ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಫೈನಲ್
ಮೈಸೂರು

ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಫೈನಲ್

May 26, 2022

ಬೆಂಗಳೂರು,ಮೇ ೨೫-ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನಾಳೆ (ಮೇ ೨೬) ಬಹುತೇಕ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಈ ಸಂಬAಧ ನವದೆಹಲಿಯಲ್ಲಿ ಗುರುವಾರ ಬಿಜೆಪಿ ವರಿಷ್ಠರ ಮಹತ್ವದ ಸಮಾಲೋಚನಾ ಸಭೆ ನಡೆಯಲಿದೆ.

ಕರ್ನಾಟಕದ ೪ ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಬಿಜೆಪಿ ಸುಲಭವಾಗಿ ಗೆಲ್ಲಬಹುದಾಗಿದ್ದು, ಕಣಕ್ಕಿಳಿಯುವ ಇಬ್ಬರು ಅಭ್ಯರ್ಥಿಗಳ ಆಯ್ಕೆ ನಡೆಯಬೇಕಿದೆ. ಹಾಲಿ ಸದಸ್ಯೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಸೇರಿದಂತೆ ಡಜನ್ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ವರಿಷ್ಠರಿಗೆ ರವಾನಿಸಿದೆ.

ಮತ್ತೋರ್ವ ಹಾಲಿ ಸದಸ್ಯ ಕೆ.ಸಿ.ರಾಮಮೂರ್ತಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಸುರಾನಾ, ಮಾಜಿ ಶಾಸಕ ಲೆಹರ್‌ಸಿಂಗ್, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಉದ್ಯಮಿ ಪ್ರಕಾಶ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಆಕಾಂಕ್ಷಿತರ ಪಟ್ಟಿಯಲ್ಲಿದ್ದಾರೆ. ೩ನೇ ಅಭ್ಯರ್ಥಿಯನ್ನು ಕಣ ಕ್ಕಿಳಿಸುವ ಕುರಿತಾಗಿಯೂ ರಾಷ್ಟಿçÃಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ೩ನೇ ಅಭ್ಯರ್ಥಿಯ ಆಯ್ಕೆಗೆ ೧೫ ಶಾಸಕರ ಕೊರತೆಯಿದ್ದು,
ಅದು ಕೈಗೂಡುವುದಾದರೆ ಮಾತ್ರ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಇಲ್ಲದಿ ದ್ದರೆ ಪ್ರತಿಪಕ್ಷಗಳ ಹೆಚ್ಚುವರಿ ಮತ ಕೀಳಬಲ್ಲ ತಟಸ್ಥ ಅಭ್ಯರ್ಥಿಯೊಬ್ಬರನ್ನು ಮುಂದೆ ಬಿಟ್ಟು ಗೆಲ್ಲಿಸುವ ತಂತ್ರಗಾರಿಯೂ ಬಿಜೆಪಿಯದ್ದಾಗಿದೆ. ಈ ನಡುವೆ ವಿಧಾನಪರಿಷತ್ ಟಿಕೆಟ್ ವಂಚಿತರಿಗೆ ಅವಕಾಶ ನೀಡುವುದೋ ಅಥವಾ ಪಕ್ಷ ನಿಷ್ಠ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೋ ಎನ್ನುವ ಬಗ್ಗೆ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಪರಿಷತ್ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕೈ ಮೇಲಾಗಿದ್ದು, ಇದರಲ್ಲೂ ಅವರದ್ದೇ ಮಾತು ನಡೆಯುತ್ತಾ ಅನ್ನೋದು ನೋಡಬೇಕಿದೆ. ಈಗಾಗಲೇ ಮಗನಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಮಾಧಾನ ಮಾಡುವ ಪ್ರಯತ್ನ ಏನಾದ್ರೂ ಆಗುತ್ತಾ ಅನ್ನುವುದನ್ನು ಕಾದು ನೋಡಬೇಕು. ಜೂನ್ ೧೦ ರಂದು ನಡೆಯುವ ಚುನಾವಣೆಗೆ ನಿನ್ನೆಯೇ ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಸಲು ಮೇ ೩೧ ಕೊನೆಯ ದಿನ. ಸೋಮವಾರ ದೊಳಗೆ ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಬೇಕಿದೆ.

Translate »