಎಂದು ತಮ ಗಾದ ತೊಂದರೆ ವಿವರಿಸಿದರು.

ಈ ಬಗ್ಗೆ ನಗರ ಪೊಲೀಸ್ ಆಯುಕ್ತ ರೊಂದಿಗೆ ಮಾತನಾಡುವೆ. ಕೊರೊನಾ ಹರಡುವಿಕೆಗೆ ಕಡಿವಾಣ ಹಾಕಬೇಕಾದ ಸಂದರ್ಭ ಇಂಥ ಕೆಲ ಘಟನೆಗಳು ನಡೆ ದಿರಬಹುದು ಎಂದು ಜಿಲ್ಲಾಧಿಕಾರಿ ಪ್ರತಿ ಕ್ರಿಯಿಸಿದರು. ಸಂಸದೆ ಸುಮಲತಾ ಅಂಬ ರೀಶ್, ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಮಂಜುನಾಥ್, ದಕ್ಷಿಣ ಭಾರತದ ಹೋಟೆಲ್‍ಗಳು ಮತ್ತು ರೆಸ್ಟೋ ರೆಂಟ್‍ಗಳ ಸಂಘದ ಅಧ್ಯಕ್ಷ ಕೆ.ಶ್ಯಾಮರಾಜ್, ಕಾರ್ಯದರ್ಶಿ ಮಹಾಲಿಂಗಯ್ಯ, ಕರ್ನಾಟಕ ಇಂಟರ್‍ನ್ಯಾಷನಲ್ ಟ್ರಾವೆಲ್ಸ್ ಎಕ್ಸ್‍ಪೋ ಅಧ್ಯಕ್ಷ ಅಯ್ಯಪ್ಪ ಸೋಮಯ್ಯ, ಮೈಸೂರು ಹೋಟೆಲ್ ಮಾಲೀಕರ ಸಂಘದ ಸಿ.ನಾರಾ ಯಣಗೌಡ, ಮೈಸೂರು ಟ್ರಾವೆಲ್ಸ್ ಏಜೆ ನ್ಸಿಸ್ ಅಧ್ಯಕ್ಷ ಪ್ರಶಾಂತ್ ಮತ್ತಿತರರಿದ್ದರು.

 

Translate »