ಮೈಸೂರು,ಜು.22-ಪರಿಸರಪ್ರೇಮಿ ಹಾಗೂ ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ ಕುಮಾರ್ ಅವರ 61ನೇ ಹುಟ್ಟುಹಬ್ಬದ ಅಂಗವಾಗಿ ಪರಿಸರ ಸ್ನೇಹಿ ತಂಡದಿಂದ ಜ್ಯೋತಿ ನಗರದಲ್ಲಿರುವ ಪೆÇಲೀಸ್ ಕ್ವಾಟ್ರ್ರಸ್‍ನ ಉದ್ಯಾನವನದಲ್ಲಿ `ಹಸಿರು ಉಸಿರು’ ಕಾರ್ಯ ಕ್ರಮದಡಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಗೌರವ ಸಲ್ಲಿಸಲಾಯಿತು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದಲ್ಲಿ ಯುವಕರು ವಿದ್ಯಾವಂತರಾಗಬೇಕು. ಸಸಿಗಳು ಮರಗಳಾಗಿ ಬೆಳೆದು ನಿಂತರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ಈ ಸಂದೇಶ ವನ್ನಿಟ್ಟುಕೊಂಡು ಯುವಕರ ತಂಡದೊಂದಿಗೆ ಪ್ರತಿಭಾನುವಾರ ಸಸಿ ನೆಡುವ ಮೂಲಕ ಹಸಿರು ಭಾನುವಾರ ಸ್ಥಾಪಿಸಿದವರು ಕೇಂದ್ರದ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ಎಂದರು. ಎನ್.ಆರ್.ಯುವ ಮೋರ್ಚಾ ಅಧ್ಯಕ್ಷ ಡಿ.ಲೋಹಿತ್, ಮೈಸೂರು ನಗರ ಎಸ್ಸಿ ಮೋರ್ಚಾ ಕಾರ್ಯದರ್ಶಿ ಕೀರ್ತಿಕುಮಾರ್, ಮುಖಂಡರಾದ ಕಿರಣ್ ಕುಮಾರ್ ಗೌಡ, ನವೀನ್ ಶೆಟ್ಟಿ, ರಾಜು ಹಾಗೂ ತಂಡದ ಸದಸ್ಯರಾದ ದಿಲೀಪ್, ಕಿಶೋರ್, ನಾಗ ರಾಜು, ರವಿಕುಮಾರ್, ವಿನೋದ್‍ಕುಮಾರ್, ಹರ್ಷ, ಜಯಂತ್ ಭಾಗವಹಿಸಿದ್ದರು.