ಮೈಸೂರು, ಜು. 21(ಆರ್‍ಕೆ)-ಗಾಳಿ-ಬೆಳಕು ಹಾಗೂ ಇನ್ನಿತರ ಮೂಲ ಸೌಕರ್ಯ ಗಳ ಕೊರತೆಯಿಂದಾಗಿ ಮೈಸೂರಿನ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣ ದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡು ವುದನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ.
ಒಳಾಂಗಣ ಕ್ರೀಡಾಂಗಣ ವಿಶಾಲವಾಗಿದ್ದು, ಡಾರ್ಮೆಟ್ರಿ ಸೇರಿದಂತೆ ಒಟ್ಟು ಸುಮಾರು 1,000 ಹಾಸಿಗೆಗಳನ್ನು ಹಾಕಲು ಅವಕಾಶ ವಿದೆಯಾದರೂ, ಕಟ್ಟಡದಲ್ಲಿ ಕಿಟಕಿಗಳಿಲ್ಲದಿರು ವುದರಿಂದ ಸಾಕಷ್ಟು ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲ. ಏರ್ ಬ್ಲೋವರ್ ಇದೆಯಾದರೂ ಹವಾ ನಿಯಂತ್ರಿತ ಉಪಕರಣಗಳಿಲ್ಲ.
ಅಗತ್ಯ ಗಾಳಿ-ಬೆಳಕಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಕೊರೊನಾ ವೈರಸ್ ಸೋಂಕಿತರನ್ನು ಒಂದೆಡೆ ಹಾಲ್‍ನಲ್ಲಿ ಇರಿಸಿ ದರೆ ಉಸಿರು ಕಟ್ಟಿದ ವಾತಾವರಣ ಉಂಟಾಗಿ ಅಲ್ಲಿರುವವರಿಗೆ ತೊಂದರೆಯಾಗಬಹು ದೆಂಬುದನ್ನು ಗಂಭೀರವಾಗಿ ಪರಿಗಣಿಸಿ ರುವ ಮೈಸೂರು ಜಿಲ್ಲಾಡಳಿತವು ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡುವ ಪ್ರಸ್ತಾಪವನ್ನು ಸದ್ಯಕ್ಕೆ ಕೈಬಿಟ್ಟಿದೆ.
ಹೆಚ್ಚುವರಿ ಶೌಚಾಲಯ, ಸ್ನಾನ ಗೃಹ, ಬಿಸಿ ನೀರಿನ ಸೌಲಭ್ಯವನ್ನು ಒದಗಿಸಬೇಕಾ ಗಿರುವುದರಿಂದ ಸದ್ಯಕ್ಕೆ ಈ ಪ್ರಸ್ತಾಪವನ್ನು ಕೈಬಿಡಲಾಗಿದ್ದು, ಬದಲಾಗಿ ಎಲ್ಲೆಲ್ಲಿ ಮೂಲ ಸೌಲಭ್ಯಗಳಿವೆಯೋ ಅಂತಹ ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣ ದಲ್ಲಿ 800 ಮಂದಿಗೆ ಆರೈಕೆ ಮಾಡಲುದ್ದೇ ಶಿಸಿ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ ನೇತೃತ್ವದಲ್ಲಿ ಸೌಲಭ್ಯ ಒದಗಿಸಲು ಪ್ರಕ್ರಿಯೆ ಆರಂಭವಾಗಿತ್ತು. ಅದಕ್ಕಾಗಿ ಒಳಾಂಗಣ ದಲ್ಲಿದ್ದ ಕ್ರೀಡಾ ಉಪಕರಣಗಳನ್ನು ತೆರವು ಗೊಳಿಸಲಾಗಿತ್ತು. ತದನಂತರ ಅಲ್ಲಿ ವೆಂಟಿ ಲೇಷನ್ ವ್ಯವಸ್ಥೆ ಇಲ್ಲದಿರುವುದರಿಂದ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂ ಗಣದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸಾ ವ್ಯವಸ್ಥೆ ಮಾಡಲು ತೊಂದರೆಯಾಗುತ್ತದೆ ಎಂದು ತಿಳಿದ ನಂತರ ಕೋವಿಡ್ ಕೇರ್ ಸೆಂಟರ್ ಮಾಡುವ ಪ್ರಸ್ತಾಪವನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು `ಮೈಸೂರು ಮಿತ್ರ’ನಿಗೆ ಪ್ರತಿ ಕ್ರಿಯೆ ನೀಡಿರುವ ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ, ವೆಂಟಿಲೇಷನ್ ಸಮಸ್ಯೆ ಯಿಂದಾಗಿ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳು ಇನ್ನೂ ನಿರ್ದೇಶನ ನೀಡಿಲ್ಲ ಎಂದು ತಿಳಿಸಿದರು.