ಈಚರ್‍ಗೆ ಟೆಂಪೋ ಡಿಕ್ಕಿ: ವಿದ್ಯಾರ್ಥಿನಿ ಸೇರಿ ಇಬ್ಬರ ಸಾವು
ಮಂಡ್ಯ

ಈಚರ್‍ಗೆ ಟೆಂಪೋ ಡಿಕ್ಕಿ: ವಿದ್ಯಾರ್ಥಿನಿ ಸೇರಿ ಇಬ್ಬರ ಸಾವು

July 10, 2021

ಕೆ.ಆರ್.ಪೇಟೆ, ಜು.9- ಆಷಾಢ ಅಮಾವಾಸ್ಯೆಯ ಪ್ರಯುಕ್ತ ನಡೆಯುತ್ತಿದ್ದ ದೇವರ ಪೂಜೆ ಮುಗಿಸಿಕೊಂಡು ಹಿಂದಿರು ಗುತ್ತಿದ್ದ ಟೆಂಪೋವೊಂದು ಈಚರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೋದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿ ಗ್ರಾಮದ ಜಯರಾಮೇಗೌಡರ ಪುತ್ರ ಯೋಗೇಶ್(30), ಕೆ.ಆರ್.ಪೇಟೆ ಟೌನ್ ಸುಭಾಷ್ ನಗರದ ವಿಜಯ ಕುಮಾರ್ ಅವರ ಪುತ್ರಿ ಇಂಪನಾ (ಬೇಬಿ-19ವರ್ಷ) ಮೃತಪಟ್ಟವರು.

ಘಟನೆ ವಿವರ: ಕೆ.ಆರ್.ಪೇಟೆ ತಾಲೂಕಿನ ವಳಗೆರೆಮೆಣಸ ಗ್ರಾಮದಿಂದ ಒಂದೇ ಕುಟುಂಬದ ಸಂಬಂಧಿಕರು ಟೆಂಪೋ ಮೂಲಕ ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿ ಶ್ರೀ ಕ್ಷೇತ್ರದ ಬಳಿ ಇರುವ ಅಟ್ಟಿಲಕ್ಕಮ್ಮ ದೇವರ ಪೂಜೆಗೆ ತೆರಳಿದ್ದರು. ಪೂಜೆ ಮುಗಿಸಿಕೊಂಡು ಗ್ರಾಮಕ್ಕೆ ಹಿಂದಿರು ಗುತ್ತಿದ್ದಾಗ ಬೆಳ್ಳೂರು ಕ್ರಾಸ್ ಸಮೀಪದ ಬಿ.ಎಂ.ರಸ್ತೆಯಲ್ಲಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಈಚರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿ ಣಾಮ ಟೆಂಪೋ ಮುಂಬದಿ ಸೀಟಿನಲ್ಲಿ ಕುಳಿತಿದ್ದ ಅಗ್ರಹಾರಬಾಚಹಳ್ಳಿ ನಿವಾಸಿ ಯೋಗೇಶ್ ಮತ್ತು ಸುಭಾಷ್‍ನಗರದ ನಿವಾಸಿ ಇಂಪನಾ ಅವರಿಗೆ ಗಂಭೀರವಾದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬೆಳ್ಳೂರು ಠಾಣೆ ಪೊಲೀ ಸರು ಪರಿಶೀಲನೆ ನಡೆಸಿ ಶವವನ್ನು ಬಿಜಿಎಸ್ ಆಸ್ಪತ್ರೆಗೆ ರವಾನಿಸಿದರು.

ನಂತರ ಶವವನ್ನು ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಶವಗಳನ್ನು ವಾರಸುದಾರರಿಗೆ ಒಪ್ಪಿಸಿದರು. ಈ ಬಗ್ಗೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »