ಮೈಸೂರು,ಜು.22(ಪಿಎಂ)-ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಂಬೈ ನಿವಾಸ `ರಾಜಗೃಹ’ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾ ಯಿಸಿ ಸಮತಾ ಸೈನಿಕ ದಳದ ಮೈಸೂರು ನಗರ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಮಹಾರಾಷ್ಟ್ರ ಸರ್ಕಾರದ ಭದ್ರತಾ ವೈಫ ಲ್ಯವೇ ಈ ದಾಳಿಗೆ ಕಾರಣ. `ರಾಜಗೃಹ’ ವನ್ನು `ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸ ಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿ ದರು. ಕೊರೊನಾ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಗಳ ಅದೆಷ್ಟೊ ಸಿಬ್ಬಂದಿ ಕೆಲಸ ಕಳೆದು ಕೊಂಡಿದ್ದು, ಜೀವನ ಸಾಗಿಸಲು ಪರದಾ ಡುತ್ತಿದ್ದಾರೆ. ಇವರಿಗೆ ಸರ್ಕಾರ ಸಹಾಯ ಮಾಡಬೇಕು. ಮಾಸಿಕ 5 ಸಾವಿರ ರೂ. ನಿರುದ್ಯೋಗ ಭತ್ಯೆ ಘೋಷಿಸÀಬೇಕು ಎಂದು ಆಗ್ರಹಿಸಿದರು.
ಶಾಲೆಗಳಲ್ಲಿ ಯಾವುದೇ ಕಾರಣಕ್ಕೂ ಆನ್‍ಲೈನ್ ಶಿಕ್ಷಣ ಜಾರಿಗೊಳಿಸಬಾರದು. ಇದರಿಂದ ಗ್ರಾಮೀಣ ಮಕ್ಕಳಿಗೆ ಅನಾನು ಕೂಲವೇ ಹೆಚ್ಚು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಹಾಗೂ ನೆಟ್‍ವರ್ಕ್ ಸಮಸ್ಯೆ ಇದೆ. ಹೀಗಾಗಿ ಆನ್‍ಲೈನ್ ಶಿಕ್ಷಣ ಪದ್ಧತಿ ಯಿಂದ ಹಿಂದೆ ಸರಿಯಬೇಕು ಎಂದರು.
ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಯಾದ ಮಾಸಿಕ 12 ಸಾವಿರ ರೂ. ಗೌರವಧನ ನಿಗದಿಪಡಿಸಲು ಸರ್ಕಾರ ಕೂಡಲೇ ಕ್ರಮ ವಹಿಸಬೇಕು ಎಂದು ಒತ್ತಾ ಯಿಸಿದರು. ಜಿಲ್ಲಾಧ್ಯಕ್ಷ ಡಿ.ಶಿವಮಾದು, ನಗರ ಘಟಕ ಅಧ್ಯಕ್ಷ ಎನ್.ವೆಂಕಟೇಶ್, ಉಪಾಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯ ದರ್ಶಿ ಎಸ್.ಅಮೃತ್, ಕಾರ್ಯದರ್ಶಿ ಎಸ್. ವೆಂಕಟರಮಣ, ಖಜಾಂಚಿ ಆರ್.ಕುಮಾರ ಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.