ನಾಳೆ ಜೆಎಸ್‍ಎಸ್ ಆಸ್ಪತ್ರೆ ಕೋವಿಡ್-19 ಪರೀಕ್ಷಾ ಕೇಂದ್ರಕ್ಕೆ ಆನ್‍ಲೈನ್ ಮೂಲಕ ಸಿಎಂ ಚಾಲನೆ
ಮೈಸೂರು

ನಾಳೆ ಜೆಎಸ್‍ಎಸ್ ಆಸ್ಪತ್ರೆ ಕೋವಿಡ್-19 ಪರೀಕ್ಷಾ ಕೇಂದ್ರಕ್ಕೆ ಆನ್‍ಲೈನ್ ಮೂಲಕ ಸಿಎಂ ಚಾಲನೆ

June 28, 2020

ಮೈಸೂರು, ಜೂ.27(ಪಿಎಂ)- ಜೆಎಸ್‍ಎಸ್ ವೈದ್ಯಕೀಯ ಕಾಲೇಜು ವತಿಯಿಂದ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಿರುವ `ಹೆಚ್1ಎನ್1’ ಹಾಗೂ `ಕೋವಿಡ್-19’ ಪರೀಕ್ಷಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ಜೂ.29ರಂದು ಹಮ್ಮಿಕೊಳ್ಳ ಲಾಗಿದೆ. ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂದು ಬೆಳಗ್ಗೆ 10.30ಕ್ಕೆ ಆನ್‍ಲೈನ್ ಮೂಲಕ ಉದ್ಘಾಟಿಸಲಿ ದ್ದಾರೆ. ಕೋವಿಡ್-19 ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಎನ್‍ಎಬಿಎಲ್ ಮತ್ತು ಐಸಿಎಂಆರ್‍ಗಳ ಅನುಮೋದನೆ ಪಡೆಯಲಾಗಿದೆ. ಈ ಪ್ರಯೋಗಾಲಯ ಜ್ವರ, ಕೆಮ್ಮು, ನೆಗಡಿ ಇತ್ಯಾದಿ ರೋಗ ಲಕ್ಷಣ ಕಂಡುಬಂದರೆ ಸಾರ್ವಜನಿಕರು ಪರೀಕ್ಷೆ ಮಾಡಿಸಿಕೊಳ್ಳಲು ಸಹಕಾರಿಯಾಗಲಿದೆ. ಕಾರ್ಯಕ್ರಮದಲ್ಲಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿ ಮತ್ತಿತರರು ಪಾಲ್ಗೊ ಳ್ಳಲಿದ್ದಾರೆ. https://www.youtube.com/channel/ ಲಿಂಕ್ ಮೂಲಕ ಯೂಟ್ಯೂಬ್ ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Translate »