ಸರ್ಕಾರದ ಧನಸಹಾಯ ಪಡೆಯಲು ತೊಡಕು: ಗೃಹಕಾರ್ಮಿಕರ ಅಳಲು
ಮೈಸೂರು

ಸರ್ಕಾರದ ಧನಸಹಾಯ ಪಡೆಯಲು ತೊಡಕು: ಗೃಹಕಾರ್ಮಿಕರ ಅಳಲು

July 10, 2021

ಮೈಸೂರು, ಜು.9(ಎಂಟಿವೈ)- ಲಾಕ್‍ಡೌನ್ ವೇಳೆ ಸಂತ್ರಸ್ತರಾದವರಿಗೆ ಸರ್ಕಾರ ಘೋಷಿಸಿದ ಧನಸಹಾಯ ಪಡೆಯಲು ಗೃಹ ಕಾರ್ಮಿಕರ ಉದ್ಯೋಗ ದೃಢೀಕರಣ ಪತ್ರದಲ್ಲಿ ದಿಢೀರ್ ಬದಲಾ ವಣೆ ತಂದಿರುವುದನ್ನು ವಿರೋಧಿಸಿ ಮೈಸೂ ರಿನ ಕಾರ್ಮಿಕ ಇಲಾಖೆ ಮುಂಭಾಗ ಎಐಯುಟಿಯುಸಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟಿಸಿದ ಗೃಹ ಕಾರ್ಮಿಕರು, ಹಳೆಯ ಉದ್ಯೋಗ ದೃಢೀಕರಣ ಪತ್ರದ ನಮೂನೆ ಯನ್ನೇ ಪರಿಗಣಿಸುವಂತೆ ಆಗ್ರಹಿಸಿದರು.

ಕುವೆಂಪು ನಗರದ ಅಕ್ಷಯ ಭಂಡಾರ್ ಬಳಿ ಇರುವ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಶುಕ್ರವಾರ ಬೆಳಗ್ಗೆ ಪ್ರತಿಭಟನೆ ಆರಂಭಿಸಿದ ಗೃಹ ಕಾರ್ಮಿಕರು, ರಾಜ್ಯ ಸರ್ಕಾರ ಗೃಹ ಕಾರ್ಮಿಕರಿಗೆ ಲಾಕ್‍ಡೌನ್ ಪರಿಹಾರವಾಗಿ 2000 ರೂ. ಘೋಷಿ ಸಿದೆ. ಈವರೆಗೆ ಗೃಹ ಕಾರ್ಮಿಕರು ಪಾಸ್ ಪೆÇೀರ್ಟ್ ಸೈಜ್ ಫೋಟೊ, ಬಿಪಿಎಲ್ ಕಾರ್ಡ್, ಆಧಾರ್, ಬ್ಯಾಂಕ್ ಖಾತೆ ವಿವರ ಹಾಗೂ ಉದ್ಯೋಗ ದೃಢೀಕರಣ ಪತ್ರಕ್ಕೆ ಗೆಜೆಟೆಡ್ ಆಫೀಸರ್ ಸಹಿ ಹಾಕಿಸಿ ಸೇವಾ ಸಿಂಧು ಪೆÇೀರ್ಟಲ್‍ನಲ್ಲಿ ಅಪ್‍ಲೋಡ್ ಮಾಡಿದ್ದರೆ ಸಾಕಿತ್ತು. ಈ ರೀತಿ 1.4 ಲP್ಷÀ ಗೃಹ ಕಾರ್ಮಿಕರು ಅರ್ಜಿ ಅಪ್‍ಲೋಡ್ ಮಾಡಿದ್ದಾರೆ. ಆದರೆ ಈಗ ಧನಸಹಾಯ ಪಡೆಯಲು ನಿಯಮ ಬದಲಿಸಿರುವುದ ರಿಂದ ತೊಡಕಾಗುತ್ತಿದೆ.

ಹೊಸ ನಿಯಮ ಕಠಿಣವಾಗಿದೆ ಎಂದು ಅಳಲು ತೋಡಿಕೊಂಡರು. ರಾಜ್ಯದಲ್ಲಿ 10 ಲP್ಷÀ ಗೃಹ ಕಾರ್ಮಿಕರಿ z್ದÁರೆ. ಕಳೆದ ವಾರ ಹೈಕೋರ್ಟ್ ವಿಚಾರಣೆ ನಂತರ ಸರ್ಕಾರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನಷ್ಟು ಸರಳಗೊಳಿಸಿದ್ದು, ಗೆಜೆಟೆಡ್ ಆಫೀಸರ್ ಸಹಿ ಬದಲಾಗಿ ಉದ್ಯೋಗ ದಾತರ ಪಾನ್‍ಕಾರ್ಡ್, ಆಧಾರ್ ಕಾರ್ಡ್ ಮತ್ತಿತರ ವಿವರಗಳನ್ನು ನೀಡಿ ಉದ್ಯೋಗ ದೃಢೀಕರಣ ಪತ್ರಕ್ಕೆ ಸಹಿ ಹಾಕಬೇಕು ಎಂದಿದೆ. ಜತೆಗೆ ಪರಿಷ್ಕøತ ದೃಢೀಕರಣ ಪತ್ರವನ್ನೂ ಪ್ರಕಟಿಸಿದೆ. ಅರ್ಜಿ ಸಲ್ಲಿಸಲು ಅತ್ಯಂತ ಕಡಿಮೆ ಸಮಯಾವಕಾಶವಿದ್ದು, ಈಗ ಉದ್ಯೋಗ ದೃಢೀಕರಣ ಪತ್ರದ ಸ್ವರೂಪ ಬದಲಿಸಿರುವುದು ಅನೇಕ ಗೃಹ ಕಾರ್ಮಿಕರನ್ನು ಪರಿಹಾರ ಮೊತ್ತದಿಂದÀ ವಂಚಿತರನ್ನಾಗಿಸುತ್ತದೆ. ಹಳೆ ನಮೂನೆ ಯನ್ನೇ ಮತ್ತೆ ಚಾಲ್ತಿಗೆ ತರಬೇಕು ಎಂದು ಅವರು ಒತ್ತಾಯಿಸಿದರು. ಸೇವಾ ಸಿಂಧು ಪೆÇೀರ್ಟಲ್ ಬಳಸುವಾಗ ಸರ್ವರ್ ಸಮಸ್ಯೆ ಯಾಗುತ್ತಿದೆ. ಪರಿಣಾಮ ಅಪ್‍ಲೋಡ್ ತುಂಬಾ ತಡವಾಗುತ್ತಿದೆ. ಈ ತಾಂತ್ರಿಕ ದೋಷ ಕೂಡಲೇ ಸರಿಪಡಿಸಬೇಕು. ಅನೇಕ ಗೃಹಕಾರ್ಮಿಕರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಸ್ವೀಕೃತಿ ಪ್ರತಿ ಯನ್ನು ಮಾತ್ರ ಹೊಂದಿz್ದÁರೆ. ಪಡಿತರ ಚೀಟಿಗೆ ಬದಲಾಗಿ ಅದನ್ನೇ ಸ್ವೀಕರಿಸ ಬೇಕು. ಅಪ್‍ಲೋಡ್ ಸರಳಗೊಳಿಸ ಬೇಕು. ಅಂಬೇಡ್ಕರ್ ಸಹಾಯಹಸ್ತ ಯೋಜನೆಯಡಿ ಗೃಹ ಕಾರ್ಮಿಕರ ಕಾರ್ಡ್ ಇರುವವರಿಗೆ ಕೂಡಲೇ ಕೋವಿಡ್ ಪರಿಹಾರ ಧನ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.
ಎಐಯುಟಿಯುಸಿ ಜಿಲ್ಲಾ ಸಮಿತಿಯ ಸಂಧ್ಯಾ, ಸೀಮಾ, ಅಸಿಯಾ ಬೇಗಂ, ಟಿ.ಆರ್. ಸುನಿಲ್, ಗಣೇಶ್, ಗೃಹ ಕಾರ್ಮಿಕರಾದ ಗೌರಮ್ಮ, ಭಾಗ್ಯಮ್ಮ, ಪುಷ್ಪಲತಾ, ವಿಜಯ, ಶಾಂತಕುಮಾರಿ ಪಾಲ್ಗೊಂಡಿದ್ದರು.

Translate »