ಇಬ್ಬರು ಅಂತರ ರಾಜ್ಯ ಕಳ್ಳರ ಬಂಧನ 8 ಲಕ್ಷ ರೂ. ಬೆಲೆಯ ದ್ವಿಚಕ್ರ ವಾಹನ ವಶ
ಮೈಸೂರು

ಇಬ್ಬರು ಅಂತರ ರಾಜ್ಯ ಕಳ್ಳರ ಬಂಧನ 8 ಲಕ್ಷ ರೂ. ಬೆಲೆಯ ದ್ವಿಚಕ್ರ ವಾಹನ ವಶ

July 20, 2018

ಮೈಸೂರು:  ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಎನ್.ಆರ್.ಠಾಣೆ ಪೊಲೀಸರು 8 ಲಕ್ಷ ರೂ. ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ವೈನಾಡಿನ ಮಾನಂದವಾಡಿ ನಿವಾಸಿಗಳಾದ ಸರ್ಫುದ್ದೀನ್(19) ಹಾಗೂ ವಿಷ್ಣು(19) ಬಂಧಿತರು. ಅವರಿಂದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳವು ಮಾಡಿದ್ದ ವಾಹನಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಖದೀಮರು ಸಿಕ್ಕಿ ಬಿದ್ದರು.

ಮೈಸೂರಿನ ಮಂಡಿ ಮೊಹಲ್ಲಾ ಲಷ್ಕರ ಮೊಹಲ್ಲಾ ಹಾಗೂ ಸುತ್ತಮುತ್ತಲಲ್ಲಿ ಬೈಕ್‍ಗಳನ್ನು ಕಳವು ಮಾಡಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿತು. ಪ್ರಕರಣ ದಾಖಲಿಸಿಕೊಂಡಿರುವ ಎನ್.ಆರ್.ಠಾಣೆ ಇನ್‍ಸ್ಪೆಕ್ಟರ್ ಅಶೋಕಕುಮಾರ್ ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಸಬ್‍ಇನ್‍ಸ್ಪೆಕ್ಟರ್ ಅಶೋಕ್‍ಕುಮಾರ್, ಹೆಡ್‍ಕಾನ್‍ಸ್ಟೇಬಲ್ ರಮೇಶ್, ಕಾನ್‍ಸ್ಟೇಬಲ್‍ಗಳಾದ ಮಂಜುನಾಥ್, ಕೃಷ್ಣ, ಮಹದೇವು ಹಾಗೂ ರಮೇಶ್ ಅವರು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

Translate »