ಮತ್ತೊಮ್ಮೆ ಪ್ರಾದೇಶಿಕ ಪಕ್ಷಗಳ ಒಗ್ಗೂಡಿಕೆ ಯತ್ನ  ತೆಲಂಗಾಣ ಸಿಎಂ ಚಂದ್ರಶೇಖರರಾವ್ ದೇವೇಗೌಡರೊಂದಿಗೆ ಇಂದು ಮಾತುಕತೆ
ಮೈಸೂರು

ಮತ್ತೊಮ್ಮೆ ಪ್ರಾದೇಶಿಕ ಪಕ್ಷಗಳ ಒಗ್ಗೂಡಿಕೆ ಯತ್ನ ತೆಲಂಗಾಣ ಸಿಎಂ ಚಂದ್ರಶೇಖರರಾವ್ ದೇವೇಗೌಡರೊಂದಿಗೆ ಇಂದು ಮಾತುಕತೆ

May 26, 2022

ಬೆಂಗಳೂರು,ಮೇ ೨೫(ಕೆಎಂಶಿ) -ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯ ವಾಗಿ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ನಾಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜತೆ ಮಾತುಕತೆ ನಡೆಸಲಿದ್ದಾರೆ.

ಕೆ.ಸಿ.ಚಂದ್ರಶೇಖರರಾವ್ ನಾಳೆ ಮಧ್ಯಾಹ್ನ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಆಗಮಿಸಿ, ಮಾತುಕತೆ ನಡೆಸಲಿದ್ದಾರೆ. ಪ್ರಸಕ್ತ ರಾಜ ಕಾರಣ, ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಒಗ್ಗೂಡಿಸಲು ಕೆ.ಸಿ.ಚಂದ್ರಶೇಖರರಾವ್, ಡಿಎಂಕೆ, ಎಎಪಿ, ತೃಣಮೂಲ, ಸಮಾಜವಾದಿ, ಆರ್‌ಜೆಡಿ ಸೇರಿದಂತೆ ಸಮಾನಮನಸ್ಕ ಪಕ್ಷಗಳ
ಮುಖಂಡರು, ಮುಖ್ಯಮಂತ್ರಿಗಳು ಹಾಗೂ ನಾಯಕರನ್ನು ಈಗಾಗಲೇ ಸಂಪರ್ಕಿಸಿ ಮಾತುಕತೆ ಮುಗಿಸಿದ್ದಾರೆ. ಪ್ರಾದೇಶಿಕ ಪಕ್ಷಗಳ ಒಗ್ಗೂಡುವಿಕೆ ಅಂತಿಮ ಸ್ವರೂಪ ನೀಡಲು ಹೆಚ್.ಡಿ.ದೇವೇಗೌಡರ ಸಹಕಾರ ಕೋರುತ್ತಿದ್ದಾರೆ. ಕರ್ನಾಟಕದಲ್ಲಿ ನಡೆದ ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಗೌಡರಿಗೆ ಚಂದ್ರಶೇಖರ್ ರಾವ್ ಬೆಂಬಲ ಸೂಚಿಸಿದ್ದರು. ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಬೆನ್ನಲ್ಲೇ ಮತ್ತೆ ರಾವ್ ಪ್ರಾದೇಶಿಕ ಪಕ್ಷಗಳ ಒಗ್ಗೂಡಿಸುವಿಕೆ ಜತೆಗೆ ಜೆಡಿಎಸ್ ಬೆಂಬಲಿಸಲು ಮುಂದಾಗಿದ್ದಾರೆ. ಮಾತುಕತೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಉಪಸ್ಥಿತರಿರುತ್ತಾರೆ.

 

Translate »