ತರಗತಿ ಪುನಾರಂಭ, ಪರೀಕ್ಷೆ ನಡೆಸುವ ಸಂಬಂಧ ಮೈಸೂರು ವಿವಿಯ ತರಾತುರಿ ನಿರ್ಧಾರಕ್ಕೆ ಎಐಡಿಎಸ್‍ಓ ವಿರೋಧ
ಮೈಸೂರು

ತರಗತಿ ಪುನಾರಂಭ, ಪರೀಕ್ಷೆ ನಡೆಸುವ ಸಂಬಂಧ ಮೈಸೂರು ವಿವಿಯ ತರಾತುರಿ ನಿರ್ಧಾರಕ್ಕೆ ಎಐಡಿಎಸ್‍ಓ ವಿರೋಧ

July 23, 2020

ಮೈಸೂರು,ಜು.22-ದೇಶದಲ್ಲಿ ಕೊರೊನಾದ ಭೀಕರತೆ ಹೆಚ್ಚುತ್ತಿದ್ದು, ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರು ತ್ತಲೇ ಇವೆ. ಇದಕ್ಕೆ ಕರ್ನಾಟಕವು ಹೊರತಾಗಿಲ್ಲ. ದಿನೇ ದಿನೆ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುವುದರ ಜೊತೆಗೆ ಸೊಂಕಿತರ ಸಾವಿನ ಪ್ರಮಾಣವು ಹೆಚ್ಚಾಗುತ್ತಲೇ ಇದೆ. ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿಯೂ ಸೂಕ್ತ ಚಿಕಿತ್ಸೆ, ಹಾಸಿಗೆಗಳು ಕೂಡ ದೊರೆಯದಂತಹ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮೈಸೂರು ವಿವಿ ತರಾತುರಿಯಲ್ಲಿ ತರಗತಿ ಪುನರಾರಂಭ ಮತ್ತು ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವುದು ಸೂಕ್ತವಲ್ಲ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾಧ್ಯಕ್ಷ ಬಿ.ಎನ್.ಆಕಾಶ್‍ಕುಮಾರ್, ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಆಕ್ಷೇಪಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೊನಾದಿಂದ ಶೈಕ್ಷಣಿಕ ವಲಯವೂ ಸಂಕಷ್ಟಕ್ಕೆ ಸಿಲು ಕಿದ್ದು, ಕೊರೊನಾ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ, ವಿದ್ಯಾರ್ಥಿಗಳ ಪ್ರಬಲ ಆಗ್ರಹಕ್ಕೆ ಮಣಿದು ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ವಿದ್ಯಾರ್ಥಿಗಳ ಅಂತಿಮ ವರ್ಷದ ಪರೀಕ್ಷೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವರ್ಷಗಳ ಪರೀಕ್ಷೆಗಳನ್ನು ರದ್ದುಪಡಿಸಿದೆ. ಮತ್ತು ಅಂತಿಮ ವರ್ಷದ ಪರೀಕ್ಷೆಗÀಳನ್ನು ನಡೆಸುವಂತೆ ನಿರ್ದೇಶಿಸಿದೆ. ಇದು ಸಮಂಜಸವಾದ ನಿರ್ಧಾರವಲ್ಲ. ಅಂತಿಮ ವರ್ಷದ ಪರೀಕ್ಷೆಗಳನ್ನು ಕೂಡ ರದ್ದುಪಡಿಸುವಂತೆ ಹಲವು ಶಿಕ್ಷಣ ತಜ್ಞರು, ಪೋಷಕರು, ವಿದ್ಯಾರ್ಥಿಗಳು ಆಗ್ರಹಪಡಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಮೈಸೂರು ನಗರದ ಬಹು ಪಾಲು ಬಡಾವಣೆಗಳು ಸೇರಿದಂತೆ, ಹಲವು ಪ್ರದೇಶ ಗಳು, ಹಳ್ಳಿಗಳು ಸೀಲ್‍ಡೌನ್ ಆಗಿವೆ. ಹಾಗಾಗಿ ಅವರು ತಮ್ಮ ಕಾಲೇಜುಗಳಿಗೆ ಬರುವುದು ಇನ್ನೊಂದೆಡೆ ಬಹು ಪಾಲು ವಸತಿನಿಲಯಗಳನ್ನು, ಕೋವಿಡ್ ಕೇರ್ ಸೆಂಟರ್ ಗಳಾಗಿ ಬಳಸಲಾಗುತ್ತಿದೆ, ಮತ್ತು ಬಳಸುವ ಸಲುವಾಗಿ ಕಾಯ್ದಿರಿಸಲಾಗಿದೆ. ಈ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ವಾಸ್ತವ್ಯದ ಸಮಸ್ಯೆ ಮತ್ತು ಸಾರ್ವಜನಿಕ ಸ್ಥಳ, ತರಗತಿ ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯು ಉದ್ಭವಿಸುತ್ತದೆ. ಈ ಸಂದರ್ಭದಲ್ಲಿ ತರಗತಿಗಳನ್ನು ನಡೆಸುವುದಾಗಲೀ, ಪರೀಕ್ಷೆಗಳನ್ನು ನಡೆಸುವುದಾಗಲೀ ಅಪಾಯ. ಈ ಹಿನ್ನೆಲೆಯಲ್ಲಿ, ವಿವಿಯು, ವಿದ್ಯಾರ್ಥಿಗಳು, ಉಪನ್ಯಾಸ ಕರು, ಪೋಷಕರುಗಳ ಹಿತದೃಷ್ಟಿಯಿಂದ ತನ್ನ ಸುತ್ತೋಲೆ ಯನ್ನು ವಾಪಸ್ ಪಡೆಯಬೇಕೆಂದು ಎಐಡಿಎಸ್‍ಒ ಮೈಸೂರು ಜಿಲ್ಲಾ ಸಮಿತಿ ಒತ್ತಾಯಿಸಿದೆ.

Translate »