ಬೈಕ್‍ಗೆ ಟೆಂಪೊ ಡಿಕ್ಕಿ; ಸವಾರ ಸಾವು
ಹಾಸನ

ಬೈಕ್‍ಗೆ ಟೆಂಪೊ ಡಿಕ್ಕಿ; ಸವಾರ ಸಾವು

November 10, 2018

ಸಕಲೇಶಪುರ: ಬೈಕ್‍ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ತಾಲೂಕಿನ ಹಾನುಬಾಳು ರಸ್ತೆಯಲ್ಲಿ ಗುರುವಾರ ಸಂಭವಿಸಿದೆ.

ಬೇಲೂರಿನ ಹೊಸಪೇಟೆ ಬೀದಿ ನಿವಾಸಿ, ಕಾಳಮೆಣಸು, ಶುಂಠಿ ವ್ಯಾಪಾರಿ ಫರ್ಹಾನ್ ಅಹಮದ್ (35) ಅಪಘಾತದಲ್ಲಿ ಸಾವನ್ನಪ್ಪಿದವನಾಗಿದ್ದು, ಈಗ ವ್ಯಾಪಾರ ಮುಗಿಸಿಕೊಂಡು ಬೈಕ್‍ನಲ್ಲಿ (ಕೆಎ03 ಇಕೆ 9240) ತಾಲೂಕಿನ ಹಾನಬಾಳು ರಸ್ತೆ, ಹುರಡಿ ಶರತ್ ಕಾಫಿ ಎಸ್ಟೇಟ್ ಬಳಿ ತೆರಳುತ್ತಿದ್ದಾಗ 407 ಟೆಂಪೊ (ಕೆಎ 46-612) ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಫರ್ಹಾನ್ ಅಹಮದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »