ನಾಗಮಂಗಲದಲ್ಲಿ ದೇಗುಲದ ಹುಂಡಿ ಕಳವು
ಮಂಡ್ಯ

ನಾಗಮಂಗಲದಲ್ಲಿ ದೇಗುಲದ ಹುಂಡಿ ಕಳವು

September 7, 2021

ನಾಗಮಂಗಲ, ಸೆ.6- ಪಟ್ಟಣದ ಪಡು ವಲಪಟ್ಟಣ ರಸ್ತೆಯಲ್ಲಿರುವ ಶ್ರೀ ಕಂಚಿ ವರದರಾಯಸ್ವಾಮಿ ದೇವಸ್ಥಾನ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯ ಎಂ. ಹೊಸೂರು ಗೇಟ್‍ನಲ್ಲಿರುವ ಶ್ರೀ ಮೋರಿಚನ್ನಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಕಾಣಿಕೆ ಹುಂಡಿ ಯನ್ನು ಕದ್ದೊಯ್ದು, ಖಾಲಿ ಹುಂಡಿಯನ್ನು ಜಮೀನೊಂದರಲ್ಲಿ ಬಿಸಾಡಿ ಹೋಗಿದ್ದಾರೆ.

ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಪಕ್ಕದ ರಸ್ತೆಯ ಕೂಗಳತೆ ದೂರದಲ್ಲಿರುವ ಶ್ರೀ ಕಂಚಿವರದರಾಯಸ್ವಾಮಿ ದೇವಾ ಲಯದ ಮುಂಬಾಗಿಲ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು, ಹುಂಡಿ ಯನ್ನು ಕದ್ದೊಯ್ದು ಸುಮಾರು 1 ಲಕ್ಷಕ್ಕೂ ಹೆಚ್ಚು ಕಾಣಿಕೆ ಹಣವನ್ನು ದೋಚಿ, ಹುಂಡಿ ಯನ್ನು ಮೈಸೂರು ರಸ್ತೆಯ ಎಂ.ಹೊಸೂರು ಗೇಟ್‍ಬಳಿ ಬಿಸಾಡಿದ್ದಾರೆ. ನಂತರ ಎಂ. ಹೊಸೂರು ಗೇಟ್ ಬಳಿಯಿರುವ ಶ್ರೀ ಮೋರಿಚನ್ನಾಂಜನೇಯಸ್ವಾಮಿ ದೇವಸ್ಥಾನ ದಲ್ಲೂ ಬೀಗ ಮುರಿದು ಹುಂಡಿಯಲ್ಲಿದ್ದ ಕಾಣಿಕೆ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಕೊರೊನಾ ಮತ್ತು ಲಾಕ್‍ಡೌನ್ ಹಿನ್ನಲೆ ಯಲ್ಲಿ ಪಟ್ಟಣದ ಕಂಚಿವರದರಾಯಸ್ವಾಮಿ ದೇವಸ್ಥಾನದ ಹುಂಡಿಯಲ್ಲಿದ್ದ ಹಣವನ್ನು ಕಳೆದ ಒಂದೂವರೆ ವರ್ಷದಿಂದ ತೆಗೆದಿರ ಲಿಲ್ಲ. ಕಡೆ ಶ್ರಾವಣ ಮುಗಿದ ನಂತರ ಹುಂಡಿಯಲ್ಲಿನ ಹಣವನ್ನು ತೆಗೆಯಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧ ರಿಸಿದ್ದರು. ಆದರೆ ಕಡೆ ಶ್ರಾವಣ ಮುಗಿದ ಮರುದಿನವೇ ದೇವರ ಹುಂಡಿ ಕದ್ದಿರುವ ದುಷ್ಕರ್ಮಿಗಳು ಅದರಲ್ಲಿದ್ದ ಕಾಣಿಕೆ ಹಣವನ್ನು ದೋಚಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‍ಐ ರವಿಶಂಕರ್ ಪರಿಶೀಲನೆ ನಡೆಸಿದ ಬಳಿಕ, ದೇವಸ್ಥಾನದ ಆಡಳಿತಮಂಡಳಿಯವರು ನೀಡಿರುವ ದೂರಿನ್ವಯ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

Translate »