ಬ್ಲಾಕ್ ಮೇಲ್ ತಂತ್ರದ ಲಾರಿ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ ಮೈಸೂರು ಡಿಸ್ಟ್ರಿಕ್ಟ್ ಟ್ರಕ್ಕರ್ಸ್ ಅಸೋಷಿಯೇಷನ್ ಸ್ಪಷ್ಟನೆ
ಮೈಸೂರು

ಬ್ಲಾಕ್ ಮೇಲ್ ತಂತ್ರದ ಲಾರಿ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ ಮೈಸೂರು ಡಿಸ್ಟ್ರಿಕ್ಟ್ ಟ್ರಕ್ಕರ್ಸ್ ಅಸೋಷಿಯೇಷನ್ ಸ್ಪಷ್ಟನೆ

July 20, 2018

ಮೈಸೂರು:  ಅಖಿಲ ಭಾರತ ಮೋಟಾರ್ ಟ್ರಾನ್ಸ್‍ಪೋರ್ಟ್ ಕಾಂಗ್ರೆಸ್ ಜು.20ರ ಶುಕ್ರವಾರದಿಂದ ದೇಶಾದ್ಯಂತ ಕರೆ ನೀಡಿರುವ ಅನಿರ್ಧಿಷ್ಟ ಅವಧಿಯ ಲಾರಿ ಮುಷ್ಕರಕ್ಕೆ ನಮ್ಮ ಬೆಂಬಲ ಇಲ್ಲ. ನಮ್ಮ ಲಾರಿಗಳು ಎಂದಿನಂತೆ ಸಂಚರಿಸುತ್ತವೆ ಎಂದು ಮೈಸೂರು ಡಿಸ್ಟ್ರಿಕ್ ಟ್ರಕ್ಕರ್ಸ್ ಅಸೋಸಿಯೇಷನ್ ತಿಳಿಸಿದೆ.

ಸಂಘದ ಮೈಸೂರು ಜಿಲ್ಲಾಧ್ಯಕ್ಷ ಎನ್.ಶ್ರೀನಿವಾಸರಾವ್ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಜೊತೆಗೆ ಬೆಂಗಳೂರು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್, ನವದೆಹಲಿ ಆಲ್ ಇಂಡಿಯನ್ ಕಾನ್ಫಿಡರೇಷನ್ ಆಫ್ ಗೂಡ್ಸ್ ವೆಹಿಕಲ್ಸ್ ಓನರ್ಸ್ ಅಸೋಸಿಯೇಷನ್‍ಗಳು ಕೂಡ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ರಾಷ್ಟ್ರೀಯ ಸಂಘಟನೆಯಾದ ಆಲ್ ಇಂಡಿಯನ್ ಕಾನ್ಫಿಡರೇಷನ್ ಆಫ್ ಗೂಡ್ಸ್ ವೆಹಿಕಲ್ಸ್ ಓನರ್ಸ್ ಅಸೋಸಿಯೇಷನ್ ಕಳೆದ ಜೂ.18ರಿಂದ ಕರೆದಿದ್ದ ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಲಾರಿ ಮಾಲೀಕರಿಗೆ ಕೇಂದ್ರ ಸರ್ಕಾರದಿಂದ 3ನೇ ಪಾರ್ಟಿ ವಿಮಾ ಪ್ರೀಮಿಯಂ ಹೆಚ್ಚಿಸಿರುವ ಬಾಬ್ತನ್ನು ಹಿಂತಿರುಗಿಸಲು ಮತ್ತು ಕಡಿವಾಣ ಹಾಕಲು ಈಗಾಗಲೇ ನಿರ್ಧಾರವಾಗಿದೆ. ಹೆಚ್ಚಿಸಿರುವ ಡೀಸೆಲ್ ಬೆಲೆಗೆ ಸಂಬಂಧ ಪಟ್ಟಂತೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ಒಪ್ಪಿದ್ದಾರೆ. ಈ ದೃಷ್ಟ್ಟಿಯಿಂದ ನಾವು ಯಾವುದೇ ಮುಷ್ಕರಕ್ಕೆ ಬೆಂಬಲ ನೀಡುವುದಿಲ್ಲ, ಭಾಗವಹಿಸು ವುದೂ ಇಲ್ಲ. ನಮ್ಮ ಲಾರಿಗಳು ಓಡಾಡಲು ಪೊಲೀಸರ ರಕ್ಷಣೆ ಕೇಳಿದ್ದೇವೆ. ಲಾರಿ ನಿಲ್ಲಿಸುವ, ತಡೆಯುವ ಅಥವಾ ವಾಹನದ ಗಾಜು ಒಡೆಯುವ ಕೃತ್ಯಗಳು ನಡೆಯ ದಂತೆ ನಮಗೆ ಭದ್ರತೆ ಒದಗಿಸುವಂತೆ ಅವರಲ್ಲಿ ಮನವಿ ಮಾಡಿದ್ದೇವೆ ಎಂದರು.

ಲಿಮಿಟೆಡ್ ಕಂಪನಿಯವರು ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಈ ಮುಷ್ಕರ ನಡೆಸುತ್ತಿದ್ದಾರೆ. ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುವ ಮುಷ್ಕರವಿದು. ಈ ಮುಷ್ಕರದಿಂದ ಬಡ ಲಾರಿ ಚಾಲಕರು, ಸಹಾಯಕರು, ಕೂಲಿ ಕಾರ್ಮಿಕರು ತಮ್ಮ ಕುಟುಂಬಗಳನ್ನು ನಿವರ್ಹಿಸುವುದಾದರು ಹೇಗೆ? ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿ ಯಲ್ಲಿ ಮೈಸೂರು ಡಿಸ್ಟ್ರಿಕ್ಟ್ ಟ್ರಕ್ಕರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಶ್ರೀಕಂಠಸ್ವಾಮಿ, ಪದಾಧಿಕಾರಿಗಳಾದ ವಿ.ಮಹೇಶ್, ಅರವಿಂದ್, ಶ್ರೇಯಸ್ ಉಪಸ್ಥಿತರಿದ್ದರು.

Translate »