ನಿರಾತಂಕವಾಗಿ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ
ಮೈಸೂರು

ನಿರಾತಂಕವಾಗಿ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ

August 23, 2021

ಮೈಸೂರು, ಆ.22(ಆರ್‍ಕೆಬಿ)- ವಾರಾಂತ್ಯ ಕಫ್ರ್ಯೂ ನಡುವೆಯೂ ಭಾನು ವಾರ ಮೈಸೂರಿನಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಕೆಎಆರ್‍ಟಿಇಟಿ) ಪರೀಕ್ಷೆಗಳು ಸುಗಮವಾಗಿ ನಡೆಯಿತು. ಬೆಳಿಗ್ಗೆ ಮೊದಲ ಪತ್ರಿಕೆ, ಮಧ್ಯಾಹ್ನ 2ನೇ ಪತ್ರಿಕೆಯ ಪರೀಕ್ಷೆ ನಿರಾತಂಕವಾಗಿ ನಡೆಯಿತು.
ಒಟ್ಟು 17 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ನಡೆದ ಮೊದಲ ಪತ್ರಿಕೆಯಲ್ಲಿ ನೋಂದಾಯಿಸಿ ಕೊಂಡಿದ್ದ 4248 ಅಭ್ಯರ್ಥಿಗಳ ಪೈಕಿ 3815 ಮಂದಿ ಪರೀಕ್ಷೆ ಬರೆದರು. 383 ಮಂದಿ ಗೈರು ಹಾಜರಾಗಿದ್ದರು. ಅಲ್ಲದೆ ನೋಂದಾಯಿಸಿಕೊಂಡಿದ್ದರೂ ಪರೀಕ್ಷಾ ಶುಲ್ಕ ಕಟ್ಟಿಲ್ಲದ 50 ಮಂದಿಗೆ ಪರೀಕ್ಷೆಗೆ ಬರೆಯಲು ಅವಕಾಶ ಆಗಲಿಲ್ಲ.

ಒಟ್ಟು 31 ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ನಡೆದ ಎರಡನೇ ಪತ್ರಿಕೆಯಲ್ಲಿ ನೋಂದಾಯಿಸಿ ಕೊಂಡಿದ್ದ 7180 ಅಭ್ಯರ್ಥಿಗಳ ಪೈಕಿ 6602 ಮಂದಿ ಪರೀಕ್ಷೆ ಬರೆದರು. 489 ಮಂದಿ ಗೈರು ಹಾಜರಾಗಿದ್ದರು. ಅಲ್ಲದೆ ಹೆಸರು ನೋಂದಾಯಿಸಿಕೊಂಡಿದ್ದರೂ ಪರೀಕ್ಷಾ ಶುಲ್ಕ ಕಟ್ಟಿಲ್ಲದ 89 ಮಂದಿಗೆ ಪರೀಕ್ಷೆಯಲ್ಲಿ ಹಾಜರಾಗಲು ಆಗಲಿಲ್ಲ ಎಂದು ಪರೀಕ್ಷೆಯ ಉಸ್ತುವಾರಿ ಡಿಡಿಪಿಐ ಪಾಂಡುರಂಗ ರಾಜೇ ಅರಸ್  ತಿಳಿಸಿದರು.

ಪರೀಕ್ಷೆಗೂ ಮುನ್ನಾ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಜ್ ಮಾಡಲಾಗಿತ್ತು. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳನ್ನು ಪ್ರತಿ ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ನಿಯೋಜಿಸಲ್ಪಟ್ಟಿದ್ದ ಆರೋಗ್ಯ ಸಿಬ್ಬಂದಿ ಯಿಂದ ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿ ಮೀಟರ್‍ನಿಂದ ತಪಾಸಣೆ ಮಾಡಲಾಯಿತು.
ಪರೀಕ್ಷಾ ಅಕ್ರಮಗಳು ನಡೆಯದಂತೆ ಹಾಗೂ ಶಿಸ್ತು, ಶಾಂತಿ ಸುವ್ಯವಸ್ಥೆ ಕಾಪಾ ಡುವ ದೃಷ್ಟಿಯಿಂದ ಪ್ರತೀ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿ ಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಕೇಂದ್ರ ಗಳ ಸುತ್ತಮುತ್ತಲಿನ ಎಲ್ಲಾ ಫೆÇೀಟೊಕಾಪಿ ಅಂಗಡಿಗಳನ್ನು ಸಂಜೆಯವರೆಗೆ ಮುಚ್ಚು ವಂತೆ ಸೂಚಿಸಲಾಗಿತ್ತು. ಪರೀಕ್ಷೆಯ ಬಳಿಕ ಉತ್ತರ ಪತ್ರಿಕೆಗಳನ್ನು ಭದ್ರತಾ ಸಿಬ್ಬಂದಿಗಳ ನೆರವಿನಲ್ಲಿ ಖಜಾನೆಯ ಭದ್ರತಾ ಕೊಠಡಿ ಯಲ್ಲಿ ಇರಿಸಲಾಗಿದ್ದು, ನಾಳೆ (ಸೋಮ ವಾರ) ಬೆಂಗಳೂರಿನಗೆ ರವಾನಿಸಲಾಗು ವುದು ಎಂದು ಡಿಡಿಪಿಐ ರಾಮಚಂದ್ರ ರಾಜೇ ಅರಸ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »