ಪಾರ್ಥೇನಿಯಂ ತೆರವಿಗೆ ಶಾರದಾದೇವಿ ನಗರ ನಿವಾಸಿಗಳ ಮನವಿ
ಮೈಸೂರು

ಪಾರ್ಥೇನಿಯಂ ತೆರವಿಗೆ ಶಾರದಾದೇವಿ ನಗರ ನಿವಾಸಿಗಳ ಮನವಿ

June 28, 2020

ಮೈಸೂರು, ಜೂ.27(ಎಸ್‍ಪಿಎನ್)- ಮಳೆಗಾಲ ಆರಂಭವಾಗಿರುವುದರಿಂದ ಖಾಲಿ ನಿವೇಶನ, ರಸ್ತೆಬದಿಯಲ್ಲಿ ಪಾರ್ಥೇ ನಿಯಂ ಮತ್ತಿತರೆ ಗಿಡಗಂಟಿಗಳು ಬೆಳೆ ಯುತ್ತಿವೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಡೆಂಗೆ ಜ್ವರ ಕಾಣಿಸಿ ಕೊಳ್ಳುತ್ತಿದೆ ಎಂದು ಶಾರದಾದೇವಿನಗರ 6ನೇ ಹಂತ ಬಡಾವಣೆಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಶಾರದಾದೇವಿ ನಗರದ ಬ್ಯಾಂಕರ್ಸ್ ರಿಕ್ರಿಯೇಷನ್ ಕ್ಲಬ್ ಹಿಂಭಾ ಗದ 2ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆಯ ಹೆಚ್‍ಎಸ್‍ಆರ್ ಪ್ರಾವಿಜನ್ ಸ್ಟೋರ್ ಮುಂಭಾಗದ ಖಾಲಿ ನಿವೇಶನದಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಇದರಿಂದ ಇಲ್ಲಿನ ಇಬ್ಬರು ನಿವಾಸಿ ಗಳಿಗೆ ಡೆಂಗೆ ಜ್ವರ ಕಾಣಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಇತ್ತೀಚೆಗೆ ಬಿಡುಗಡೆ ಹೊಂದಿದ್ದಾರೆ. ಅಲ್ಲದೆ, ಕೊರೊನಾ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಚಿಕ್ಕ ಮಕ್ಕಳು ಮನೆ ಹೊರಗೆ ಆಟವಾಡಲು ರಸ್ತೆಗಿಳಿಯುತ್ತಾರೆ. ಈ ವೇಳೆ ಗಿಡಗಂಟಿ ಇರುವ ನಿವೇಶನಕ್ಕೆ ಹೋಗಿ ಬಂದರೆ ಕಾಯಿಲೆ ಕಾಣಿಸಿಕೊಳ್ಳುವ ಅಪಾಯವಿದೆ ಎಂದು ಇಲ್ಲಿನ ನಿವಾಸಿ ಕೆ.ಶಿವಕುಮಾರ್ ತಿಳಿಸಿದ್ದಾರೆ. ಶಾರದಾದೇವಿ ನಗರದ ಬಡಾವಣೆಯಲ್ಲಿನ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಪಾರ್ಥೇನಿಯಂ ಮತ್ತಿತರೆ ಗಿಡಗಂಟಿಗಳನ್ನು ತೆರವುಗೊಳಿಸಬೇಕು ಎಂದು ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Translate »