ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರ ನಿಟ್ಟುಸಿರು
ಮಂಡ್ಯ

ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರ ನಿಟ್ಟುಸಿರು

September 7, 2021

ನಾಗಮಂಗಲ, ಸೆ.6- ತಾಲೂಕಿನ ಪಿ.ನೇರಲಕೆರೆ ಗ್ರಾಮದ ಹೊರವಲಯದಲ್ಲಿ ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ತಾಲೂಕಿನ ಪಿ.ನೇರಲಕೆರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೆಲ ದಿನಗಳಿಂದ ಚಿರತೆಯ ಹಾವಳಿ ಹೆಚ್ಚಾಗಿ ಸಾಕು ಪ್ರಾಣಿಗಳ ಮೇಲೆ ದಾಳಿಯೂ ಸಹ ನಡೆಯುತ್ತಿತ್ತು. ಇದರಿಂದ ಆತಂಕಕ್ಕೀಡಾ ಗಿದ್ದ ಜನರು ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮದ ಹೊರವಲಯದ ಪೊದೆಯೊಂದರಲ್ಲಿ ಬೋನು ಇರಿಸಿದ್ದರು. ಎಂದಿನಂತೆ ರಾತ್ರಿ ಸಮಯದಲ್ಲಿ ತನ್ನ ಸಂಚಾರ ಆರಂಭಿಸಿದ್ದ ಈ ಚಿರತೆ ಬೋನಿನಲ್ಲಿರಿಸಿದ್ದ ನಾಯಿ ಯನ್ನು ತಿನ್ನಲು ಬಂದು ಸೆರೆಸಿಕ್ಕಿದೆ.
ವಿಷಯ ತಿಳಿದು ನಿಟ್ಟುಸಿರು ಬಿಟ್ಟ ಗ್ರಾಮಸ್ಥರು ಅರಣ್ಯ ಇಲಾ ಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಾಲೂಕು ವಲಯ ಅರಣ್ಯಾಧಿಕಾರಿ ಸತೀಶ್ ಮತ್ತು ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ನೇತೃತ್ವದ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು. ಎರಡೂವರೆ ವರ್ಷ ಪ್ರಾಯದ ಚಿರತೆ ಎಂದು ತಿಳಿದುಬಂದಿದೆ.

ಬೋನಿಗೆ ಬಿದ್ದಿರುವ ಚಿರತೆಯನ್ನು ಇಲಾಖೆಯ ಹಿರಿಯ ಅಧಿಕಾರಿ ಗಳ ಮಾರ್ಗದರ್ಶನದಂತೆ ಮಲೈ ಮಹದೇಶ್ವರಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು, ಸಾರ್ವಜನಿಕರು ಯಾವುದೇ ಆತಂಕಕ್ಕೊಳ ಗಾಗದೆ ನೆಮ್ಮದಿಯಿಂದ ಇರಬೇಕು ಎಂದು ತಿಳಿಸಿರುವ ಅರಣ್ಯಾಧಿ ಕಾರಿ ಸತೀಶ್, ತಾಲೂಕಿನ ಯಾವುದೇ ಪ್ರದೇಶದಲ್ಲಿ ಚಿರತೆ ಅಥವಾ ಕಾಡು ಪ್ರಾಣಿಗಳು ಕಂಡುಬಂದರೆ ಮಾಹಿತಿ ನೀಡುವಂತೆ ತಿಳಿಸಿದರು.

Translate »