ಮೈಸೂರಿಗರಿಗೆ ಪುರುಸೊತ್ತಿದೆ ಎಂದು  ಸುದೀರ್ಘ ನಾಟಕ ಪ್ರದರ್ಶಿಸಬೇಕಿತ್ತೇ?
ಮೈಸೂರು

ಮೈಸೂರಿಗರಿಗೆ ಪುರುಸೊತ್ತಿದೆ ಎಂದು ಸುದೀರ್ಘ ನಾಟಕ ಪ್ರದರ್ಶಿಸಬೇಕಿತ್ತೇ?

March 19, 2021

ಮೈಸೂರು, ಮಾ.18(ವೈಡಿಎಸ್)- ಖ್ಯಾತ ಕಾದಂಬರಿ ಕಾರ ಎಸ್.ಎಲ್.ಭೈರಪ್ಪ ಅವರ ಮೇರುಕೃತಿ ‘ಪರ್ವ’ ಅದಾಗಲೇ ನಾಟಕ ರೂಪ ತಳೆದು ಮೈಸೂರಿನ ರಂಗಾ ಯಣದಲ್ಲಿ ಪ್ರದರ್ಶನವನ್ನೂ ಕಂಡಿದೆ. ಪರ್ವ ನಾಟಕಕ್ಕೆ ಸಂಬಂಧಿಸಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮತ್ತು ರಂಗ ನಿರ್ದೇಶಕ ಎಂ.ಎಸ್.ಸತ್ಯು ಅವರು ಪರಸ್ಪರ ಟೀಕೆ, ವಿಮರ್ಶೆಗೆ ಕಲಾಮಂದಿರದ ಕಿರುರಂಗ ಮಂದಿರ ವೇದಿಕೆಯಾಗಿತ್ತು.

`ಅಭಿಯಂತರರು-ಮೈಸೂರು’ ಸಂಸ್ಥೆ ಗುರುವಾರ ರಂಗಾ ಯಣದಲ್ಲಿ ಆಯೋಜಿಸಿದ್ದ `ರಾಷ್ಟ್ರೀಯ ರಂಗೋತ್ಸವ’ವನ್ನು ಉದ್ಘಾಟಿಸಿದ ಚಿತ್ರ ನಿರ್ದೇಶಕ ಸತ್ಯು ಮಾತನಾಡಿ, `8 ಗಂಟೆಗಳಷ್ಟು ದೀರ್ಘ ಕಾಲ ಒಂದೆಡೆ ಕುಳಿತು ನಾಟಕ ವೀಕ್ಷಿಸಲು ಮೈಸೂರಿಗರಿಗೆ ಪುರುಸೊತ್ತಿದೆ ಎಂದು ಸುದೀರ್ಘ ನಾಟಕ ಮಾಡಿ, ಮಧ್ಯೆ ವಿರಾಮದಲ್ಲಿ ಊಟವನ್ನೂ ಹಾಕಿಸಿ ದ್ದಾರೆ. ನಾಟಕ ಅಷ್ಟು ಸುದೀರ್ಘವಾಗಿ ಇರಬೇಕಿಲ್ಲ. ಬದಲಾಗಿ ಏನು ಹೇಳಬೇಕು ಅನ್ನೋದನ್ನು ಸೂಕ್ಷ್ಮವಾಗಿ, ಸೀಮಿತ ಚೌಕಟ್ಟಿನಲ್ಲಿ ಹೇಳಬೇಕು’ ಎಂದು ಅಭಿಪ್ರಾಯಪಟ್ಟರು.

‘ನಾಟಕ ಪ್ರದರ್ಶಿಸಿರುವುದನ್ನು ಪ್ರಶ್ನಿಸುವುದಿಲ್ಲ. ಆದರೆ ಸಮಯದ ಮಿತಿಯಿಟ್ಟು ಕೆಲಸ ಮಾಡಿದರೆ ಅದರಿಂದಾ ಗುವ ಪರಿಣಾಮ ಹೆಚ್ಚು. ಅಧಿಕ ಹಣ ವ್ಯಯಿಸಿ ನಾಟಕ ಪ್ರದರ್ಶಿಸುವುದರಿಂದ ಹಣ, ಜನರ ಸಮಯ ಎರಡೂ ವ್ಯರ್ಥ. ಆರ್‍ಎಸ್‍ಎಸ್ ಅಥವಾ ಬಿಜೆಪಿಯವರು ಹೆಚ್ಚು ಹಣ ಖರ್ಚು ಮಾಡಿ `ಪರ್ವ’ ನಾಟಕವನ್ನು ನಮ್ಮ ಮುಂದೆ ಪರ್ವತವಾಗಿ ನಿಲ್ಲಿಸಿದ್ದಾರೆ. ಇದೆಲ್ಲಾ ಬೇಕಿತ್ತಾ? ಎಂದು ಪ್ರಶ್ನಿಸಿದರು. ಸತ್ಯು ಅವರ ಹೇಳಿಕೆಗೆ ತಿರುಗೇಟು ನೀಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ‘ಪರ್ವ’ ಎಸ್.ಎಲ್.ಭೈರಪ್ಪ ಅವರ ಬಹು ಚರ್ಚಿತ ಕಾದಂ ಬರಿ. `ಪರ್ವ’ ನಾಟಕವನ್ನು ಆರ್‍ಎಸ್‍ಎಸ್, ಬಿಜೆಪಿ ಯವರು ಮಾಡಿದ್ದಾರೆಂಬ ಹೇಳಿಕೆ ಖಂಡನೀಯ ಎಂದರು.

48 ವರ್ಷಗಳ ಹಿಂದೆ ಎಸ್.ಎಲ್.ಭೈರಪ್ಪ ಅವರು ಬರೆದ ಪ್ರಗತಿಪರ ಕಾದಂಬರಿ ಇದು. ಇದನ್ನು ಸತ್ಯು ಅವರು ಓದಿ ದ್ದಾರೋ ಇಲ್ಲವೋ ಗೊತ್ತಿಲ್ಲ. ಈ ನಾಟಕದ ಬಗ್ಗೆ ಪ್ರತಿಭಟಿಸು ವುದಾದರೆ ಬಿಜೆಪಿಯವರು ಪ್ರತಿಭಟಿಸಬೇಕಿತ್ತು ಎಂದರು.

‘ಏಳೂವರೆ ಗಂಟೆಯ ನಾಟಕ ಬೇಕೇ, ಬೇಡವೇ ಎನ್ನು ವುದನ್ನು ವೀಕ್ಷಕರೇ ನಿರ್ಧರಿಸುತ್ತಾರೆ. ನಾನು ಅಥವಾ ನೀವು ನಿರ್ಧಾರ ಮಾಡಬೇಕಿಲ್ಲ. ಜನರು ಅಷ್ಟು ಸಮಯ ಕುಳಿತು ನಾಟಕ ವೀಕ್ಷಿಸಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಸಂಶೋಧನೆ ನಡೆಸಿ ಎಂದು ಸತ್ಯು ಅವರನ್ನು ಕೇಳಿಕೊಳ್ಳುತ್ತೇನೆ. ಏಳೂವರೆ ಗಂಟೆಯ ನಾಟಕ ಪ್ರದ ರ್ಶನ ಇರುವಾಗ ಊಟದ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ ಎಂದು ಸುದೀರ್ಘ ವಿವರಣೆ ನೀಡಿದರು.

ಇಂಜಿನಿಯರಿಂಗ್ ವೃತ್ತಿಯವರಿಗೆ ಬಿಡುವೇ ಇರುವು ದಿಲ್ಲ. ಆದರೂ `ಅಭಿಯಂತರರು’ ಸಂಸ್ಥೆಯ ಸುರೇಶ್ ಬಾಬು ಅವರು ಇಂಜಿನಿಯರ್‍ಗಳ ತಂಡ ಕಟ್ಟಿ ರಂಗ ಭೂಮಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಅಡ್ಡಂಡ ಕಾರ್ಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ ವರ್ಷ ರಾಷ್ಟ್ರೀಯ ರಂಗ ಉತ್ಸವದಲ್ಲಿ ಉತ್ತಮ ನಾಟಕಗಳನ್ನು ಪ್ರದರ್ಶಿಸಲು ಸಿದ್ಧತೆ ಮಾಡಿಕೊಳ್ಳ ಲಾಗಿತ್ತು. ಆದರೆ, ಕೊರೊನಾ ಹಾವಳಿಯಿಂದಾಗಿ ಕೆಲವು ನಾಟಕಗಳು ರದ್ದುಗೊಂಡಿದ್ದವು. ರಂಗಭೂಮಿ ಬೆಳೆಸು ವಲ್ಲಿ `ಅಭಿಯಂತರರು’ ಸಂಸ್ಥೆಗೆ ಬೆಂಬಲ ನೀಡುವು ದಾಗಿ ತಿಳಿಸಿದರು. ಅಭಿಯಂತರರು ಮೈಸೂರು ಸಂಸ್ಥೆ ಅಧ್ಯಕ್ಷ ಸುರೇಶ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ ಇದ್ದರು.

Translate »