ಪಾಂಡವಪುರದಲ್ಲಿ ಸರಣಿ ಕಳ್ಳತನ
ಮಂಡ್ಯ

ಪಾಂಡವಪುರದಲ್ಲಿ ಸರಣಿ ಕಳ್ಳತನ

September 7, 2021

ಪಾಂಡವಪುರ, ಸೆ.6- ಪಟ್ಟಣದ ಹಳೇ ನಾಗಮಂಗಲ ರಸ್ತೆಯಲ್ಲಿರುವ ಮೆಡಿಕಲ್ಸ್ ಸ್ಟೋರ್‍ನ ಬೀಗ ಮುರಿದು 5 ಸಾವಿರ ನಗದು ಮತ್ತು ದಾಖಲಾತಿಗಳನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ.

ಭಾನುವಾರ ರಾತ್ರಿ ಇಲ್ಲಿನ ಸೂರ್ಯ ಮೆಡಿಕಲ್ಸ್ ಸ್ಟೋರ್‍ನ ಬೀಗ ಮುರಿದಿರುವ ಕಳ್ಳರು, 5 ಸಾವಿರ ನಗದು ಹಾಗೂ ಕೆಲವು ದಾಖಲಾತಿಗಳನ್ನು ಕದ್ದೊಯ್ಡಿದ್ದಾರೆ. ತಾಲೂ ಕಿನ ಹರಳಹಳ್ಳಿ ಗೇಟ್ ಬಳಿ ಕದ್ದ ದಾಖ ಲಾತಿಗಳನ್ನು ಸುಟ್ಟು ಪರಾರಿಯಾಗಿದ್ದಾರೆ.

ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ, ಶ್ವಾನದಳ, ಬೆರಳಚ್ಚು ತಜ್ಞ ರನ್ನು ಕರೆಸಿ ಪರಿಶೀಲಿಸಿದ್ದಾರೆ. ಕಳ್ಳರ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದು, ಘಟನೆ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.3ರಂದು ಸಹ ಪಟ್ಟಣದ ಬಾಲಾಜಿ ಮೆಡಿಕಲ್ಸ್ ಸ್ಟೋರ್‍ನಲ್ಲಿ ಕಳ್ಳತನವಾಗಿತ್ತು. ಅದಾದ ಎರಡೇ ದಿನದಲ್ಲಿ ಮತ್ತೊಂದು ಮೆಡಿಕಲ್ಸ್ ಸ್ಟೋರ್‍ನಲ್ಲಿ ಕಳ್ಳತನವಾಗಿದ್ದು ಜನತೆಯಲ್ಲಿ ಆತಂಕ ಹೆಚ್ಚಿಸಿದೆ.

ಪಟ್ಟಣದಲ್ಲಿ ಮೇಲಿಂದ ಮೇಲೆ ಕಳ್ಳತನ ನಡೆಸುತ್ತಿರುವುದರಿಂದ ಶಾಸಕ ಸಿ.ಎಸ್. ಪುಟ್ಟರಾಜು ಅವರು ಪೊಲೀಸ್ ಇಲಾ ಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಕಳ್ಳತನ ಪ್ರಕರಣಗಳು ಹೆಚ್ಚಾಗಲು ಪೊಲೀಸರ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಇಲಾಖೆಯ ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.

Translate »