ಪ್ರಥಮ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬೋಧನೆ! 
ಮೈಸೂರು

ಪ್ರಥಮ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬೋಧನೆ! 

November 4, 2020

ಮೈಸೂರು,ನ.3-ಇಂಗ್ಲಿಷ್ ಮಾಧ್ಯಮವೇ ಆದರೂ ಬೋಧನಾ ವಿಧಾನದಲ್ಲಿ ಕನ್ನಡ ಭಾಷೆ ಬಳಸಿದರೆ ವಿದ್ಯಾರ್ಥಿಗಳಿಗೆ ವಿಷಯ ಮನದಟ್ಟು ಮಾಡಿಕೊಡಲು ಸಹಕಾರಿ. ಇಂತಹ ಪರಿಣಾಮಕಾರಿ ವಿಧಾನ ಬಳಸಿ ಕನ್ನಡ ಭಾಷೆ ಬೆಳವಣಿಗೆಯೊಂದಿಗೆ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಲು ಮೈಸೂರು ಜಿಲ್ಲಾ ಪದವಿ ಪೂರ್ವ ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ (ಮೈಸೂರು ಡಿಸ್ಟ್ರಿಕ್ ಪ್ರಿ ಯೂನಿವರ್ಸಿಟಿ ಕೆಮಿಸ್ಟ್ರಿ ಲೆಕ್ಚರರ್ಸ್ ಫೋರಂ) ಮುಂದಾಗಿದೆ.

ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭಕ್ಕೂ ಮೊದಲೇ, ಅ.6ರಂದು ಮೊದಲ ವರ್ಷದ ಪಿಯು ವಿಜ್ಞಾನ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು `mಥಿ ಠಿu ಛಿhemisಣಡಿಥಿ’ ಯೂ ಟ್ಯೂಬ್ ಚಾನೆಲ್‍ಗೆ ಉಪ ನ್ಯಾಸಕರ ವೇದಿಕೆ ಚಾಲನೆ ಕೊಟ್ಟಿದೆ. ಕೊರೊನಾ ಸೋಂಕಿನ ಕಾರಣಕ್ಕೆ ತರಗತಿಗಳಿಂದ ದೂರ ಉಳಿದಿ ರುವ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರ ವಿಷಯದಲ್ಲಿ ನಿರಂತರ ಕಲಿಕೆಗೆ ಉತ್ತೇಜನ ನೀಡÀುತ್ತಿದೆ.

ಎಲ್ಲಾ ಹಂತದ ಶೈಕ್ಷಣಿಕ ವ್ಯವಸ್ಥೆಗೆ ಸಂಬಂಧಿಸಿ ಅನೇಕ ಸಂಸ್ಥೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಎಂದ ಮೇಲೆ ಪೂರ್ಣ ಆಂಗ್ಲ ಭಾಷೆಯಲ್ಲಿಯೇ ಬೋಧನೆ ಮಾಡಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಇದು ಮಕ್ಕಳ ಪರಿ ಣಾಮಕಾರಿ ಕಲಿಕೆಗೆ ಹಾನಿಯುಂಟು ಮಾಡಲಿದೆ ಎಂಬ ವಾದವೂ ಇದೆ. ಹೀಗಾಗಿ ವಿಜ್ಞಾನ ಬೋಧನೆಗೆ ಕನ್ನಡ ಬಳಸಿದರೆ ಹೆಚ್ಚು ಪರಿಣಾಮಕಾರಿ ಎನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿ ಸಿದ ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ `ಯೂ ಟ್ಯೂಬ್’ ಮೂಲಕ ಕನ್ನಡ ಮಾಧ್ಯಮದಲ್ಲಿನ ಕಲಿಕೆಗೆ ಉತ್ತೇಜನ ನೀಡುತ್ತಿದೆ. ಮಾತೃಭಾಷೆ ಕನ್ನಡದಲ್ಲಿ ವಿಷಯ ಮನದಟ್ಟು ಮಾಡುವ ಜೊತೆಗೆ ಪರೀಕ್ಷೆ ದೃಷ್ಟಿಯಿಂದ ಇಂಗ್ಲಿಷ್‍ನಲ್ಲೂ ಉತ್ತರ ಬರೆಯುವ ವಿಧಾನ ಹೇಳಿ ಕೊಡಲಾಗುತ್ತಿದೆ. ಒಟ್ಟಾರೆ ಪಾಠ ಅರ್ಥೈಸಿಕೊಳ್ಳಲು ಸುಲಭವಾಗುವಂತೆ ಕನ್ನಡದಲ್ಲೇ ಹೆಚ್ಚು ಬೋಧನೆ ಮಾಡಲಾಗುತ್ತಿದೆ. ಪ್ರಥಮ ಪಿಯು ರಸಾಯನಶಾಸ್ತ್ರ ವಿಷಯದ ಒಟ್ಟು 13 ಅಧ್ಯಾಯಗಳಲ್ಲಿ 3 ಅಧ್ಯಾಯಗಳ ಬೋಧನೆಯನ್ನು ಯು ಟ್ಯೂಬ್ ಚಾನೆಲ್‍ಗೆ ಈವರೆಗೆ ಅಪ್‍ಲೋಡ್ ಮಾಡಲಾಗಿದೆ. 30ರಿಂದ 45 ನಿಮಿಷ ಗಳ ರೆಕಾರ್ಡ್‍ನ ಈ ವಿಡಿಯೊವನ್ನು ವಿದ್ಯಾರ್ಥಿಗಳು ಯಾವಾಗಬೇಕಾದರೂ ನೋಡಿ ಪಾಠ ಕಲಿಯ ಬಹುದು. ಕನ್ನಡ ಮಾಧ್ಯಮದಲ್ಲಿ 10ನೇ ತರಗತಿವರೆಗೂ ವ್ಯಾಸಂಗ ಮಾಡಿ, ಮೊದಲ ಪಿಯುಗೆ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುವವರಿಗೆ ಇದು ಹೆಚ್ಚು ಉಪಯುಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

2006ರಲ್ಲಿ ಪ್ರಾರಂಭವಾದ ಈ ವೇದಿಕೆ 2013ರಲ್ಲಿ ಎನ್‍ಸಿಇಆರ್‍ಟಿ ಪಠ್ಯಕ್ರಮ ಪಿಯು ವಿಜ್ಞಾನ ಕೋರ್ಸ್ ಜಾರಿಗೊಳಿಸಿದಾಗ ಉಪನ್ಯಾಸಕರಿಗೆ ಕಾರ್ಯಾಗಾರ ನಡೆಸಿ ಹೊಸ ಪಠ್ಯ ಬೋಧನೆಗೆ ಸಜ್ಜುಗೊಳಿಸಿದ ಕೀರ್ತಿ ಹೊಂದಿದೆ. ಉಪನ್ಯಾಸಕರು ಎಂಎಸ್‍ಸಿ ಹಾಗೂ ಬಿ.ಇಡ್ ಪದವೀಧರರಾಗಿದ್ದರೂ ಎನ್‍ಸಿಇಆರ್‍ಟಿ ಪಠ್ಯಕ್ರಮ ಜಾರಿಯಾದ ಬಳಿಕ ಬೋಧಕರಿಗೆ ತರಬೇತಿ ಅಗತ್ಯವಾ ಯಿತು. ಪ್ರತಿವರ್ಷ ಶೈಕ್ಷಣಿಕ ಕಾರ್ಯಕ್ರಮ ಏರ್ಪಡಿಸುವ ವೇದಿಕೆಯು ವಿದ್ಯಾರ್ಥಿಗಳಿಗೆ ಅಗತ್ಯ ಕೈಪಿಡಿ ಬಿಡುಗಡೆ ಮಾಡುತ್ತಿದೆ. ಪಾಠಗಳಿಗೆ ಸಂಬಂಧಿಸಿ ನೋಟ್ಸ್, ಮಾದರಿ ಪ್ರಶ್ನೆಪತ್ರಿಕೆ, ಉತ್ತರಗಳು ಸೇರಿದಂತೆ ಹಲವು ಕಲಿಕಾ ಸಾಮಗ್ರಿಗಳನ್ನು ವೇದಿಕೆಯ ವೆಬ್‍ಸೈಟ್‍ಗೆ (ತಿತಿತಿ. mಥಿಠಿuಛಿhemisಣಡಿಥಿ.iಟಿ) ಅಪ್‍ಲೋಡ್ ಮಾಡುತ್ತಿದೆ.

150 ವರ್ಷಾಚರಣೆ: ಕಳೆದ ವರ್ಷ `ಪಿರ್ಯಾಡಿಕ್ ಟೇಬಲ್’ನ 150ನೇ ವರ್ಷಾಚರಣೆ, ಇಂಟರ್‍ನ್ಯಾಷ ನಲ್ ಯೂನಿಯನ್ ಆಫ್ ಪ್ಯೂರ್ ಅಂಡ್ ಅಪ್‍ಲೈಡ್ ಕೆಮಿಸ್ಟ್ರಿಯ (ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ವಿಶ್ವ ಮಟ್ಟದ ಸಂಸ್ಥೆ) 100ನೇ ವರ್ಷದ ಸಂಭ್ರಮಾಚರಣೆ ಯನ್ನು ವೇದಿಕೆಯು ಅರ್ಥಪೂರ್ಣವಾಗಿ ಆಚರಿಸಿತು. ಆದರೆ ಈಗ ಕೊರೊನಾ ಕಾರಣಕ್ಕೆ ಕಾರ್ಯಕ್ರಮ ಗಳಿಂದ ದೂರು ಉಳಿದಿದೆ. `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ವೇದಿಕೆ ಕಾರ್ಯದರ್ಶಿ ಸಿ.ಶ್ರೀನಿವಾಸ ಬಾಬು, ವೇದಿಕೆಯು ಸಮಾಲೋಚಿಸಿ ಗ್ರಾಮೀಣ ಮತ್ತು ಕನ್ನಡ ಮಾಧ್ಯಮ (10ನೇ ತರಗತಿವರೆಗೆ) ವಿದ್ಯಾರ್ಥಿ ಗಳಿಗೆ ಅನುಕೂಲ ಕಲ್ಪಿಸಲು ಯೂ ಟ್ಯೂಬ್ ಚಾನೆಲ್ ಆರಂಭಿಸಿದ್ದು, ಕನ್ನಡದಲ್ಲೇ ಪಾಠಗಳ ಪ್ರಸಾರ ಮಾಡುತ್ತಿದೆ. ಮುಂದೆ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆಯಡಿ ಬೋಧನೆ ಮಾಡಲು ಉದ್ದೇಶಿಸ ಲಾಗಿದೆ. ಸದ್ಯ ಯೂ ಟ್ಯೂಬ್ ಚಾನೆಲ್‍ಗೆ 1,030 ವಿದ್ಯಾರ್ಥಿಗಳು ಚಂದಾದಾರರಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 10 ಸಾವಿರ ಪ್ರಥಮ ಪಿಯು (ವಿಜ್ಞಾನ) ವಿದ್ಯಾರ್ಥಿಗಳಿದ್ದು, ಎಲ್ಲರೂ ಈ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಎಂ.ಬಿ.ಪವನ್‍ಮೂರ್ತಿ

 

 

Translate »