ತಹಸೀಲ್ದಾರ್‍ಗೆ ಭೂ ಸರ್ವೆ ಅಧಿಕಾರವಿದೆ: ಹೈಕೋರ್ಟ್
News

ತಹಸೀಲ್ದಾರ್‍ಗೆ ಭೂ ಸರ್ವೆ ಅಧಿಕಾರವಿದೆ: ಹೈಕೋರ್ಟ್

March 18, 2022

ಬೆಂಗಳೂರು: ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 140(2) ರಡಿಯಲ್ಲಿ ಮುನ್ಸಿಪಲ್ ಕಾಪೆರ್Çರೇಶನ್ ವ್ಯಾಪ್ತಿಯೊಳಗೆ ಬರುವ ಭೂಮಿಯ ಸರ್ವೆ ಮಾಡಿ ಗಡಿಯನ್ನು ನಿಗದಿಪಡಿಸುವ ಅಧಿಕಾರ ತಹಸೀಲ್ದಾರ್‍ಗಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಅಲೋಕ್ ಅರದೆ ಮತ್ತು ಎಸ್ ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ಆದೇಶ ಹೊರಡಿಸಿದ್ದು ಬೆಂಗಳೂರಿನ ಬಸ ವನಗುಡಿಯ ನಿವಾಸಿ ಸುನಿಲ್ ಚಜೆಡ್ ಎಂಬು ವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಆದೇಶ ನೀಡಿದ್ದು, 2020ರ ಅಕ್ಟೋಬರ್‍ನಲ್ಲಿ ಒಬ್ಬರು ನ್ಯಾಯಾಧೀಶರನ್ನೊಳ ಗೊಂಡ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶದ ಮೌಲ್ಯವನ್ನು ಪ್ರಶ್ನಿಸಿದೆ.

ಸಮೀಕ್ಷೆ ಸಮಯದಲ್ಲಿ, ಯಾವುದೇ ಸರ್ವೆ ನಂಬರ್‍ನ ಗಡಿ ಅಥವಾ ಸರ್ವೆ ನಂಬರ್‍ನ ಉಪವಿಭಾಗ ಅಥವಾ ಹಿಡುವಳಿ ವಿವಾದಕ್ಕೊಳಗಾಗಿ ದ್ದರೆ, ಭೂಮಾಪಕ ಅಧಿಕಾರಿಯು ಭೂಮಿಗೆ ಸಂಬಂಧಿಸಿದ ಭೂ ದಾಖಲೆಗಳ ಅನುಸಾರವಾಗಿ ಮತ್ತು ಅವರು ಅಗತ್ಯವೆಂದು ಪರಿಗಣಿಸುವ ವಿಚಾರಣೆಯನ್ನು ಮಾಡಿದ ನಂತರ ನಿಗದಿಪಡಿಸಬೇಕು. ಕಾಯಿದೆಯ ಸೆಕ್ಷನ್ 140(2) ರ ಪ್ರಕಾರ ಸರ್ವೆ ನಂಬರಿನ ಗಡಿಗೆ ಸಂಬಂಧಿಸಿದಂತೆ ಯಾವುದೇ ವಿವಾದ ಉಂಟಾದರೆ, ತಹಸೀಲ್ದಾರ್ ಅವರು ಭೂ ದಾಖಲೆಗಳನ್ನು ಪರಿಗಣಿಸಿ ವಿವಾದವನ್ನು ನಿರ್ಧರಿಸುತ್ತಾರೆ ಎಂದು ಹೈಕೋರ್ಟ್ ಆದೇಶ ಹೇಳಿದೆ.

ಕಾಯಿದೆಯ ಸೆಕ್ಷನ್ 140(2)ರ ಅಡಿಯಲ್ಲಿ ತಹಸೀಲ್ದಾರ್‍ಗೆ ಸರ್ವೆ ನಂಬರ್‍ನ ಗಡಿಯನ್ನು ನಿರ್ಧರಿಸುವ ಅಧಿಕಾರವಿದೆ. ಈ ಅಧಿಕಾರವನ್ನು ಪುರಸಭೆಯ ವ್ಯಾಪ್ತಿಯಲ್ಲಿ ಅಥವಾ ಪುರಸಭೆಯ ಮಿತಿಯ ಹೊರಗೆ ಇದೆಯೇ ಎಂಬ ಅಂಶವನ್ನು ಲೆಕ್ಕಿಸದೆಯೇ ಸರ್ವೆ ಸಂಖ್ಯೆ ಅಥವಾ ಹಿಡುವಳಿಗಳಿಗೆ ಸಂಬಂಧಿಸಿದಂತೆ ನಡೆಸಬಹುದು ಎಂದು ನ್ಯಾಯಾಲಯ ಹೇಳಿದೆ. ಕಳೆದ 2020ರ ಅಕ್ಟೋಬರ್‍ನಲ್ಲಿ ಏಕಸದಸ್ಯ ಪೀಠ ಆದೇಶ ನೀಡಿ, ಕರ್ನಾಟಕ ಮುನ್ಸಿಪಲ್ ಕಾಪೆರ್Çರೇಷನ್ ಕಾಯಿದೆಯ ಸೆಕ್ಷನ್ 112-ಡಿ ಅನ್ನು ಗಣನೆಗೆ ತೆಗೆದುಕೊಂಡಿದೆ, ಇದು ಭೂಮಿ ಮತ್ತು ಕಟ್ಟಡಗಳನ್ನು ಸರ್ವೆ ಮಾಡಲು ಆಯುಕ್ತರಿಗೆ ಅಧಿಕಾರ ನೀಡಿತ್ತು.

Translate »